Site icon Vistara News

Climate Danger : ಕರ್ನಾಟಕ ಸೇರಿ ಒಟ್ಟು 14 ರಾಜ್ಯಗಳಿಗೆ ಗಂಡಾಂತರ! ವಿಶ್ವದಲ್ಲೇ ಅಪಾಯದಲ್ಲಿರುವ ರಾಜ್ಯಗಳಿವು!

#image_title

ನವದೆಹಲಿ: ವಿಶ್ವದಲ್ಲಿ ಹವಾಮಾನ ಅಪಾಯದಲ್ಲಿರುವ (Climate Danger) ಟಾಪ್ 100 ರಾಜ್ಯಗಳ ಪಟ್ಟಿಯನ್ನು ಆಸ್ಟ್ರೇಲಿಯಾ ಮೂಲದ ಎಕ್ಸ್.ಡಿ.ಐ ಸಂಸ್ಥೆ ತಯಾರಿಸಿದೆ. ‘ದೇಶೀಯ ಹವಾಮಾನ ಅಪಾಯ’ (Gross Domestic Climate Risk) ಹೆಸರಿನಲ್ಲಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕರ್ನಾಟಕ ಸೇರಿ ಭಾರತದ ಒಟ್ಟು 14 ರಾಜ್ಯಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ: Viral Video: ಕಾಶ್ಮೀರದ ಗುಲ್ಮಾರ್ಗದ ಹಿಮದಲ್ಲಿ ರಾಹುಲ್-ಪ್ರಿಯಾಂಕ ಸ್ನೋಮೊಬೈಲ್ ಸವಾರಿ!

2050ರ ವೇಳೆಗೆ ಯಾವ ರಾಜ್ಯಗಳು ಹೆಚ್ಚಾಗಿ ಪ್ರಾಕೃತಿಕ ವಿಕೋಪಕ್ಕೆ ಒಳಗಾಗಲಿವೆ ಎನ್ನುವುದನ್ನು ಆಧರಿಸಿ ಈ ಪಟ್ಟಿಯನ್ನು ರಚಿಸಲಾಗಿದೆ. ಅದರಲ್ಲಿ ಚೀನಾ, ಭಾರತ ಮತ್ತು ಅಮೆರಿಕ ರಾಷ್ಟ್ರಗಳೇ ಸಿಂಹಪಾಲನ್ನು ಪಡೆದುಕೊಂಡಿವೆ. ಪ್ರವಾಹ, ಕರಾವಳಿ ಭಾಗದಲ್ಲಿ ಪ್ರವಾಹ, ವಿಪರೀತ ಉಷ್ಣತೆಮ ಕಾಡ್ಗಿಚ್ಚು, ಮಣ್ಣಿನ ಸವಕಳಿ, ವಿಪರೀತ ಗಾಳಿ ಮತ್ತು ಅತ್ಯಂತ ಕಡಿಮೆ ತಾಪಮಾನ ಎನ್ನುವ ಮಾನದಂಡಗಳನ್ನು ಇಟ್ಟುಕೊಂಡು ಪಟ್ಟಿ ರಚಿಸಲಾಗಿದೆ.

ಭಾರತದ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶವು ಈ ಪಟ್ಟಿಯಲ್ಲಿವೆ. ಅದರಲ್ಲೂ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಪಂಜಾಬ್ ಮತ್ತು ಕೇರಳ ಟಾಪ್ 50ರಲ್ಲೇ ಕಾಣಿಸಿಕೊಂಡಿವೆ. ಈ ಪಟ್ಟಿಯಲ್ಲಿ ಅತಿ ಹೆಚ್ಚು ಪಾಲು ಪಡೆದಿರುವುದು ಚೀನಾ. ಅದನ್ನು ಬಿಟ್ಟರೆ ಭಾರತದ್ದೇ ದೊಡ್ಡ ಪಾಲಾಗಿದೆ. ಮೂರನೇ ಸ್ಥಾನದಲ್ಲಿ ಅಮೆರಿಕ ಇದೆ.

ಇದನ್ನೂ ಓದಿ: Viral News: ಜೈಲ್ ಅಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ಫೋನ್ ಅನ್ನೇ ನುಂಗಿದ ಕೈದಿ!

“ಅಪಾಯದ ಒಟ್ಟಾರೆ ಪ್ರಮಾಣದಲ್ಲಿ ಮತ್ತು ಅಪಾಯದ ಹೆಚ್ಚಳದ ದೃಷ್ಟಿಯಿಂದ ನೋಡಿದರೆ ಏಷ್ಯಾವು ಹೆಚ್ಚು ಕಳೆದುಕೊಳ್ಳುತ್ತದೆ. ಒಂದು ವೇಳೆ ಹದಗೆಡುತ್ತಿರುವ ಹವಾಮಾನ ಬದಲಾವಣೆಯನ್ನು ತಡೆದರೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಹೂಡಿಕೆಯನ್ನು ವೇಗಗೊಳಿಸುವುದರಿಂದ ಇದರ ಪರಿಣಾಮ ಕಡಿಮೆಯಾಗಲಿದೆ” ಎಂದು XDI ಸಿಇಒ ರೋಹನ್ ಹ್ಯಾಮ್ಡೆನ್ ಹೇಳಿದ್ದಾರೆ.

Exit mobile version