Site icon Vistara News

National Emblem Controversy | ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡಿದೆ: ಸಿಎಂ ಬೊಮ್ಮಾಯಿ

ಉಡುಪಿ:‌ ಸಾರನಾಥದಲ್ಲಿರುವ ಅಶೋಕ ಸ್ತಂಭದ ಮೇಲಿರುವ ನಾಲ್ಕು ಸಿಂಹಗಳು ಹಾಗೂ ಧರ್ಮ ಚಕ್ರದ ಮಾದರಿಯನ್ನೇ ಯಥಾವತ್ತಾಗಿ ನೂತನ ಸಂಸತ್‌ ಭವನದ ರಾಷ್ಟ್ರೀಯ ಲಾಂಛನದಲ್ಲಿ ಅನುಕರಿಸಲಾಗಿದೆ. ಗರ್ಜಿಸುವುದು ನಮ್ಮ ಸಿಂಹದ ಗುಣ. ಆದರೆ, ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದೆ. ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ, ನಾವು ನೋಡುವ ದೃಷ್ಟಿ ಬೇರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್‌ ನೀಡಿದ್ದಾರೆ.

ನಗರದಲ್ಲಿ ಬುಧವಾರ ಮಳೆ ಹಾನಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರನಾಥದ ಅಶೋಕ ಸ್ತಂಭದ ೪ ಸಿಂಹಗಳ ಮುಖಚರ್ಯೆಯನ್ನೇ ಸಂಸತ್‌ ಭವನದ ಮೇಲಿನ ರಾಷ್ಟ್ರ ಲಾಂಛನಕ್ಕೆ ಅಳವಡಿಸಿಕೊಳ್ಳಲಾಗಿದೆ. ನಾವು ನೋಡುವ ದೃಷ್ಟಿಕೋನವೇ ಸೌಮ್ಯ ಅಥವಾ ಉಗ್ರವಾಗಿದೆ ಎಂಬುದು ಸೂಚಿಸುತ್ತದೆ. ಈ ವಿಷಯದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ನವ ದೆಹಲಿಯ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರ ಲಾಂಛನ ವಿವಾದದ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ಕೊಟ್ಟಿದೆ. ಆದರೆ, ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ. ನಮ್ಮಲ್ಲಿ ಕ್ರಿಯಾಶೀಲವಾದ ಪ್ರಧಾನಿ ಇದ್ದಾರೆ. ಸಿಂಹ ಹೇಗೆ ಸಶಕ್ತವಾಗಿ ಗರ್ಜಿಸಬೇಕೋ ಹಾಗೆಯೇ ನಮ್ಮ ಸಿಂಹ ಇದೆ. ಕಾಂಗ್ರೆಸ್‌ ಸಂಸ್ಕೃತಿ ಹೇಗೋ ಹಾಗೆಯೇ ಅವರಿಗೆ ಸಿಂಹಗಳು ಕಾಣುತ್ತವೆ ಎಂದು ಕುಟುಕಿದರು.

ಇದನ್ನೂ ಓದಿ | Chief Minister Tour | ನೆರೆ ಹಾನಿ ಪರಿಹಾರಕ್ಕೆ ತುರ್ತು ₹500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ ಘೋಷಣೆ

Exit mobile version