ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ (Karnataka Election Results 2023) ಮತ ಎಣಿಕೆ ಕಾರ್ಯ ಆರಂಭವಾಗಿದೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ಮೊರೆ ಹೋಗಿದ್ದಾರೆ. ಪೂಜೆ ಮಾಡಿಸುವ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಗದ್ಗದಿತರಾಗಿರುವುದು ಕಂಡುಬಂತು.
ಎಚ್ಎಸ್‌ಆರ್ ಲೇಔಟ್‌ನ ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಎಚ್.ಡಿ. ಕುಮಾರಸ್ವಾಮಿ ಅವರು, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿ ರುದ್ರಾಭಿಷೇಕ ಹಾಗೂ ಗಣಹೋಮವನ್ನು ಮಾಡಿಸಿದ್ದಾರೆ.
ಬಳಿಕ ಕುಮಾರಸ್ವಾಮಿ ಅವರು ಪೂರ್ಣಾಹುತಿ ಸಲ್ಲಿಸಿದರು. ವಿಘ್ನ ನಿವಾರಣೆ, ಸಂಕಷ್ಟ ಪರಿಹಾರಕ್ಕೆ ಗಣಹೋಮ ನಡೆಸಿದ್ದಾರೆ. ಅಲ್ಲಿಂದ ಎಚ್ಎಸ್ಆರ್ ಲೇಔಟ್ ದೇವಸ್ಥಾನದಿಂದ ಪದ್ಮನಾಭನಗರಕ್ಕೆ ತೆರಳಿದರು. ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದಲ್ಲಿ ಫಲಿತಾಂಶ ವೀಕ್ಷಿಸುತ್ತಿದ್ದಾರೆ.
ಆಂಜನೇಯನ ದೇವಸ್ಥಾನಕ್ಕೆ ಸಿಎಂ ಭೇಟಿ
ಮತ ಎಣಿಕೆಗೂ ಮೊದಲು ಹುಬ್ಬಳ್ಳಿಯಲ್ಲಿ ಮಾರುತಿ ದೇವಸ್ಥಾನಕ್ಕೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ ದೇವರ ಮೊರೆ ಹೋದರು. ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು, ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: Karnataka Election Results 2023: ವಿ. ಸೋಮಣ್ಣ, ಡಾ. ಸುಧಾಕರ್, ಕಾರಜೋಳ ಸಹಿತ ಏಳು ಸಚಿವರಿಗೆ ಹಿನ್ನಡೆ
ಬೊಮ್ಮಾಯಿ ಹಾವೇರಿಯ ಮನೆಯಲ್ಲಿ ಹಾವು ಪ್ರತ್ಯಕ್ಷ
ಹಾವೇರಿಯ ಬಸವೇಶ್ವರ ನಗರದ ಲಕ್ಮಾಪುರದಲ್ಲಿರುವ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ಹಾವು ಕಾಣಿಸಿಕೊಂಡಿದೆ. ಮನೆಯ ಆವರಣದಲ್ಲಿ ಹಾವು ಓಡಾಡಿದೆ. ಹಾವು ಹಿಡಿಯಲು ಬಿಜೆಪಿ ಕಾರ್ಯಕರ್ತರು ಹರಸಾಹಸ ಪಟ್ಟಿದ್ದಾರೆ.