Site icon Vistara News

RSS ಚಡ್ಡಿ ಸುಡಬೇಕು ಎಂದ ಸಿದ್ದರಾಮಯ್ಯ ವಿರುದ್ಧ CM, ಸಚಿವರ ವಾಗ್ದಾಳಿ

RSS function with old uniform

ಬೆಂಗಳೂರು: ಸದಾಕಾಲ ಆರ್‌ಎಸ್‌ಎಸ್‌ ಅನ್ನು ವಿರೋಧಿಸುವುದನ್ನೇ ಅಭ್ಯಾಸ ಮಾಡಿಸಿಕೊಂಡಿರುವ ಕಾರಣಕ್ಕೇ ಕಾಂಗ್ರೆಸ್‌ ಇಂದು ಈ ಸ್ಥಿತಿ ತಲುಪಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. RSS ಚಡ್ಡಿ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಅನೇಕರು ಆರ್‌ಎಸ್‌ಎಸ್‌ ಕುರಿತು ಕೆಲ ದಿನಗಳಿಂದ ನೀಡುತ್ತಿರುವ ಹೇಳಿಕೆಗಳ ಕುರಿತು ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಮಾತನಾಡಿದ್ದಾರೆ.

RSS ಸಮವಸ್ತ್ರವನ್ನು ಸುಡಬೇಕು ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಸಚಿವರುಗಳೂ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ರಾಜ್ಯದ ವಿವಿಧೆಡೆ ಪ್ರವಾಸದಲ್ಲಿರುವ ಸಚಿವರು, ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ | ಚಡ್ಡಿಗೆ ಅಷ್ಟೊಂದು ಪವರಾ? ಚಡ್ಡಿ ಏನು ರಾಷ್ಟ್ರಧ್ವಜವೇ ಎಂದು ಪ್ರಶ್ನಿಸಿದ ಕಾಂಗ್ರೆಸ್‌

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, RSS ಸಂಘಟನೆ ದೇಶಭಕ್ತಿ ಹಾಗೂ ಜನರ ಸೇವೆಯಲ್ಲಿ ತೊಡಗಿದೆ. ಹಲವಾರು ಸಂದರ್ಭಗಳಲ್ಲಿ ಅನಾಹುತಗಳಾದಾಗ ಜನರ ಸಂಕಷ್ಟಕ್ಕೆ ಸ್ಪಂದಿಸಲು ಅವರ ಪರವಾಗಿ RSS ನಿಂತಿದೆ. ವಿವಿಧ ರಾಜ್ಯಗಳಲ್ಲಿ RSS ಉತ್ತಮವಾಗಿ ಕೆಲಸ ಮಾಡಿದೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ RSS ವಿರೋಧಿಗಳು. ಅವರ ಇಂತಹ ಧೋರಣೆಯಿಂದಲೇ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು. ಕರ್ನಾಟಕದಲ್ಲೂ ಹೀಗೆಯೇ ಆಗಲಿದೆ ಎಂದರು.

ಅವಮಾನ ಮಾಡಿದಷ್ಟೂ ಬೆಳೆಯುತ್ತೆ

RSS ಸಂಘಟನೆಯನ್ನು ಅವಮಾನ ಮಾಡಿದಷ್ಟೂ ಅದು ಬೆಳೆಯುತ್ತಲೇ ಇದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ MLC ಎನ್‌. ರವಿಕುಮಾರ್‌ ತಿಳಿಸಿದ್ದಾರೆ. ವಿಜಯಪುರದಲ್ಲಿ ಈ ಕುರಿತು ಪ್ರತಿಕ್ರಿಯಿಸಿ, RSS ಬಹುದೊಡ್ಡ ದೇಶಭಕ್ತ ಸಂಘಟನೆ. ಪ್ರವಾಹ ಬರಲಿ, ಬರಗಾಲ ಬರಲಿ, ಯುದ್ದ ಆದಾಗ ಏನೆಲ್ಲ ಬಂದಾಗಲೂ ಸೇವೆ ಮಾಡುವ ಬಹುದೊಡ್ಡ ಸಂಘಟನೆ ಅದು. ಅಂತಹ RSS ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯನವರಿಗೆ ಬುದ್ದಿ ಭ್ರಮಣೆಯಾಗಿದೆ. ಸೋನಿಯಾ ಗಾಂಧಿ ಅವರ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ಇವರು RSSಗೆ ಬಯ್ಯುತ್ತಾರೆ.

RSS ಯುನಿಫಾರ್ಮ್‌ ಸುಟ್ಟರೆ ಏನೂ ಆಗಲ್ಲ. ಅತ್ಯಂತ ಕೀಳು ಮಟ್ಟದಲ್ಲಿ, ಅತ್ಯಂತ ಅವಮಾನಕರ, ಹಾಗೂ ಅತ್ಯಂತ ಅಪ್ರಬುದ್ದವಾಗಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಆದವರು RSS ನಿಕ್ಕರ್ ಸುಟ್ಟು ಹಾಕಲು ಕರೆ ಕೊಡುವುದು ಎಂದರೆ ಏನರ್ಥ? RSS ಅನ್ನು ಈ ಹಿಂದೆ ಎರಡು ಬಾರಿ ಬ್ಯಾನ್ ಮಾಡಿದ್ದಿರಿ. ಅದೇನು ಈಗ ಕ್ಲೋಸ್ ಆಯಿತಾ? ಇಂದು ವಿಶ್ವದಲ್ಲಿ RSS ಬೆಳೆಯುತ್ತಿದೆ‌. ನೀವು ಎಷ್ಟರ ಮಟ್ಟಿಗೆ RSS ಅನ್ನು ಅವಮಾನ ಮಾಡುತ್ತೀರೊ ಅಷ್ಟು ದೊಡ್ಡ ಮಟ್ಟದಲ್ಲಿ RSS ಬೆಳೆಯುತ್ತದೆ. ದೇಶದಲ್ಲಿ ಜನರು ಇಂದು ನಿಮ್ಮನ್ನೇ ಬ್ಯಾನ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಕುರಿತು ಟೀಕಿಸಿದರು.

ಇದನ್ನೂ ಓದಿ | ಶಾಲಾ ಪಾಠದಲ್ಲಿ RSS: ವಿವಾದಕ್ಕೊಳಗಾಗಿರುವ ಹೆಡಗೇವಾರ್‌ ಕುರಿತ ಪೂರ್ಣ ಪಠ್ಯ ಇಲ್ಲಿದೆ ನೋಡಿ!

ಚಡ್ಡಿ ವಿಚಾರಕ್ಕೆ ಬಂದರೆ ಬೆಂಕಿ

RSS ಚಡ್ಡಿ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಸರ್ವನಾಶ ಆಗತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಚಡ್ಡಿ ಸುಟ್ರೆ, ನಾವೇನು ಸುಮ್ಮನೇ ಇರಲ್ಲ. ದೇಶದಲ್ಲಿ ಈಗ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆಯೋ ರಾಜ್ಯದಲ್ಲೂ ಅದೇ ಪರಿಸ್ಥಿತಿಗೆ ಬರತ್ತದೆ. ಚಡ್ಡಿ ಅಭಿಯಾನದ ಬಗ್ಗೆ ಮಾತಾಡುವ ಸಿದ್ದರಾಮಯ್ಯಗೆ ಬುದ್ದಿ ಇಲ್ಲ. RSS, ದೇಶ ಸೇವೆಗೆ ಹೆಸರಾದ ಸಂಸ್ಥೆ. ಇಂತಹ ಸಂಘಟನೆ ಬಗ್ಗೆ ಮಾತಾಡುವುದು ನೋಡಿದರೆ ಕಾಂಗ್ರೆಸ್ ನಾಯಕರಿಗೆ ಬುದ್ದಿ ಭ್ರಮಣೆ ಆಗಿದೆ ಎನ್ನಿಸುತ್ತದೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈ ರೀತಿ ಹೇಳಿಕೆ ನೀಡುವುದು ಅವರ ವ್ಯಕ್ತಿತ್ವ ಏನೆಂದು ತೋರಿಸುತ್ತದೆ ಎಂದರು.

ಸಿದ್ದರಾಮಯ್ಯ ದಾರಿ ತಪ್ಪಿದ್ದಾರೆ ಎಂದ ಕಾರಜೋಳ

ಸಿದ್ದರಾಮಯ್ಯ ಇತ್ತೀಚೆಗೆ ದಾರಿತಪ್ಪಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಇತ್ತಿತ್ತಲಾಗಿ ದಾರಿ ತಪ್ಪಿ ಮಾತನಾಡುತ್ತಿದ್ದಾರೆ. RSS ರಾಜಕೀಯ ಪಕ್ಷವಲ್ಲ. ಅದೊಂದು ಸ್ವಯಂ ಸೇವಕರ ಪಕ್ಷ, ಸಂಘ. ಭಾರತದ ಏಳಿಗೆಗಾಗಿ, ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕಾಗಿ ಪೂರ್ವಾಶ್ರಮ ತೊರೆದು ಸಂಘದಲ್ಲಿ ವಾಸ ಮಾಡುತ್ತಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಯಾರನ್ನೋ ಓಲೈಕೆ ಮಾಡುವುದಕ್ಕೆ ಸಿದ್ದರಾಮಯ್ಯ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅನುಭವಿ ರಾಜಕಾರಣಿ, ಮಾಜಿ ಸಿಎಂ, ಹಾಲಿ ವಿಪಕ್ಷ ನಾಯಕ. ಅಂಥವರು ಆ ರೀತಿ ಮಾತನಾಡುವುದು ಸರಿಯಲ್ಲ ಕಾರಜೋಳ ಹೇಳಿದರು.

ಸಿದ್ದಾಮಯ್ಯ ಗುಂಡಿಗೆ ಎದೆ ಕೊಟ್ಟಿದ್ದಾರ: ನಾರಾಯಣಸ್ವಾಮಿ

ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೆವಾರ್‌ ಅವರು ಸ್ವಾತಂತ್ರ್ಯ ಹೋರಾಟಗಾರರೇ ಎಂದು ಪ್ರಶ್ನಿಸುವ ಸಿದ್ದರಾಮಯ್ಯ ಯಾವಾಗ ಗುಂಡಿಗೆ ಎದೆ ಕೊಟ್ಟಿದ್ದರು? ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಚಿತ್ರದುರ್ಗದಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. RSS ಸಿದ್ಧಾಂತವನ್ನು ಕಾಂಗ್ರೆಸ್‌ ವಿರೋಧಿಸುತ್ತಿದೆ. ಬಿಜೆಪಿಗೆ ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿಯಿದೆ.

ಸಿದ್ದರಾಮಯ್ಯ ಸ್ವತಂತ್ರ್ಯ ಹೋರಾಟಗಾರರೇ? ಗುಂಡಿಗೆ ಎದೆ ಕೊಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದ ನಾರಾಯಣಸ್ವಾಮಿ, ಈ ದೇಶದ ಸ್ವಾಸ್ಥ್ಯ ಕೆಡಬಾರದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಿಗೆ ಹೆಡಗೆವಾರ್ ಪಠ್ಯ ಬೇಕೆನಿಸಿದೆ, ಸೇರಿಸಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಸ್ಪಷ್ಟವಾದ ತೀರ್ಮಾನ ಕೈಗೊಳ್ತಾರೆತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ನೆಹರೂಗಿಂತ ಸಿದ್ದು, ಡಿಕೆಶಿ ದೊಡ್ಡವರ? ಎಂದ ಪೂಜಾರಿ

ನೆಹರು ಪ್ರಧಾನಿಯಾಗಿದ್ದ ಸಮಯದಲ್ಲಿ ಚೀನಾ ಭಾರತ ಯುದ್ದ ಆದಾಗ ನೆಹರು ಅವರು ರಾಷ್ಟ್ರೀಯ ಸ್ವಯಂಸೇವಾಕ ಸಂಘಕ್ಕೆ ಗಣರಾಜ್ಯೋತ್ಸವ ಪಥಸಂಚಲನಕ್ಕಾಗಿ ಆಹ್ವಾನ ಕೊಟ್ಟಿದ್ದರು. ಅವರಿಗಿಂತ ಸಿದ್ದರಾಮಯ್ಯ, ಡಿಕೆಶಿ ದೊಡ್ಡವರಾ ನಮಗೆ ಗೊತ್ತಿಲ್ಲ. ಪ್ರಣಬ್ ಮುಖರ್ಜಿ ನಾಗಪುರ RSS ಕಚೇರಿಗೆ ಹೋಗಿದ್ದರು. ರಾಷ್ಟ್ರವನ್ನು‌ ಮುನ್ಮಡೆಸಬಲ್ಲ, ರಾಷ್ಟ್ರ ಭಕ್ತ ಸಂಘಟನೆ ಅಂತ ಮೆಚ್ಚುಗೆ ಸೂಚಿಸಿದ್ದರು. ಅವರಿಗಿಂತ ಇವರು ದೊಡ್ಡವರಾ ಗೊತ್ತಿಲ್ಲ ನಮಗೆ. ಇವರಿಗೆ RSS ಬಗ್ಗೆ ಗೊತ್ತಿಲ್ಲದೇ ಇದ್ದರೆ ಇತಿಹಾಸವನ್ನು ಒಮ್ಮೆ ನೋಡಿಕೊಳ್ಳಲಿ ಎಂದರು.

RSS ಸಮವಸ್ತ್ರ ಸುಡುತ್ತೇವೆ ಎಂಬ ಮಟ್ಟಕ್ಕೆ ಇಳಿಯುತ್ತಾರೆಂದರೆ ಅವರ ರಾಜಕಾರಣ ಬಹಳ‌ ಕೆಟ್ಟಮಟ್ಟಕ್ಕೆ ಹೋಗಿದೆ ಅಂತ ಅರ್ಥ. ಅವರಿಗೆ ಪ್ರತಿಕ್ರಿಯೆ ಕೊಡುವ ಶಕ್ತಿ RSS ಹಾಗೂ ಬಿಜೆಪಿಗೆ ಇದೆ.

RSS ಟೀಕೆ ಮಾಡಿದಷ್ಟೂ ಲಾಭ ಆಗುತ್ತದೆ ಎಂದು ಅವರು ಭಾವಿಸಿರಬೇಕು. ಬಿಜೆಪಿ ವಿರುದ್ದ ಮತ ಸೆಳೆಯಲು ಒಂದು ಕಡೆ ಕಾಂಗ್ರೆಸ್, ಇನ್ನೊಂದು ಕಡೆ ಜೆಡಿಎಸ್ ಜಗ್ಗಾಡುತ್ತಿವೆ. ಚುನಾವಣೆ ಗೆಲ್ಲುವ ಮತಗಳು ಅವರ ಕಡೆ ಉಳಿದಿಲ್ಲ ಎಂದರು.

ಇದನ್ನೂ ಓದಿ | RSS ಮೂಲ ಕೆದಕುವ ಸಿದ್ದರಾಮಯ್ಯ ಅವರ ರಾಜಕೀಯ ಮೂಲ ಪ್ರಶ್ನಿಸಿದ ಸಿ.ಸಿ ಪಾಟೀಲ್‌

Exit mobile version