Site icon Vistara News

CM Siddaramaiah: ಸಿದ್ದರಾಮಯ್ಯಗೆ ಧಮ್ಮು, ತಾಕತ್ತು ಇದ್ದರೆ NIAಗೆ ಮೌಲ್ವಿ ಪ್ರಕರಣ ವಹಿಸಲಿ: ಯತ್ನಾಳ್

Basanagowda Patil Yatnal and CM SIddaramaiah infront of vidhanasoudha

ದೇವನಹಳ್ಳಿ: ‌ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagowda Pateel Yatnal) ನಡುವಿನ “ಮೌಲ್ವಿ” ಸಮರ ತಾರಕಕ್ಕೇರಿದೆ. ಮುಸ್ಲಿಂ ಮೌಲ್ವಿ ತನ್ವೀರ್‌ ಪೀರಾ (Moulvi thanveer Peera) ಐಸಿಸ್‌ ಸಂಘಟನೆ ಜತೆ ಸಂಪರ್ಕ ಹೊಂದಿದ್ದು, ಅವರು ಸಿಎಂ ಜತೆ ಹಲವು ಬಾರಿ ವೇದಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಎನ್‌ಐಎ ತನಿಖೆಯಾಗಬೇಕು ಎಂದು ಯತ್ನಾಳ್‌ ಆಗ್ರಹಿಸಿದ್ದಕ್ಕೆ, ಕೇಂದ್ರದಿಂದ ತನಿಖೆ ನಡೆಸಿ ಎಂದು ಸಿಎಂ ಸವಾಲು ಹಾಕಿದ್ದರು. ಈಗ ಪುನಃ ಯತ್ನಾಳ್‌ ಮಾತನಾಡಿದ್ದು, ಸಿದ್ದರಾಮಯ್ಯ ಸರ್ಕಾರಕ್ಕೆ, ಸಚಿವರಿಗೆ ಧಮ್ಮು, ತಾಕತ್ತು ಇದ್ದರೆ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈಚೆಗೆ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ ಸಿದ್ದರಾಮಯ್ಯ ‌ಅವರು ವೇದಿಕೆ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಎನ್‌ಐಎ ತನಿಖೆ ಆಗಬೇಕು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ, ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ತನ್ವೀರ್‌ ಪೀರಾ ಅವರ ಜತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ, ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ. ಹೀಗಾಗಿ ತನಿಖೆ ನಡೆಸಿ ಪ್ರೂವ್‌ ಮಾಡಿ ಎಂದು ಸವಾಲು ಹಾಕಿದ್ದರು.

ಈಗ ಇದಕ್ಕೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್, ಸಿದ್ದರಾಮಯ್ಯ ಸರ್ಕಾರಕ್ಕೆ, ಸಚಿವರಿಗೆ ಧಮ್ಮು, ತಾಕತ್ತು ಇದ್ದರೆ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಿ. ಮೌಲ್ವಿ ವಿರುದ್ಧದ ತನಿಖೆಗೆ ನಾನು ಸಿದ್ಧನಿದ್ದೇನೆ. ಎನ್‌ಐಎ ತನಿಖೆ ಮಾಡುತ್ತದೆ. ಕಾಂಗ್ರೆಸ್‌ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೂಲ ಮೌಲ್ವಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ‌. ಸಿದ್ದರಾಮಯ್ಯ ಸರ್ಕಾರಕ್ಕೆ, ಸಚಿವರಿಗೆ ಧಮ್ಮು ತಾಕತ್ತು ಇದ್ದರೆ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಲಿ. ಎಲ್ಲ ಸತ್ಯಾಂಶಗಳು ಹೊರಗೆ ಬರುತ್ತವೆ ಎಂದು ಸವಾಲು ಹಾಕಿದ್ದಾರೆ.

ಡಿ.ಕೆ. ಶಿವಕುಮಾರ್‌ಗೆ ತಿರುಗೇಟು

ಬಸನಗೌಡ ಪಾಟೀಲ್‌ ಯತ್ನಾಳ್‌ರನ್ನು ಆಸ್ಪತ್ರೆಗೆ ಸೇರಿಸಬೇಕು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿರುವ ಯತ್ನಾಳ್‌, ಅವರು ನಾರಾಯಣ ಹೃದಯಾಲಯಕ್ಕೆ ಸೇರಿಕೊಳ್ಳಲು ಬೆಡ್ ರೆಡಿ ಮಾಡಿಕೊಳ್ಳಬೇಕು. ಭ್ರಷ್ಟಾಚಾರ ಆರೋಪ ಹೊತ್ತಿರುವವರಿಂದ ನಾನೇನು ಸಲಹೆ ಪಡೆಯಲ್ಲ. ನೈತಿಕತೆ ಇದ್ದರೆ ಕ್ಯಾಬಿನೆಟ್‌ನಿಂದ ಯಾಕೆ ಸಿಬಿಐ ಪ್ರಕರಣವನ್ನು ವಾಪಸ್ ಪಡೆಯಬೇಕಿತ್ತು? ಅವರು ವಾಪಸ್ ಪಡೆದ ಹಿನ್ನೆಲೆ‌‌ಯಲ್ಲಿ ನಾನು ಕಾನೂನು ಹೋರಾಟಕ್ಕೆ ಸಿದ್ಧನಾಗಿದ್ದೇನೆ ಎಂದು ಹೇಳಿದರು.

ಅಮಿತ್‌ ಶಾಗೂ ಪತ್ರ ಬರೆದಿದ್ದ ಯತ್ನಾಳ್‌

ತನ್ವೀರ್‌ ಪೀರಾ ಅವರು ಐಸಿಸ್‌ ಜತೆಗೆ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ಅದಕ್ಕೆ ಸಂಬಂಧಿಸಿ ಹಲವು ಫೋಟೊ ಮತ್ತು ಮಾಹಿತಿಗಳನ್ನು ಬುಧವಾರ ಬಿಡುಗಡೆ ಮಾಡಿದ್ದರು. ಜತೆ‌ಗೆ ಮೌಲ್ವಿ ಬಗ್ಗೆ ಎನ್‌ಐಎ ತನಿಖೆಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಪತ್ರ ಬರೆದು ಮನವಿ ಮಾಡಿದ್ದರು.

ಇದನ್ನೂ ಓದಿ: Health Card: ಸರ್ಕಾರದ ಹೊಸ ಹೆಲ್ತ್‌ ಕಾರ್ಡ್‌; ದೇಶದ ಎಲ್ಲೆಡೆ ಸಿಗಲಿದೆ Treatment! ಏನಿದರ ವಿಶೇಷತೆ?

ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಗಳೇನು?

Exit mobile version