Site icon Vistara News

Emergency: ತುರ್ತುಪರಿಸ್ಥಿತಿ ವಿರೋಧಿಸಿದ್ದಕ್ಕೆ ಪೊಲೀಸರು ಒದ್ದು ಒಳಗಾಕಿದ್ರು: ಅನೇಕ ಸ್ವಾರಸ್ಯಗಳನ್ನು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

Siddaramaiah in MLA Training camp 1

#image_title

ಬೆಂಗಳೂರು: ಇಂದಿರಾಗಾಂಧಿ ಪ್ರಧಾನಿಯಾಗಿದ್ದಾ ಗ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದೆ ಹಾಗೂ ಅದಕ್ಕಾಗಿ ಜೈಲಿಗೂ ಹೋಗಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿಕೊಂಡಿದ್ದಾರೆ. ನೆಲಮಂಗಲದ ಬಳಿಯ ಕ್ಷೇಮವನದಲ್ಲಿ ನೂತನ ಶಾಸಕರಿಗೆ ಆಯೋಜಿಸಿರುವ ತರಬೇತಿ ಶಿಬಿರದಲ್ಲಿ ಶಾಸಕರೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು.

ತುರ್ತುಪರಿಸ್ಥಿತಿಯ ಕುರಿತು ಶಿವಮೊಗ್ಗ ಬಿಜೆಪಿ ಶಾಸಕ ಚನ್ನಬಸಪ್ಪ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ತುರ್ತು ಪರಿಸ್ಥಿತಿಯನ್ನು ನಾನು ವಿರೋಧಿಸಿದ್ದೆ. ತುರ್ತು ಪರಿಸ್ಥಿತಿಯನ್ನ ವಿರೋಧಿಸಿ ಭಾಷಣ ಮಾಡಿದ್ದೆ. ಮೈಸೂರಿನ ಸೈಯಾಜಿರಾವ್ ರಸ್ತೆಯಲ್ಲಿ ಟೇಬಲ್ ಹಾಕಿಕೊಂಡು ಭಾಷಣ ಮಾಡಿದ್ದೆ. ತುರ್ತು ಪರಿಸ್ಥಿತಿ ವಿರೋಧಿಸಿ ಹ್ಯಾಂಡ್ ಬಿಲ್ ಹಂಚಿದ್ದೆ. ಪೊಲೀಸರು ಒದ್ದು ಒಳಗೆ ಹಾಕಿದ್ದರು. ದೇವರಾಜ ಠಾಣೆ ಪೊಲೀಸರು ಒಂದು ದಿನ ಜೈಲಿಗೆ ಹಾಕಿದ್ದರು. ತುರ್ತುಪರಿಸ್ಥಿತಿ ತೀವ್ರವಾಗಿ ವಿರೋಧಿಸಿದ್ದೆ ಎಂದರು.

ಏಕೆ ಮೊಬೈಲ್‌ ಬಳಸುವುದಿಲ್ಲ ಎಂಬ ಕುರಿತು ಶಾಸಕ ಸಿದ್ದು ಪಾಟೀಲ್ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿ, ಆರು ತಿಂಗಳು ಮೊಬೈಲ್ ಬಳಕೆ ಮಾಡಿದ್ದೆ. ಜನ ಮಧ್ಯ ರಾತ್ರಿ ಒಂದು ಗಂಟೆಗೆ ಕರೆ ಮಾಡುತ್ತಿದ್ದರು. ಕೆಲವರು ಕುಡಿದು ಕರೆ ಮಾಡುತ್ತಿದ್ದರು. ಅದಕ್ಕೆ ಮೊಬೈಲ್ ಬಳಕೆ‌ ಬಿಟ್ಟೆ‌. ಈಗ ಆಪ್ತ ಸಹಾಯಕರು ಮೊಬೈಲ್ ಮ್ಯಾನೇಜ್ ಮಾಡ್ತಾರೆ ಎಂದರು.

ಈಗಿನ ಕಾಲದ ರಾಜಕೀಯಕ್ಕೂ, ನಿಮ್ಮ ಕಾಲದ ರಾಜಕೀಯಕ್ಕೆ ವ್ಯತ್ಯಾಸ ಏನು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ‌ ಕಾಲದಲ್ಲಿ ಪಕ್ಷಾಂತರ ಇರಲಿಲ್ಲ. ಅಪರೇಷನ್ ಕಮಲ, ಅಮರೇಷನ್ ಕಾಂಗ್ರೆಸ್, ಅಪರೇಷನ್ ತೆನೆಹೊತ್ತ ಮಹಿಳೆ ಇದ್ಯಾವುದು ಇರಲಿಲ್ಲ. ಇಗ ಅಪರೇಷನ್ ಕಮಲ ಶುರುವಾಗಿದೆ ಎಂದರು.

ಇದನ್ನೂ ಓದಿ: ಪ್ರತಾಪ್‌ ಸಿಂಹ ಸಂದರ್ಶನ: ಭರವಸೆ ಈಡೇರಿಸಲು ಸಿದ್ದರಾಮಯ್ಯ ವಿಫಲ; ದೇಶದ ಭವ್ಯ ಭವಿಷ್ಯಕ್ಕಾಗಿ ಮತ್ತೊಮ್ಮೆ ಮೋದಿ ಗೆಲ್ಲಬೇಕು

ಅಧ್ಯಾತ್ಮವೇ ಭಾರತದ ಆತ್ಮ: ಖಾದರ್‌

ನೂತನ 70 ಶಾಸಕರಲ್ಲಿ 55 ಶಾಸಕರು ಬಂದಿದ್ದಾರೆ ಎಂದು ತಿಳಿಸಿದ ಸ್ಪೀಕರ್‌ ಯು.ಟಿ. ಖಾದರ್‌, ಹಲವರು ಇವತ್ತು ತರಬೇತಿಗೆ ಬರ್ತಿದ್ದಾರೆ. ಕೆಡಿಪಿ‌ ಸಭೆ ಇರೋದ್ರಿಂದ ಇಂದು ಕೆಲವರು ಬಂದಿಲ್ಲ. ಶಾಸಕರೆಲ್ಲ ಶ್ರದ್ದೆಯಿಂದ ಭಾಗವಹಿಸುತ್ತಿದ್ದಾರೆ. ಶಾಸಕರ ವ್ಯಕ್ತಿತ್ವ ರೂಪಿಸೋದು‌ ನನ್ನ ಜವಾಬ್ದಾರಿ. ಸದನದಲ್ಲಿ ಭಾಗವಹಿಸುವ ಧೈರ್ಯ, ಆತ್ಮವಿಶ್ವಾಸ ಈ ತರಬೇತಿ ‌ಕೊಡುತ್ತದೆ ಎಂದರು.

ರಾಜಕೀಯ ಕೋರ್ಸ್ ಆರಂಭಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಡಿಗ್ರಿ‌ ನಂತರ‌ ರಾಜಕೀಯಕ್ಕೆ ಬರೋದಕ್ಕೆ ಕೋರ್ಸ್ ಇಲ್ಲ. ಈ ಬಗ್ಗೆ ಕೋರ್ಸ್ ಮಾಡಲು ಚಿಂತನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದೇನೆ ಎಂದರು. ರವಿಶಂಕರ್ ಗುರೂಜಿ ಕರೆಸುತ್ತಿರೋದಕ್ಕೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಾಮಾಜಿಕ‌ ಜಾಲತಾಣದಲ್ಲಿ ನೋಡಿ ಪರವಿರೋಧ ಮಾಡ್ತಿದ್ದಾರೆ. ಟೀಕೆ ಟಿಪ್ಪಣಿ ಪ್ರಜಾಪ್ರಭುತ್ವದ ಸೌಂದರ್ಯ ಹೆಚ್ಚು ಮಾಡುತ್ತದೆ. ನಾವು ಎಲ್ಲರನ್ನು ಗೌರವಿಸುತ್ತೇವೆ. ಭಾರತದ ಆತ್ಮವೇ ಅಧ್ಯಾತ್ಮ. ನಾವು ಎಲ್ಲರಿಗೂ ಗೌರವ ಕೊಡಬೇಕು. ನಾನು‌ ಯಾವುದೇ ರಾಜಕೀಯ ಪಕ್ಷದ ಸದಸ್ಯ ಅಲ್ಲ. ಎಲ್ಲರನ್ನೂ ಗೌರವಿಸೋದು ನನ್ನ ಕರ್ತವ್ಯ ಎಂದರು.

Exit mobile version