Site icon Vistara News

ಅಥಣಿಯಲ್ಲಿ ಕಾಲೇಜು ಬಸ್-‌ ಲಾರಿ ಡಿಕ್ಕಿ, ಇಬ್ಬರ ಸಾವು

athani

ಚಿಕ್ಕೋಡಿ: ಅಥಣಿ ಹೊರವಲಯದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಾಲೇಜು ಬಸ್ಸು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರೂ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನೀಯರಿಗೆ ಗಂಭೀರ ಗಾಯಗಳಾಗಿವೆ. ಗಾಯಾಗಳುಗಳನ್ನು ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬನಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಕಾಲೇಜು ಬಸ್, ಪಿಯು ವಿದ್ಯಾರ್ಥಿನಿಯರನ್ನು ಹೊತ್ತು ಅಥಣಿ ಪಟ್ಟಣದತ್ತ ಬರುತ್ತಿತ್ತು. ಅಥಣಿ ಪಟ್ಟಣದಿಂದ ವಿಜಯಪುರದ ಕಡೆಗೆ ಲಾರಿ ಹೊರಟಿತ್ತು. ಎರಡೂ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಬಾಲಕಿ ಸತ್ತ ಬಳಿಕ ಪತ್ತೆಯಾಯ್ತು ನಕಲಿ ನಂಬರ್ ಪ್ಲೇಟ್ ವಂಚನೆ

Exit mobile version