Site icon Vistara News

CM Basavaraja Bommai : 2 ಗಂಟೆ ಬಂದ್‌ ಎಲ್ಲಾದರೂ ಕೇಳಿದ್ದೀರಾ? ಅದ್ಯಾವ ಸೀಮೆಯ ಬಂದ್‌?; ಸಿಎಂ ಬೊಮ್ಮಾಯಿ ವ್ಯಂಗ್ಯ

Approval for release of funds for various infrastructure projects in state cabinet meeting

ಮೈಸೂರು: ʻʻಎರಡು ಗಂಟೆ ಬಂದ್ ಎಲ್ಲಾದರೂ ಕೇಳಿದ್ದೀರಾ? ಅದ್ಯಾವ ಸೀಮೆಯ ಬಂದ್?ʼʼ- ಹೀಗೆಂದು ಕಾಂಗ್ರೆಸ್‌ ಕರೆಸಿದ ಮಾರ್ಚ್‌ 9ರ ಬಂದ್‌ಗೆ ವ್ಯಂಗ್ಯವಾಡಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai).

ʻʻಜಗತ್ತಿನಲ್ಲಿ ಎಲ್ಲಾದರೂ ಎರಡು ಗಂಟೆ ಬಂದ್ ಕೇಳಿದ್ದೀರಾ? ಯಾತಕ್ಕಾಗಿ ಬಂದ್ ಮಾಡಬೇಕು?ʼʼ ಎಂದು ಕೇಲೀದ ಅವರು, ʻʻಭ್ರಷ್ಟಾಚಾರದಿಂದ ಕಾಂಗ್ರೆಸ್‌ನವರ ಕೈ ಕೆಸರಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್ ಮಾಡುವ ಯಾವ ನೈತಿಕತೆ ಇದೆʼʼ ಎಂದು ಪ್ರಶ್ನಿಸಿದರು.

ʻʻಮಾರ್ಚ್‌ 9ರಂದು ಪಿಯುಸಿ ಸೇರಿದಂತೆ ಪರೀಕ್ಷೆಗಳು ಇವೆ. ಅಂದು ಬಂದ್‌ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಂದ್‌ಗೆ ಜನ ಬೆಂಬಲ ಸಿಗುವುದಿಲ್ಲ. ಹೀಗಾಗಿ ಬಂದ್‌ ಯಶಸ್ವಿಯೂ ಆಗುವುದಿಲ್ಲʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಎಚ್‌3ಎನ್‌2: ಎಚ್ಚರಿಕೆ ವಹಿಸಿ ಮಾಸ್ಕ್‌ ಕಡ್ಡಾಯವಲ್ಲ

ಎಚ್‌3ಎನ್2 ವೈರಸ್ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಇಡೀ ರಾಜ್ಯಕ್ಕೆ ಅನ್ವಯವಾಗುವ ಗೈಡ್‌ಲೈನ್ ಒಂದನ್ನು ಅತಿ ಶೀಘ್ರವೇ ಬಿಡುಗಡೆಯಾಗಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಔಷಧಗಳನ್ನು ಸಂಗ್ರಹಿಸಿಡಿ ಎಂದು ಸೂಚನೆ ನೀಡಿದ್ದೇನೆ. ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ ಬಗ್ಗೆ ಕೇಳಿದಾಗ, ʻʻಇದು ನನ್ನ ಗಮನಕ್ಕೆ ಬಂದಿಲ್ಲ. ಹೈಕೋರ್ಟ್ ತೀರ್ಮಾನವನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲʼʼ ಎಂದರು.

ಲೋಕಾಯುಕ್ತ ಬಂದ್ ಮಾಡಿದ್ದರೆ ರಾಜೀನಾಮೆ ಕೊಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಲೋಕಾಯುಕ್ತ ಬಂದ್ ಮಾಡಲಿಲ್ಲ. ಆದರೆ ಲೋಕಾಯುಕ್ತದ ಎಲ್ಲಾ ಹಲ್ಲುಗಳನ್ನೂ ಕಿತ್ತಿದ್ದರು. ಹಲ್ಲು ಕಿತ್ತ ಮೇಲೆ ಇದ್ದರೆ ಎಷ್ಟು ಇಲ್ಲದಿದ್ದರೆ ಎಷ್ಟು? ಅವರ ಕಾಲದಲ್ಲಿ ಲೋಕಾಯುಕ್ತ ಇದಿದ್ದರೆ ಎಸಿಬಿಗೆ ಏಕೆ ಕೇಸ್‌ಗಳು ವರ್ಗಾವಣೆ ಆಗುತ್ತಿತ್ತು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ : Foxconn issue : ಫಾಕ್ಸ್‌ ಕಾನ್‌ ಒಪ್ಪಂದ ಸುಳ್ಳು ಎಂದ ದಿನೇಶ್‌ ಗುಂಡೂ ರಾವ್‌, ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಆಕ್ರೋಶ

Exit mobile version