Site icon Vistara News

CM Siddaramaiah : ಶಾಸಕ, ಸಂಸದರಿಗೆ Good News; ಇನ್ನು ಮುಂದೆ ಪ್ರತಿ ಶನಿವಾರ ಸಿಎಂ ಸಿದ್ದರಾಮಯ್ಯ ನಿಮ್ಮನ್ನು ಭೇಟಿಯಾಗ್ತಾರೆ!

CM Siddaramiah new

ಬೆಂಗಳೂರು: ಇನ್ನು ಮುಂದೆ ಪ್ರತಿ ಶನಿವಾರ ರಾಜ್ಯದ ಯಾವುದೇ ಸಂಸದರು, ಶಾಸಕರು (Every saturday meet with MLAs and MPs) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ (Home office Krishna) ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಸೆಪ್ಟೆಂಬರ್‌ 23ರಿಂದಲೇ ಜಾರಿಗೆ ಬಂದಿದೆ.

ಮುಖ್ಯಮಂತ್ರಿಗಳು ಇನ್ನು ಮುಂದೆ ಪ್ರತಿ ಶನಿವಾರ ಬೆಳಗ್ಗೆ 11ಯಿಂದ ಮಧ್ಯಾಹ್ನ 2 ಗಂಟೆಯ ತನಕ ಸಂಸದರು, ರಾಜ್ಯದ ಎಲ್ಲ ವಿಧಾನಸಭೆ ಸದಸ್ಯರು ಮತ್ತು ವಿಧಾನಪರಿಷತ್‌ ಸದಸ್ಯರ ಭೇಟಿಗೆ ಲಭ್ಯವಿರುತ್ತಾರೆ. ಈ ವೇಳೆ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಅನುದಾನಗಳ ಬಗ್ಗೆ ಚರ್ಚೆ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ. ಚಿರಂಜೀವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮವಿದ್ದು, ಯಾವ ಪಕ್ಷದ ಶಾಸಕರು, ಸಂಸದರು ಬೇಕಾದರೂ ಮುಕ್ತವಾಗಿ ಬಂದು ತಮ್ಮ ಅಹವಾಲುಗಳ ಬಗ್ಗೆ ಮಾತುಕತೆ ನಡೆಸಬಹುದಾಗಿದೆ.

ಭೇಟಿಗೆ ಮೊದಲು ಚೆಕ್‌ ಮಾಡಿಕೊಳ್ಳಿ

ಇದು ಮುಕ್ತವಾದ ಭೇಟಿಯೇ ಆಗಿದ್ದರೂ ಮುಖ್ಯಮಂತ್ರಿಗಳ ಲಭ್ಯತೆಯ ಆಧಾರದಲ್ಲಿ ನಡೆಯುತ್ತದೆ. ಮುಖ್ಯಮಂತ್ರಿ ತೀರಾ ಅನಿವಾರ್ಯವಾದ ಸಂದರ್ಭ ಹೊರತುಪಡಿಸಿ ಪ್ರತಿ ಶನಿವಾರ ಭೇಟಿಗೆ ಲಭ್ಯರಿರುತ್ತಾರೆ. ಅದರೆ, ಮೊದಲೇ ಅವರ ಇರುವಿಕೆಯನ್ನು ಖಾತರಿ ಮಾಡಿಕೊಂಡು ಬರಬಹುದು ಎಂದು ತಿಳಿಸಲಾಗಿದೆ.

ಎಲ್ಲರೂ ಒಂದೇ ಬಾರಿಗೆ ಬಂದು ಭೇಟಿಯಾಗಲು ಒತ್ತಡ ಸೃಷ್ಟಿಸುವುದಕ್ಕಿಂತ ಒಂದು ದಿನ ಎಷ್ಟು ಜನರು ಭೇಟಿಯಾಗಬಹುದು ಎಂಬುದನ್ನು ಪರಿಗಣಿಸಿ ಒಂದು ದಿನದಲ್ಲಿ ಎಷ್ಟು ಮಂದಿಗೆ ಅವಕಾಶ ನೀಡಬಹುದೋ ಅಷ್ಟು ಜನರು ಮಾತ್ರ ಬಂದರೆ ಒಳ್ಳೆಯದು ಎಂದು ತಿಳಿಸಲಾಗಿದೆ.

ಶಾಕಸರು ಮತ್ತು ಸಂಸದರು ಮುಂದಿನ ಶನಿವಾರದ ಭೇಟಿಗಾಗಿ ಮೊದಲೇ ಬುಕ್‌ ಮಾಡಿಕೊಂಡರೆ ಸಮಯಾವಕಾಶದ ಜತೆಗೆ ಸಮಯವನ್ನೂ ನಿಗದಿಪಡಿಸಲು ಅವಕಾಶವಾಗುತ್ತದೆ ಎನ್ನಲಾಗಿದೆ. ವಿಶೇಷಾಧಿಕಾರಿಗಳು ಈ ಎಲ್ಲ ಅಂಶಗಳನ್ನು ಪರಿಗಣಿಸಿ ಭೇಟಿಗೆ ಅವಕಾಶ ಕಲ್ಪಿಸಲಿದ್ದಾರೆ.

ಶಾಸಕರ ಭೇಟಿಗೆ ಅವಕಾಶ ಕೇಳಿದ್ದ ರಾಯರೆಡ್ಡಿ

ಇತ್ತೀಚಿಗೆ ಶಾಸಕ ಬಸವರಾಜ ರಾಯರೆಡ್ಡಿ ಸೇರಿದಂತೆ ಕಾಂಗ್ರೆಸ್​ ಪಕ್ಷದ ಕೆಲವು ಶಾಸಕರು, ವಿವಿಧ ಸಚಿವರು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದು ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ, ಶಾಸಕರ ಭೇಟಿಗೆ ಅವಕಾಶ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಗಳು ಶಾಸಕರ ಜತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುವುದರಿಂದ ಹಲವಾರು ಸಮಸ್ಯೆಗಳು ಬಗೆಹರಿಯುತ್ತವೆ ಎನ್ನಲಾಗಿದೆ. ರಾಜಕೀಯವಾದುದು, ಇತರ ಸಾಮಾಜಿಕ ವಿಚಾರಗಳಿಗೂ ಇದು ಅನುಕೂಲ ಎನ್ನಲಾಗಿದೆ. ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ತಮಗೆ ಸಿಎಂ ಜತೆ ಮಾತನಾಡಲು ಅವಕಾಶವೇ ಸಿಗುತ್ತಿಲ್ಲ, ಅನುದಾನ ಸಿಗುತ್ತಿಲ್ಲ ಎಂಬ ಕಾರಣ ನೀಡಿಯೇ 17 ಶಾಸಕರು ಪಕ್ಷ ಬಿಟ್ಟು ಹೋಗಿದ್ದರು. ವ್ಯವಸ್ಥೆಯಲ್ಲಿ ಶಾಸಕರ ಜತೆ ಸಂವಹನ ಅತ್ಯಂತ ಮುಖ್ಯ ಎಂಬುದನ್ನು ಮನಗಂಡು ಸಿದ್ದರಾಮಯ್ಯ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: CM Siddaramaiah: ಬರಿಗಾಲಲ್ಲಿ ಬರುವವರನ್ನು ಕಾರಲ್ಲಿ ಓಡಾಡೋರು ಗೌರವಿಸಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ

ಸಿದ್ದರಾಮಯ್ಯ ಸಭೆಗಳೆಂದರೆ ಅತ್ಯಂತ ಗಹನ

ಅದರ ಜತೆಗೆ ಆಡಳಿತಾತ್ಮಕ ವಿಷಯದಲ್ಲಿ ಸಾಕಷ್ಟು ಪರಿಣತಿಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ಯಾವುದೇ ಸಭೆಯನ್ನಾದರೂ ಪರಿಪೂರ್ಣವಾಗಿ ನಡೆಯುತ್ತದೆ. ಅವರು ನಡೆಸುವ ಕೆಡಿಪಿ ಸಭೆಗಳು, ಅಧಿಕಾರಿಗಳ ಸಭೆಗಳೂ ಅತ್ಯಂತ ಗಹನವಾಗಿರುವುದು ಇದೇ ಕಾರಣಕ್ಕಾಗಿ. ಕೆಲವೊಮ್ಮೆ ಅವರು ಮಧ್ಯಾಹ್ನದ ಊಟವನ್ನೂ ಟೇಬಲ್‌ಗೇ ತರಿಸಿಕೊಂಡು ನಿರಂತರ ಏಳೆಂಟು ಗಂಟೆ ಸಭೆ ನಡೆಸಿದ್ದೂ ಇದೆ. ಹಲವಾರು ವಿಚಾರಗಳ ತೀರ್ಮಾನಗಳು ಅಲ್ಲೇ ನಡೆಯುತ್ತವೆ. ಏನು ಮಾಡಬೇಕು, ಏನು ಮಾಡಬಾರದು ಎಂಬ ಸ್ಪಷ್ಟ ಸೂಚನೆಯನ್ನು ಅಲ್ಲೇ ನೀಡಲಾಗುತ್ತದೆ.

Exit mobile version