Site icon Vistara News

ಧೂಳು ಹಿಡಿದ ಲೋಕಾಯುಕ್ತ ಕಚೇರಿಯಲ್ಲಿ ಶುರುವಾಯ್ತು ಸ್ವಚ್ಛತಾ ಕಾರ್ಯ, ಬಾಕಿ ಉಳಿದ ದೂರೆಷ್ಟು?

Lokayukta cleaning

ಬೆಂಗಳೂರು: ಲೋಕಾಯುಕ್ತದ ಪೂರ್ಣಾಧಿಕಾರವನ್ನು ಮರುಸ್ಥಾಪಿಸುವಂತೆ ರಾಜ್ಯ ಹೈಕೋರ್ಟ್‌ ಆದೇಶ ನೀಡಿದೆ. ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತವನ್ನು ಬಲಗೊಳಿಸುವ ಹೈಕೋರ್ಟ್‌ ತೀರ್ಪಿನ ಬಗ್ಗೆ ರಾಜ್ಯ ಸರಕಾರ ಇನ್ನೂ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಆದರೆ, ಲೋಕಾಯುಕ್ತ ಕಚೇರಿಯಲ್ಲಿ ಮಾತ್ರ ಖುಷಿಯ ವಾತಾವರಣ ನೆಲೆ ಮಾಡಿದೆ.

ಸ್ವಲ್ಪ ಮಟ್ಟಿಗೆ ಧೂಳು ಹಿಡಿದಂತಿದ್ದ ಕಚೇರಿಯಲ್ಲಿ ಸ್ವಚ್ಛತಾ ಕಾರ್ಯ ಶುರುವಾಗಿದೆ. ಒಂದು ಕಡೆ ಕಚೇರಿಗೆ ಕಳೆ ನೀಡುವ ಇನ್ನೊಂದು ಕಡೆ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಿದ್ಧವಾಗುವ ನಿಟ್ಟಿನಲ್ಲಿ ಲೋಕಾಯುಕ್ತ ಕಚೇರಿಯ ಎದುರಿನ ಧ್ವಜ ಸ್ತಂಭವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಶುಕ್ರವಾರ ಬೆಳಗ್ಗೆ ಮಾಡಲಾಗಿದೆ.

ಈ ನಡುವೆ ಲೋಕಾಯುಕ್ತ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುವ ನಿಟ್ಟಿನಲ್ಲಿ ಏನೇನು ಕೆಲಸಗಳಾಗಬೇಕು ಎಂಬ ಮಾತುಕತೆಗಳು ಆರಂಭಗೊಂಡಿದೆ. ಹೊಸ ಸಿಬ್ಬಂದಿ ನೇಮಕಾತಿ, ಕೆಲಸಗಳ ಹಂಚಿಕೆ ಸೇರಿದಂತೆ ಅನೇಕ ವಿಚಾರಗಳು ಮುನ್ನೆಲೆಗೆ ಬಂದಿವೆ. ಈ ಹಂತದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ಬಾಕಿ ಇರುವ ದೂರುಗಳೆಷ್ಟು ಎನ್ನುವ ಲೆಕ್ಕಾಚಾರಗಳು ನಡೆಯುತ್ತಿವೆ.

ಪ್ರಸಕ್ತ ಲೋಕಾಯುಕ್ತದಲ್ಲಿ 8,036 ಪ್ರಕರಣಗಳು ಬಾಕಿ ಇವೆ. ಇದರಲ್ಲಿ 2,430 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಕಳೆದ 5 ವರ್ಷದಲ್ಲಿ 20,549 ದೂರುಗಳು ಬಂದಿದ್ದವು. ಇವುಗಳಲ್ಲಿ ೧೩೦೦೦ ಪ್ರಕರಣಗಳು ಅಷ್ಟೇನೂ ಗಂಭೀರವಾಗಿರಲಿಲ್ಲ. ಹೀಗಾಗಿ ೮೦೩೬ ಪ್ರಕರಣಗಳನ್ನು ವಿಚಾರಣೆಗೆ ಸ್ವೀಕರಿಸಲಾಗಿತ್ತು. ಕಳೆದ 5 ವರ್ಷಗಳಲ್ಲಿ 304 ಸ್ವಯಂ ಪ್ರೇರಿತ ದೂರುಗಳನ್ನು ಲೋಕಾಯುಕ್ತ ದಾಖಲಿಸಿಕೊಂಡಿದೆ.

ಇದನ್ನೂ ಓದಿದೆ| ಎಸಿಬಿ ರದ್ದುಗೊಳಿಸಿ ಹೈಕೋರ್ಟ್‌ ಮಹತ್ವದ ತೀರ್ಪು; ಎಲ್ಲ ಕೇಸ್‌ ಲೋಕಾಯುಕ್ತಕ್ಕೆ ಶಿಫ್ಟ್‌

Exit mobile version