Site icon Vistara News

Lokayukta Raid: ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ ನಾಯಕರ ಕೈಗಳೇ ಕಪ್ಪಾಗಿವೆ; 100 ಪರ್ಸೆಂಟ್‌ಗಾಗಿ ಪ್ರಜಾಧ್ವನಿ ಯಾತ್ರೆ: ಸಿಎಂ ಬೊಮ್ಮಾಯಿ

CM Basavaraj bommai says The hands of Congress leaders are blackened in corruption, prajadhvani yatra for 100 per cent

#image_title

ಮೈಸೂರು: ಕಾಂಗ್ರೆಸ್‌ನವರದ್ದು 100 ಪರ್ಸೆಂಟ್‌ಗಾಗಿ ಪ್ರಜಾಧ್ವನಿ ಯಾತ್ರೆ. ಅವರಿಗೆ ಭ್ರಷ್ಟಾಚಾರದ (Lokayukta Raid) ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಭ್ರಷ್ಟಾಚಾರದಲ್ಲಿ ಅವರ ಕೈಗಳೇ ಕಪ್ಪಾಗಿವೆ. ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ (Lokayukta Raid) ಹೈಕೋರ್ಟ್ ಜಾಮೀನು ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹೈಕೋರ್ಟ್ ತೀರ್ಮಾನವನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿಯದ್ದು 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂಬ ಸಿದ್ದರಾಮಯ್ಯ ಟೀಕೆಗೆ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಲೋಕಾಯುಕ್ತ ಬಂದ್ ಮಾಡಿದ್ದರೆ ರಾಜೀನಾಮೆ ಕೊಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಲೋಕಾಯುಕ್ತ ಬಂದ್ ಮಾಡಲಿಲ್ಲ. ಆದರೆ ಲೋಕಾಯುಕ್ತದ ಎಲ್ಲ ಹಲ್ಲುಗಳನ್ನೂ ಕಿತ್ತಿದ್ದರು. ಹಲ್ಲು ಕಿತ್ತ ಮೇಲೆ ಇದ್ದರೆ ಎಷ್ಟು ಇಲ್ಲದಿದ್ದರೆ ಎಷ್ಟು? ಅವರ ಕಾಲದಲ್ಲಿ ಲೋಕಾಯುಕ್ತ ಇದ್ದಿದ್ದರೆ ಎಸಿಬಿಗೆ ಏಕೆ ಕೇಸ್‌ಗಳು ವರ್ಗಾವಣೆ ಆಗುತ್ತಿತ್ತು ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕಾಫಿ, ತಿಂಡಿ, ಬಿಸ್ಕೆಟ್‌ಗೆ 200 ಕೋಟಿ ರೂಪಾಯಿ ವೆಚ್ಚ ಆರೋಪಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತೇನೆ. ಏನು ಆರೋಪಗಳಿವೆ ಎಂಬುವುದು ಗೊತ್ತಿಲ್ಲ. ಆರೋಪಗಳು ಸರಿ ಇದ್ದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Karnataka Election 2023: ಅಭ್ಯರ್ಥಿ ಯಾರೆಂದು ಯೋಚಿಸದೆ ಬಿಜೆಪಿ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಿ: ಬಿ.ವೈ. ವಿಜಯೇಂದ್ರ ಕರೆ

ಮಾರ್ಚ್ 9ರಂದು ಕಾಂಗ್ರೆಸ್‌ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡು ಗಂಟೆ ಬಂದ್ ಎಲ್ಲಾದರೂ ಕೇಳಿದ್ದೀರಾ? ಅದ್ಯಾವ ಸೀಮೆಯ ಬಂದ್? ಏನಕ್ಕಾಗಿ ಬಂದ್ ಮಾಡಬೇಕು? ಭ್ರಷ್ಟಾಚಾರದಿಂದ ಕಾಂಗ್ರೆಸ್‌ನವರ ಕೈ ಕೆಸರಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್ ಮಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಅಂದು ಪಿಯುಸಿ ಸೇರಿ ವಿವಿಧ ಪರೀಕ್ಷೆಗಳು ಇವೆ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಇದರಿಂದ ಬಂದ್‌ಗೆ ಜನ ಬೆಂಬಲ ಇಲ್ಲ. ಬಂದ್ ಯಶಸ್ವಿಯೂ ಆಗುವುದಿಲ್ಲ ಎಂದು ಹೇಳಿದರು.

ಎಚ್‌3ಎನ್2 ವೈರಸ್ ಭೀತಿ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇಡೀ ರಾಜ್ಯಕ್ಕೆ ಗೈಡ್‌ಲೈನ್ ಅತೀ ಶೀಘ್ರದಲ್ಲೇ ಕೊಡಲಿದ್ದಾರೆ. ಅದಕ್ಕೆ ಔಷಧಿಗಳನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರಗಳಲ್ಲಿ ಇಡಲು ಸೂಚನೆ ಕೊಡಲಾಗಿದೆ. ರಾಜ್ಯದಲ್ಲಿ ಆತಂಕದ ಸ್ಥಿತಿ ಇಲ್ಲ, ಜನರು ಎಚ್ಚರಿಕೆ ವಹಿಸಬೇಕು, ಮಾಸ್ಕ್ ಕಡ್ಡಾಯವಲ್ಲ. ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

Exit mobile version