Site icon Vistara News

Karnataka Elections 2023 : ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡರ ಕುಟುಂಬದ 8 ಮಂದಿ, ಭವಾನಿ ರೇವಣ್ಣಗೂ ಸ್ಥಾನ

Tene hotha mahileyaru

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗಾಗಿ (Karnataka Elections 2023) ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ತಲಾ 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಿಗೇ ಜಾತ್ಯತೀತ ಜನತಾದಳವೂ 27 ಮಂದಿಯ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದೇವೇಗೌಡರ ಕುಟುಂಬದ ಎಂಟು ಮಂದಿ ಸ್ಥಾನ ಪಡೆದಿದ್ದಾರೆ. ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ಗಾಗಿ ಭಾರಿ ಹೋರಾಟವನ್ನು ಮಾಡಿದ್ದ ಭವಾನಿ ರೇವಣ್ಣ ಅವರೂ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಂಚರತ್ನ ರಥಯಾತ್ರೆ ಕಾರ್ಯಕ್ರಮದೊಂದಿಗೆ ಬಹು ಹಿಂದೆಯೇ ಪ್ರಚಾರ ಕಣಕ್ಕೆ ಧುಮುಕಿದ್ದ ಜೆಡಿಎಸ್‌ ಈಗಾಗಲೇ 210 ಅಭ್ಯರ್ಥಿಗಳನ್ನು ಫೈನಲ್‌ ಮಾಡಿದೆ. ಇದರಲ್ಲಿ ಏಳು ಕಡೆಗಳಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದೆ. ತನ್ನ ಪ್ರಚಾರವನ್ನು ಇನ್ನಷ್ಟು ಬಿರುಸುಗೊಳಿಸುವುದಕ್ಕಾಗಿ ಸ್ಟಾರ್‌ ಪ್ರಚಾರಕರನ್ನು ನೇಮಕ ಮಾಡಿದೆ.

ಒಟ್ಟು 27 ಮಂದಿಯ ಪಟ್ಟಿಯಲ್ಲಿರುವ ಗೌಡರ ಕುಟುಂಬದ ಸದಸ್ಯರೆಂದರೆ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ, ನಿಖಿಲ್‌ ಕುಮಾರಸ್ವಾಮಿ, ಪ್ರಜ್ವಲ್‌ ರೇವಣ್ಣ, ಅನಿತಾ ಕುಮಾರಸ್ವಾಮಿ ಮತ್ತು ಡಾ. ಸೂರಜ್‌ ರೇವಣ್ಣ. ಟಾಪ್‌ 10ರಲ್ಲಿ ಮಧ್ಯೆ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಮತ್ತು ಕುಪೇಂದ್ರ ರೆಡ್ಡಿ ಬಿಟ್ಟರೆ ಉಳಿದವರೆಲ್ಲರೂ ದೇವೇಗೌಡರ ಕುಟುಂಬಿಕರೆ ಇರುವುದು ವಿಶೇಷ.

ತಾರಾ ಪ್ರಚಾರಕರಲ್ಲಿ ಮೂವರು ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಅವರೆಂದರೆ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ ಮತ್ತು ನಜ್ಮಾ ನಜೀರ್‌.

ಪಟ್ಟಿಯಲ್ಲಿ ಯಾರ್ಯಾರು ಇದ್ದಾರೆ?

ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್‌.ಡಿ. ರೇವಣ್ಣ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪ್ಪೇಂದ್ರ ರೆಡ್ಡಿ, ಸೂರಜ್ ರೇವಣ್ಣ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಎಸ್‌.ಎಲ್‌ ಭೋಜೇಗೌಡ, ಬಿ.ಎಂ.ಫಾರೂಕ್, ಜಫ್ರುಲ್ಲಾ ಖಾನ್, ಶ್ರೀಕಂಠೇಗೌಡ. ಚೌಡರೆಡ್ಡ ತೂಪಲ್ಲಿ, ಅಪ್ಪಾಜಿ ಗೌಡ, ರಮೇಶ್ ಗೌಡ, ಎಪಿ‌ ರಂಗನಾಥ್, ನಜ್ಮಾ ನಜೀರ್, ಸಯ್ಯದ್ ರೋಷನ್ ಅಬ್ಬಾಸ್, ಸಲಾಂ ಪಾಷಾ, ಬಾಬಾ ಬುಕರಿ, ಬಸವರಾಜ್ ಕೊಡಾಂಬಲ್, ಶ ಉಲ್ ಹಕ್ ಬುಕರಿ, ಅಫ್ಸಲ್ ಎಸ್‌ಎಂ.

ಕಾಂಗ್ರೆಸ್‌, ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯೂ ಬಿಡುಗಡೆ

ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ನ ತಾರಾ ಪ್ರಚಾರಕರ ಪಟ್ಟಿಯೂ ಬಿಡುಗಡೆಯಾಗಿದೆ. ಬಿಜೆಪಿ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೀಡ್‌ ಮಾಡುತ್ತಿದ್ದರೆ ಕಾಂಗ್ರೆಸ್‌ ಪಟ್ಟಿಗೆ ಸೋನಿಯಾ ಗಾಂಧಿ ಅಧಿನಾಯಕಿ. ಬಿಜೆಪಿ ಪಟ್ಟಿಯಲ್ಲಿ ಬಿ.ವೈ. ವಿಜಯೇಂದ್ರ ಅವರ ಅನುಪಸ್ಥಿತಿ ಎದ್ದುಕಂಡರೆ, ಕೇವಲ ಮೂರು ದಿನದ ಹಿಂದಷ್ಟೇ ಪಕ್ಷ ಸೇರಿದ ಜಗದೀಶ್‌ ಶೆಟ್ಟರ್‌ ಅವರು ಸ್ಟಾರ್‌ ಪ್ರಚಾರಕರಾಗಿ ಕಾಣಿಸಿಕೊಂಡ ವಿಶೇಷತೆ ಇರುವುದು ಕಾಂಗ್ರೆಸ್‌ ಪಟ್ಟಿಯಲ್ಲಿ.

ಇದನ್ನೂ ಓದಿ : Karnataka Elections : 3 ದಿನ ಹಿಂದಷ್ಟೇ ಬಿಜೆಪಿ ಬಿಟ್ಟು ಬಂದ ಜಗದೀಶ್‌ ಶೆಟ್ಟರ್‌ ಈಗ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕ, ರಮ್ಯಾಗೂ ಸ್ಥಾನ
ಇದನ್ನೂ ಓದಿ : Karnataka Elections : ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಪ್ರಕಟ; ನರೇಂದ್ರ ಮೋದಿಯೇ ಪ್ರಧಾನ, ಬಿ.ಎಲ್‌. ಸಂತೋಷ್‌, ವಿಜಯೇಂದ್ರ ಹೆಸರಿಲ್ಲ

Exit mobile version