Site icon Vistara News

Kalasa Bhanduri | ಹೋರಾಟ ಮಾಡಿದವರನ್ನು ಹೊಡೆದು ಜೈಲಿಗೆ ಕಳಿಸಿದ್ದು ಕಾಂಗ್ರೆಸ್‌: ಸಚಿವ ಗೋವಿಂದ ಕಾರಜೋಳ

Ex Minister Govind karjol

ಬೆಂಗಳೂರು: ಕಳಸಾ-ಬಂಡೂರಿ (Kalasa Bhanduri) ನೀರಿಗಾಗಿ ಹೋರಾಟ ಮಾಡುತ್ತಿದ್ದವರನ್ನು ಜೈಲಿಗೆ ಅಟ್ಟಿದ ಕಾಂಗ್ರೆಸ್‌ ಇದೀಗ ಅದೇ ಯೋಜನೆಗೆ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾರಜೋಳ, ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಕಳಸ ಬಂಡೂರಿಗಾಗಿ ಕಾಂಗ್ರೆಸ್‌ನವರು ಹೋರಾಟ ಶುರು ಮಾಡಿದ್ದಾರೆ. 2018ರವರೆಗೂ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು.

ಆ ಸಂದರ್ಭದಲ್ಲಿ 1,080 ದಿನ ಅಲ್ಲಿನ ಜನರು ಹೋರಾಟ ಮಾಡಿದ್ದರು. ಹೋರಾಟ ಮಾಡಿದ ಜನರನ್ನು ಹೊಡೆದು ಜೈಲಿಗೆ ಕಳುಹಿಸಿದ್ದರು. ಈಗ ಅವರು ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು, ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಒಂದು ಹನಿಯೂ ಕೊಡುವುದಿಲ್ಲ ಎಂದು ಹೇಳಿದ್ದರು. ಆಗ ಕಾಂಗ್ರೆಸ್ ನಾಯಕರು ಬಾಯಿಗೆ ಕಡುಬು ತುರಿಕಿಕೊಂಡು ಕೂತಿದ್ದರು. ತಡೆಗೋಡೆ ಕಟ್ಟಿದವರು ಇವತ್ತು ಹೋರಾಟ ಮಾಡುತ್ತಿದ್ದಾರೆ.

ಅದು ಅನಾಥ ಶಿಶುವೂ ಅಲ್ಲ, ಕಾಂಗ್ರೆಸ್‌ಗೆ ವಾರಸುದಾರರ ಶಿಶುವೂ ಅಲ್ಲ. ಕಾಂಗ್ರೆಸ್‌ಗೆ ಯಾರು ವಾಸುದಾರ? ಡಿಪಿಎಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಇನ್ನೂ ಒಂದು ತಿಂಗಳಲ್ಲಿ ಕಾಮಗಾರಿ ಶುರು ಮಾಡುತ್ತೇವೆ. ಕಾಂಗ್ರೆಸ್ ನಾಯಕರಿಗೂ ಆಹ್ವಾನ ಕೊಡುತ್ತೇವೆ. ಅವರು ಬೇಕಿದ್ದರೆ ಕಾಮಗಾರಿ ಕಾರ್ಯಕ್ರಮಕ್ಕೆ ಬರಲಿ ಎಂದರು.

ಮಹದಾಯಿ ನದಿ ಯೋಜನೆಗೆ ಗೋವಾ ಸರ್ಕಾರ ವಿರೋಧ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿ, ನಾವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೆ. ನ್ಯಾಯಾಧಿಕರಣ‌ ನದಿ ನೀರು ಹಂಚಿಕೆ ಮಾಡಿದಾಗ, ಅದನ್ನು ಯಾರೂ ಕೂಡ ತಕರಾರು ಮಾಡಬಾರದು. ಶಾಸನ ಬದ್ದವಾಗಿ ಸಿಕ್ಕಿರುವ ನೀರನ್ನು ಉಪಯೋಗಿಸಿಕೊಳ್ಳಲು ಯಾವ ದೊಣ್ಣೆ ನಾಯಕನ‌ ಅಪ್ಪಣೆಯೂ ಬೇಕಾಗಿಲ್ಲ ಎಂದರು.

ಇದನ್ನೂ ಓದಿ | Kalasa Banduri | ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಅನುಮತಿ: ಸಚಿವ ಪ್ರಲ್ಹಾದ್‌ ಜೋಷಿ ಮಾಹಿತಿ

Exit mobile version