Site icon Vistara News

Basavaraj Bommai | ಬೆಂಗಳೂರಿನ ಫೆರಿಫೆರಲ್ ರಸ್ತೆ, ಕೆರೆಗಳ ಅಭಿವೃದ್ಧಿಗೆ ಕ್ರಮ: ಸಿಎಂ ಬೊಮ್ಮಾಯಿ

Basavaraj Bommai

Basavaraj Bommai

ಬೆಂಗಳೂರು: ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ೬ ಸಾವಿರ ಕೋಟಿ ರೂಪಾಯಿ ನೀಡಲು ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದ್ದು, ನಗರದ ಫೆರಿಫೆರಲ್ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ನಾವು ಕ್ರಮ ವಹಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಕಾಲದಲ್ಲಿ 15ನೇ ಹಣಕಾಸಿನ ಆಯೋಗ ತೀರ್ಮಾನವಾಗಿದೆ. ಇದನ್ನು ರಾಜ್ಯ ಸರ್ಕಾರದ ಜತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಸರಿಯಾದ ಮಾಹಿತಿಗಳನ್ನು ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಯೋಗಕ್ಕೆ ತಿಳಿಸುವಲ್ಲಿ ಅಂದಿನ ಸರ್ಕಾರದ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಈಗಿರುವ ಮುಖ್ಯ ಬಜೆಟ್, ಕೆಕೆಆರ್‌ಡಿಬಿ ಬಜೆಟ್, ಮಿನರಲ್ ಫಂಡ್‍ಗಳನ್ನು ಉಪಯೋಗ ಮಾಡಲು ಈಗಾಗಲೇ ಮಂಜೂರಾಗಿರುವ ಕೆಲಸಗಳನ್ನು ನಿರ್ವಹಿಸಿಲು ವಿಶೇಷ ಎಂಜಿನಿಯರ್ ಸೆಲ್ ಅಗತ್ಯವಿದೆ. ಅದರ ಕಡೆ ಲಕ್ಷ್ಯ ಕೊಡಲಾಗುತ್ತಿದೆ. ಶೇ.50ರಷ್ಟು ರಿಂಗ್ ರೋಡ್‌ ರೋಡ್‌ ಅನ್ನು ಮಿನರಲ್ ಫಂಡ್‌ನಲ್ಲಿ ಕೈಗೊಳ್ಳಲಾಗಿದೆ. ಉಳಿದ ಶೇ. 50ರಷ್ಟು ಕಾಮಗಾರಿ ಎಮೆನ್ ಇಂಡಿಯಾ ಕಾಮಗಾರಿಯ ಭಾಗವಾಗಿದೆ. ಮೊದಲ ಆದ್ಯತೆಯಾಗಿ ರಿಂಗ್ ರೋಡ್‌ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಇದನ್ನೂ ಓದಿ | Swadeshi Mela | ಸ್ವದೇಶಿ ವಸ್ತುಗಳ ಕುರಿತು ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

Exit mobile version