Site icon Vistara News

Cauvery Water Dispute: ಕಾವೇರಿ ನೀರು ಬಿಡುಗಡೆ ಬಗ್ಗೆ ಚರ್ಚಿಸಲು ಬುಧವಾರ ತುರ್ತು ಸಭೆ ಕರೆದ ಸಿಎಂ

CM Siddaramaiah Meeting in Vidhanasoudha

ಬೆಂಗಳೂರು: ತಮಿಳುನಾಡಿಗೆ ಇನ್ನೂ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್‌ ನೀರನ್ನು (Cauvery Water Dispute) ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಮತ್ತೊಮ್ಮೆ ಸೂಚಿಸಿರುವ ಹಿನ್ನೆಲೆಯಲ್ಲಿ ಸೆ.13ರಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಶೇಷ ತುರ್ತು ಸಭೆ ಕರೆಯಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರು, ಎಲ್ಲಾ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರು ತುರ್ತು ಸಭೆಯಲ್ಲಿ ಭಾಗಹಿಸಲಿದ್ದಾರೆ.

ಮಂಗಳವಾರ ಸಂಜೆಯೂ ಸಭೆ ನಡೆಸಿದ ಸಿಎಂ

Cm Siddaramaiah holds meeting with ministers at Vidhana Soudha

ಕಾವೇರಿ ನೀರು ಬಿಡುಗಡೆ ಸಂಬಂಧ ಮುಂದೆ ಕೈಗೊಳ್ಳಬಹುದಾಗ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆಯೂ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯ ಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ನಾಗೇಂದ್ರ , ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಎಸಿಎಸ್ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಸಂಬಂಧಪಟ್ಟ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.

ಇದನ್ನೂ ಓದಿ | Minister D Sudhakar : ಸುಧಾಕರ್‌ ರಾಜೀನಾಮೆ ಕೊಡಲ್ಲ, ಇದೊಂದು ಸುಳ್ಳು ಕೇಸ್‌: ಡಿ.ಕೆ. ಶಿವಕುಮಾರ್

ಇದೆಂಥಾ ಅನ್ಯಾಯ, ಮತ್ತೆ 15 ದಿನ 5000 ಕ್ಯೂಸೆಕ್‌ ನೀರು ಬಿಡಲು CWRC ಆದೇಶ; ಹೇಳೋರು ಕೇಳೋರು ಯಾರೂ ಇಲ್ವ?

ಬೆಂಗಳೂರು: ತಾನು ಮಳೆ ಇಲ್ಲದೆ ಬವಣೆಪಡುತ್ತಿದ್ದರೂ ಕಾನೂನು, ನಿಯಮಪಾಲನೆ ಹೆಸರಿನಲ್ಲಿ ಆದೇಶಗಳನ್ನು ಪಾಲಿಸುತ್ತಾ, ಹೇಳಿದಷ್ಟು ನೀರು ಬಿಡುತ್ತಾ ಬಂದಿದ್ದ ರಾಜ್ಯಕ್ಕೆ ಅತಿದೊಡ್ಡ ಅನ್ಯಾಯ ಮಾಡಲಾಗಿದೆ. ಬಗ್ಗಿದವನಿಗೆ ಗುದ್ದು ಹೆಚ್ಚು ಎಂಬಂತೆ ಮತ್ತೆ ಕರ್ನಾಟಕಕ್ಕೆ ತಾಳಿಕೊಳ್ಳಲಾಗದ (Cauvery dispute) ಹೊಡೆತ ನೀಡಲಾಗಿದೆ. ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಸುಸ್ತಾಗಿರುವ ರಾಜ್ಯಕ್ಕೆ ಮತ್ತೆ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು (5000 cusec water per day) ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water regulation Committee) ಆದೇಶ ನೀಡಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕರ್ನಾಟಕದ (karnataka state) ಸಂಕಟವನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ.

ಕಳೆದ ಆಗಸ್ಟ್‌ 29ರಂದು ಇದೇ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು ಬಿಡಬೇಕು ಎಂದು ಆದೇಶ ನೀಡಿತ್ತು. ಮರುದಿನ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಅದನ್ನು ಎತ್ತಿಹಿಡಿದಿತ್ತು.

ಕರ್ನಾಟಕ ತನ್ನಲ್ಲೇ ನೀರಿಲ್ಲದಿದ್ದರೂ, ತಾನೇ ಸಮಸ್ಯೆಯಲ್ಲಿದ್ದರೂ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಆದೇಶವನ್ನು ಪಾಲಿಸಿತ್ತು. ಮಂಗಳವಾರ (ಸೆಪ್ಟೆಂಬರ್‌ 11) ನಡೆಯುವ ಸಭೆಯಲ್ಲಾದರೂ ನೀರು ಬಿಡುಗಡೆಯನ್ನು ನಿಲ್ಲಿಸಲು ಆದೇಶ ಬರಬಹುದು, ಕರ್ನಾಟಕದ ಕಣ್ಣೀರಿಗೆ ಬೆಲೆ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಕೂಡಾ ಹುಸಿಯಾಗಿದೆ.

ಇದನ್ನೂ ಓದಿ | Basavaraja Bommai : ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ ಎಂದ ಬಸವರಾಜ ಬೊಮ್ಮಾಯಿ

ಹೇಳುವವರೇ ಇಲ್ಲ, ಕೇಳುವವರೇ ಇಲ್ಲದಂತಾಗಿದೆ ಪರಿಸ್ಥಿತಿ

ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನದಿ ಕಾವೇರಿ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಕೆಲವು ಕಡೆ ನೀರೇ ಹರಿಯುತ್ತಿಲ್ಲ. 124 ಅಡಿಗಳ ಗರಿಷ್ಠ ಮಿತಿಯಲ್ಲಿ ತುಂಬಿ ತುಳುಕಬೇಕಾಗಿದ್ದ ಕೆ.ಆರ್‌.ಎಸ್‌ ಜಲಾಶಯದಲ್ಲಿ ಈಗ ಇರುವುದು ಕೇವಲ 97 ಅಡಿ ನೀರು ಮಾತ್ರ. ಟಿಎಂಸಿ ಲೆಕ್ಕಾಚಾರದಲ್ಲಿ ನೋಡಿದರೆ ಕೇವಲ 21 ಟಿಎಂಸಿ.

ಆದರೂ ಕೂಡಾ ತಮಿಳುನಾಡು ಸರ್ಕಾರ ತನ್ನ ಪಾಲಿನ ನೀರು ಎಂದು ಹಠ ಹಿಡಿಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಜೀವ ಹಿಂಡುತ್ತಿದೆ. ಸಂಕಷ್ಟ ಕಾಲದಲ್ಲಿ ಹೇಗೆ ನೀರು ಬಿಡಬೇಕು ಎನ್ನುವ ಎಲ್ಲ ಸೂತ್ರಗಳೂ ಗಾಳಿಗೊಡ್ಡಿದ ಸೂತ್ರಪಟದಂತಾಗಿವೆ. ಎಲ್ಲ ಸಮಿತಿಗಳು, ಪ್ರಾಧಿಕಾರಗಳು, ತಮಿಳುನಾಡಿನ ಪರವೇ ನಿಂತು ಕರ್ನಾಟಕವನ್ನು ಸತಾಯಿಸುತ್ತಿವೆ.

ಆರಂಭದಿಂದಲೂ ಕಾಡುತ್ತಿರುವ ತಮಿಳುನಾಡು

ನಿಜವೆಂದರೆ ತಮಿಳುನಾಡು ಕಳೆದ ಆಗಸ್ಟ್‌ 20ರಿಂದಲೇ ನೀರಿಗಾಗಿ ಕರ್ನಾಟಕವನ್ನು ಕಾಡುತ್ತಿದೆ. ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ತನ್ನ ಪಾಲಿನ ಹಕ್ಕು ಎಂಬ ನೆಲೆಯಲ್ಲಿ ಅದು ಕರ್ನಾಟಕವನ್ನು ನೀರಿಗಾಗಿ ಕಾಡುತ್ತಿದೆ. ತನಗೆ ಕರ್ನಾಟಕ ಪ್ರತಿ ದಿನ 20000 ಕ್ಯೂಸೆಕ್‌ ನೀರು ಬಿಡಬೇಕಾಗಿತ್ತು. ಆದರೆ, ಬಿಡುತ್ತಿಲ್ಲ ಎಂದು ಮೊದಲ ತಗಾದೆ ತೆಗೆದಿತ್ತು ತಮಿಳುನಾಡು. ಅದಕ್ಕೆ ಸಾಥ್‌ ನೀಡಿದ ಕಾವೇರಿ ನೀರು ನಿಯಂತ್ರಣ ಮಂಡಳಿ 24000 ಕ್ಯೂಸೆಕ್‌ ಅಲ್ಲದಿದ್ದರೆ 15000 ಕ್ಯೂಸೆಕ್‌ ಆದರೂ ಕೊಡಬೇಕು ಎಂದು ಆದೇಶ ನೀಡಿತ್ತು.

ಆದರೆ, ಕರ್ನಾಟಕ ಇದು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದಾಗ ತಮಿಳುನಾಡು ಸುಪ್ರೀಂಕೋರ್ಟ್‌ ಮೊರೆ ಹೊಕ್ಕಿತ್ತು. ಆದರೆ, ದುರ್ದೈವ. ಸುಪ್ರೀಂಕೋರ್ಟ್‌ ಕೂಡಾ ಕರ್ನಾಟಕದ ವಾದವನ್ನು ಕೇಳಿಸಿಕೊಳ್ಳಲೇ ಇಲ್ಲ. ಕಾವೇರಿ ವಿಚಾರದಲ್ಲಿ ಪ್ರಾಧಿಕಾರದ ನಿಲುವೇ ಅಂತಿಮ ಎಂಬರ್ಥದಲ್ಲಿ ಹೇಳಿಕೆಯೊಂದನ್ನು ನೀಡಿ ಇದರ ವಿಚಾರಣೆ ನಡೆಸಲು ನ್ಯಾಯಮೂರ್ತಿ ಗವಾಯಿ ನೇತೃತ್ವದಲ್ಲಿ ಪೀಠವನ್ನು ರಚನೆ ಮಾಡಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ವಸ್ತುಸ್ಥಿತಿ ಅಧ್ಯಯನ ಮಾಡಿ ತನಗೆ ಅಫಿಡವಿಟ್‌ ಸಲ್ಲಿಸಬೇಕು ಎಂದು ಸೂಚಿಸಿತು.

ಇದನ್ನೂ ಓದಿ | Minister D Sudhakar : ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್‌ರನ್ನು ಬಂಧಿಸಿ: ಎಚ್‌ಡಿಕೆ

ಮತ್ತೆ ಹೊಡೆತ ನೀಡಿದ ನಿಯಂತ್ರಣ ಸಮಿತಿ

ಈ ನಡುವೆ, ಕಾವೇರಿ ನೀರು ನಿರ್ವಹಣಾ ಸಮಿತಿ ಆಗಸ್ಟ್‌ 29ರಂದು ಆದೇಶವೊಂದನ್ನು ಹೊರಡಿಸಿ 15 ದಿನಗಳ ಕಾಲ ತಲಾ 5000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಸೂಚಿಸಿತು. ಇದನ್ನು ಪ್ರಾಧಿಕಾರ ಎತ್ತಿಹಿಡಿಯಿತು. ತಮಿಳುನಾಡಿನ ದಾಕ್ಷಿಣ್ಯಕ್ಕೆ ಬಿದ್ದ ಕರ್ನಾಟಕ ಅಂದಿನಿಂದ ಪ್ರತಿ ದಿನವೂ 5000 ಕ್ಯೂಸೆಕ್‌ ನೀರು ಬಿಡುತ್ತಲೇ ಇದೆ. ಇತ್ತ ಆಗಸ್ಟ್‌ 31ರಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ನೀಡಿದ ಪ್ರಾಧಿಕಾರ, ಕರ್ನಾಟಕಕ್ಕೆ ನೀರಿನ ಸಮಸ್ಯೆ ಇದೆ. ಆದರೂ ನೀರು ಹರಿಸುತ್ತಿದೆ ಎಂಬ ಪಾಸಿಟೀವ್‌ ನೋಟ್‌ನ್ನು ಇಟ್ಟಿತು.

Exit mobile version