Site icon Vistara News

Yadgir News: ಮುಖ್ಯ‌‌ ಶಿಕ್ಷಕನ ಕಾಮಚೇಷ್ಟೆಗೆ ಬೆಂಗಾವಲಾಗಿದ್ದ ಕ್ಲರ್ಕ್ ಅಂದರ್

Clerk arrested

ಯಾದಗಿರಿ: ಶಾಲಾ ಮಕ್ಕಳಿಗೆ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಖ್ಯ‌‌ ಶಿಕ್ಷಕನ ಕಾಮಚೇಷ್ಟೆಗೆ ಬೆಂಗಾವಲಾಗಿದ್ದ ಕ್ಲರ್ಕ್‌ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸ್ ವಿಚಾರಣೆ ವೇಳೆ ಜಿಲ್ಲೆಯ (Yadgir News) ಸರ್ಕಾರಿ ಶಾಲೆಯೊಂದರ ಕಾಮುಕ ಶಿಕ್ಷಕ, ಕ್ಲರ್ಕ್ ಹೆಸರು ಬಾಯಿಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಫ್ರಾನ್ಸಿಸ್ ಬಂಧಿತ ಕ್ಲರ್ಕ್‌. ಗುರುಮಠಕಲ್ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಮುಖ್ಯ ಶಿಕ್ಷಕ ಹಣಮೇಗೌಡ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಜನವರಿ 11 ರಂದು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಶಿಕ್ಷಕ ಹಣಮೇಗೌಡನನ್ನು ಪೊಲೀಸರು ಬಂಧಿಸಿದ್ದರು.

ಪೋಕ್ಸೊ ಪ್ರಕರಣ ತನಿಖೆಗಾಗಿ ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ತಂಡ‌ ರಚನೆಯಾಗಿತ್ತು. ಇದೀಗ ತನಿಖಾ ತಂಡದಿಂದ‌ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಕರಣದಲ್ಲಿ ಕ್ಲರ್ಕ್‌ ಹೆಸರು ಕೇಳಿಬಂದಿದ್ದರಿಂದ ಆತನ ಬಂಧನವಾಗಿದೆ.

ಇದನ್ನೂ ಓದಿ | Double Murder: ಮದುವೆಯಾಗಿ ಕೈ ಕೊಟ್ಟ ಹೆಂಡತಿ, ಆಕೆಯ ಪ್ರಿಯತಮನ ಕೊಚ್ಚಿ ಕೊಂದ ಮಾಜಿ ಪತಿ

ಕಾಮುಕ ಶಿಕ್ಷಕ ಹಣಮೇಗೌಡ ಹೇಳುತ್ತಿದ್ದ ಬಾಲಕಿಯರನ್ನು ಕರೆತಂದು ಕೋಣೆಯಲ್ಲಿ ಬಿಟ್ಟು ಕ್ಲರ್ಕ್‌ ಕಾವಲು ಕಾಯುತ್ತಿದ್ದ. ಹೀಗಾಗಿ ಮುಖ್ಯ‌ ಶಿಕ್ಷಕನಿಗೆ ಕಾವಲಾಗಿದ್ದ ಕ್ಲರ್ಕ್ ಪ್ರಾನ್ಸಿಸ್‌ನನ್ನು ಬಂಧಿಸಲಾಗಿದೆ.

ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ರೇಪ್; ಕುಡುಕ ಯುವಕನ ಕೃತ್ಯ

ತುಮಕೂರು‌: ಕುಡಿತದ ಮತ್ತಿನಲ್ಲಿದ್ದ ಯುವಕನೊಬ್ಬ ಕುಂಟೆ ಬಿಲ್ಲೆ ಆಡುತ್ತಿದ್ದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Physical abuse of 6 year old girl) ಮಾಡಿದ ಭೀಕರ ಘಟನೆ (POCSO Case) ತುಮಕೂರು ಜಿಲ್ಲೆ ಕೊರಟಗೆರೆ (Koratagere town in Tumkur) ಪಟ್ಟಣದಲ್ಲಿ ನಡೆದಿದೆ.

ಐ.ಡಿ.ಹಳ್ಳಿ ಮೂಲದ ಪವನ್(23) ಎಂಬಾತನೇ ಮನೆಯ ಮುಂದೆ ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ ಧೂರ್ತ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.

ಆಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ಆತ ಅತ್ಯಾಚಾರ ಮಾಡಲು ಯತ್ನಿಸಿದಾಗ ಬಾಲಕಿ ಕಿರುಚಿಕೊಂಡಿದ್ದನ್ನು ಕಂಡು ಅಕ್ಕ-ಪಕ್ಕದ ಮನೆಯವರು ಓಡಿ ಬಂದರು. ಆಗ ಆರೋಪಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಐ.ಡಿ ಹಳ್ಳಿ ಮೂಲದವನಾದ ಪವನ್‌ ಕೊರಟಗೆರೆ ಪಟ್ಟಣದ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: POCSO Case: ಬಾಗೇಪಲ್ಲಿಯಲ್ಲಿ 14 ವರ್ಷದ ಬಾಲಕಿಗೆ ಹೆರಿಗೆ!

ಬಾಲಕಿಗೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Exit mobile version