1. Karnataka CM: 50:50 ಎನ್ನುತ್ತಿದ್ದ ಹೈಕಮಾಂಡ್‌ಗೆ 60:60 ಎಂದ ಸಿದ್ದರಾಮಯ್ಯ-ಡಿಕೆಶಿ: ಮತ್ತಷ್ಟು ಕಗ್ಗಂಟಾದ ಸಿಎಂ ಆಯ್ಕೆ
ಕರ್ನಾಟಕದಲ್ಲಿ ನಿರೀಕ್ಷೆಯನ್ನೂ ಮೀರಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದರೂ ಸಿಎಂ ಆಯ್ಕೆ ಮಾಡಲು ಎಐಸಿಸಿ ಸುಸ್ತಾಗುತ್ತಿದೆ. ಇಬ್ಬರು ಪ್ರಬಲ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವೈಯಕ್ತಿಕ ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಇಬ್ಬರ ಎದುರು ಹೈಕಮಾಂಡ್ 50:50 ಸೂತ್ರ ಇಟ್ಟಿತ್ತು. ಅಂದರೆ ಪ್ರಾರಂಭದ ಅರ್ಧ ಅವಧಿ, ನಂತರದ ಅರ್ಧ ಅವಧಿ ಇಬ್ಬರಿಗೂ ಹಂಚುವ ತೀರ್ಮಾನ ಮಾಡಿತ್ತು. ಆದರೆ ತಮ್ಮ ಅವಧಿ ಮುಗಿದ ನಂತರ ಸಿದ್ದರಾಮಯ್ಯ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸ ಡಿ.ಕೆ. ಶಿವಕುಮಾರ್‌ಗೆ ಇಲ್ಲ ಎನ್ನಲಾಗಿದೆ. ಅದಕ್ಕಾಗಿಯೇ, 50:50 ಬೇಡ. ಕೊಟ್ಟರೆ ಸಂಪೂರ್ಣ 60 ತಿಂಗಳು ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Karnataka CM: ಕೊಟ್ರೆ ಸಿಎಂ ಹುದ್ದೆ ಕೊಡಿ; ಇಲ್ಲಾಂದ್ರೆ ನೀವೇ ಆಗಿಬಿಡಿ: ಎಐಸಿಸಿ ಅಧ್ಯಕ್ಷರಿಗೇ ಆಫರ್ ಕೊಟ್ಟ ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದಿದೆಯಾದರೂ ಸಿಎಂ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರಿದಿದೆ. ತಮಗೆ ಸಿಎಂ ಸ್ಥಾನವೇ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಇಷ್ಟು ಕಷ್ಟ ಪಟ್ಟು ಪಕ್ಷವನ್ನು ಗೆಲ್ಲಿಸಿದ ತಮಗೇ ಸಿಎಂ ಸ್ಥಾನ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೆ ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Election 2023 : ಗ್ಯಾರಂಟಿ ಎಲ್ಲರಿಗೂ ಸಿಗಲ್ಲ, Conditions Apply ಅಂದ ಪರಮೇಶ್ವರ್
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಗೆದ್ದು ಬೀಗಿದ ಕಾಂಗ್ರೆಸ್ ಸರ್ಕಾರ ರಚನೆಯ ಸರ್ಕಸ್‌ನಲ್ಲಿ ನಿರತವಾಗಿದೆ. ಇದರ ನಡುವೆಯೇ ಅದು ಚುನಾವಣೆಗೆ ಮುನ್ನ ನೀಡಿದ ಐದು ಪ್ರಮುಖ ಗ್ಯಾರಂಟಿಗಳ (Congress Guarantee card) ಜಾರಿಯ ಬಗ್ಗೆ ಎಲ್ಲೆಡೆ ಕುತೂಹಲ ಮೂಡಿದೆ. ಕೆಲವರಂತೂ ಈಗಿನಿಂದಲೇ ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಹಾಗಿದ್ದರೆ ಗ್ಯಾರಂಟಿ ನಿಜಕ್ಕೂ ನಿಜವಾಗುತ್ತಾ? ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Karnataka Election Results: ಸಿಎಂ, ಡಿಸಿಎಂ ಸ್ಥಾನಕ್ಕಾಗಿ ಲಾಬಿ; ಸ್ವಾಮೀಜಿಗಳ ಸಹಿತ ಎಲ್ಲೆಡೆಯಿಂದ ಒತ್ತಡ
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿರುವ ಹಿನ್ನೆಲೆಯಲ್ಲಿ (Karnataka Election Results ಸಿಎಂ, ಡಿಸಿಎಂ ಹಾಗೂ ಸಚಿವ ಸ್ಥಾನಗಳಿಗಾಗಿ ಲಾಬಿ ಶುರುವಾಗಿದೆ. ಒಕ್ಕಲಿಗ, ಲಿಂಗಾಯತ, ವಾಲ್ಮೀಕಿ ಹಾಗೂ ದಲಿತ ಸಮುದಾಯಗಳ ಸ್ವಾಮೀಜಿಗಳು ಹಾಗೂ ಮುಖಂಡರು ತಮ್ಮ ಸಮಾಜದ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Karnataka BJP: ಹೊಸಕೋಟೆಯಲ್ಲಿ ತಾಲಿಬಾನ್ ಪಡೆ ಎದ್ದುನಿಂತಿದೆ: ನಳಿನ್ ಕುಮಾರ್ ಕಟೀಲ್ ಆಕ್ರೋಶ
ಚುನಾವಣೆ ನಂತರ ಗಲಾಟೆಯಲ್ಲಿ ಮೃತಪಟ್ಟಿದ್ದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಮನೆಗೆ ತೆರಳಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಾಂತ್ವನ ಹೇಳಿದ್ದಾರೆ. ಹೊಸಕೋಟೆಯ ಡಿ.ಶೆಟ್ಟಿ ಹಳ್ಳಿಯಲ್ಲಿರುವ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ 5 ಲಕ್ಷ ರೂ. ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Karnataka Election 2023: ಸಿಎಂ ಬಳಿಕ ಸಂಪುಟ ಪ್ಲ್ಯಾನ್; ಸಚಿವರ ಆಯ್ಕೆಗೆ ಹೈಕಮಾಂಡ್ 10 ಅಂಶ ಸೂತ್ರ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಹುಮತ ಗಳಿಸಿರುವ ಕಾಂಗ್ರೆಸ್ ಮುಖ್ಯಮಂತ್ರಿ (Congress Chief minister) ಆಯ್ಕೆಯ ಕಸರತ್ತಿನಲ್ಲಿ ನಿರತವಾಗಿದೆ. ಸಿಎಂ ಯಾರು ಎನ್ನುವುದು ತೀರ್ಮಾನ ಆಗುತ್ತಿದ್ದಂತೆಯೇ ಸಂಪುಟ ರಚನೆಯಾಗಲಿದ್ದು (Karnataka Cabinet), ಅದಕ್ಕೂ ಈಗಾಗಲೇ ಕಾರ್ಯತಂತ್ರವನ್ನು ಪಕ್ಷ ರೂಪಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Karnataka Election 2023 : ರಾಜಕೀಯಕ್ಕೆ ಕುಮಾರಸ್ವಾಮಿ ಗುಡ್‌ಬೈ? ಏನಾಗುತ್ತಿದೆ ಜೆಡಿಎಸ್‌ನಲ್ಲಿ?
ಈ ಬಾರಿಯ ಚುನಾವಣಾ ಫಲಿತಾಂಶ (Karnataka Election 2023) ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ದೊಡ್ಡ ಅಘಾತ ನೀಡಿದ್ದು, ಪಕ್ಷದ ಮುಂದಿನ ಭವಿಷ್ಯದ ಕುರಿತು ಚಿಂತೆ ಶುರುವಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಿಂದಲೇ ನಿವೃತ್ತಿ ಹೊಂದುವ ಮಾತುಗಳನ್ನಾಡುತ್ತಿರುವುದು ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. PM Rozgar Mela: ಗ್ರೂಪ್ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ: ನರೇಂದ್ರ ಮೋದಿ
ಇಂದು 71 ಸಾವಿರ ಯುವಜನರಿಗೆ ನೇಮಕಾತಿ ಪತ್ರವನ್ನು ನೀಡಿದ್ದೇನೆ. ಸ್ವಲ್ಪ ದಿನಗಳ ಹಿಂದೆ ಗುಜರಾತ್‌ನಲ್ಲಿ ರೋಜ್‌ಗಾರ್ ಮೇಳವನ್ನು (PM Rozgar Mela) ಆಯೋಜನೆ ಮಾಡಲಾಗಿತ್ತು. ಇನ್ನು ಮುಂದೂ ಸಹ ಆಯೋಜನೆ ಮಾಡುತ್ತೇವೆ. ಬಿಜೆಪಿ ನೇತೃತ್ವದ ಭಾರತ ಸರ್ಕಾರ ಈ ರೀತಿಯ ಮೇಳಗಳನ್ನು ಮಾಡುತ್ತಿದೆ. ಎಲ್ಲ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಗ್ರೂಪ್ ಸಿ, ಡಿ ಹುದ್ದೆಗಳನ್ನು ಪಡೆಯುವಾಗ ಯುವಜನರಿಗೆ ಆಗುತ್ತಿದ್ದ ಎಲ್ಲ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: PM Narendra Modi: ರೋಜ್‌ಗಾರ್ ಮೇಳದಲ್ಲಿ ಮೋದಿ ಭಾಷಣ; ನಿದ್ದೆಗೆ ಜಾರಿದ ತೇಜಸ್ವಿ ಸೂರ್ಯ!
9. Mamata Banerjee: ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಸಿದ್ಧ, ಆದರೆ ಷರತ್ತುಗಳು ಅನ್ವಯಿಸುತ್ತವೆ ಎಂದ ದೀದಿ
ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಪಕ್ಷದ ಪ್ರಚಂಡ ಗೆಲುವು ರಾಷ್ಟ್ರ ಮಟ್ಟದಲ್ಲೂ ಪರಿಣಾಮ ಬೀರುತ್ತಿರುವಂತೆ ಕಾಣುತ್ತಿದೆ. ಇಷ್ಟು ದಿನ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎನ್ನುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಈಗ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಸಿದ್ಧ. ಆದರೆ, ಆ ಪಕ್ಷವು ಒಂದಿಷ್ಟು ಷರತ್ತುಗಳನ್ನು ಪಾಲಿಸಬೇಕು ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು ಕೊಡು-ತೆಗೆದುಕೊಳ್ಳುವಿಕೆ ನೀತಿಯನ್ನು ಅನುಸರಿಸಿದರೆ ರಾಷ್ಟ್ರಮಟ್ಟದಲ್ಲಿ ಆ ಪಕ್ಷಕ್ಕೆ ಬೆಂಬಲಿಸಲು ಸಿದ್ಧ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Weather Report: ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ; ಯಾವ ಜಿಲ್ಲೆಗಳಲ್ಲಿ?
ರಾಜ್ಯದ ವಿವಿಧೆಡೆ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆಯನ್ನು ನೀಡಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಮತ್ತು ಮೈಸೂರು, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- ನನ್ನ ದೇಶ ನನ್ನ ದನಿ: “ಬೇಟೆಯಾಡಲು ಹೋಗಿ ಅಜಂತಾ ಕಂಡುಹಿಡಿದನಲ್ಲಾ ಒಬ್ಬ ಬ್ರಿಟಿಷ್ ಅಧಿಕಾರಿ, ಅದು ಅದ್ಭುತ”!
- D ಕೋಡ್ ಅಂಕಣ: ಬಿಜೆಪಿಗೆ ಲಿಂಗಾಯತ ಮತಗಳು ನಷ್ಟವಾಗಿಲ್ಲ ಎನ್ನುವುದು ಎಷ್ಟು ಸುಳ್ಳು? ಮೀಸಲು ಜೇನು ಕಚ್ಚಿದ್ದೆಷ್ಟು?
- Karnataka Election 2023 : ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಮುಗಳಿಗೆ ಬೇಕು ವರ್ಷಕ್ಕೆ 62,000 ಕೋಟಿ ರೂ!
- IPL 2023 : ಸ್ಟೊಯ್ನಿಸ್ ಅರ್ಧ ಶತಕ; ಮುಂಬಯಿ ಇಂಡಿಯನ್ಸ್ ತಂಡಕ್ಕೆ 178 ರನ್ ಗೆಲುವಿನ ಸವಾಲು
- UP Election Result 2023: ಯುಪಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಕ್ಕೆ ನಿಂತ ಮುಸ್ಲಿಮರು! ಎಷ್ಟು ಸ್ಥಾನ ಗೆದ್ದರು?