1. ಸಂಪುಟ ಸಭೆ ನಿರ್ಧಾರ: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಿಶ್ಚಿತ; ʼಬಿಜೆಪಿʼ ಪಠ್ಯ ತೆಗೆಯುವುದು ಖಚಿತ
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ವಿವಿಧ ವಿಚಾರಗಳನ್ನು ಇರಿಸಿಕೊಂಡು ನಡೆದ ಮೊದಲ ಸಂಪುಟ ಸಭೆಯಲ್ಲಿ ಅನೇಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಒಟ್ಟು 17 ವಿಷಯಗಳಲ್ಲಿ ಚರ್ಚೆ ನಡೆಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ, ಶಾಲೆಗಳಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆ ಜತೆಗೆ ಸಂವಿಧಾನದ ಪೀಠೀಕೆ ಓದುವುದನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಸಂಪುಟ ಸಭೆ ನಿರ್ಧಾರ: 13 ತಿಂಗಳ ಹಿಂದಷ್ಟೆ ಜಾರಿಯಾಗಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್: ಸಿಡಿದೆದ್ದ ಬಿಜೆಪಿ
ಅನಧಿಕೃತವಾಗಿ ಹಾಗೂ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಗಟ್ಟುವ ಸಲುವಾಗಿ 2022ರ ಮೇನಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆಯಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Congress Guarantee: 5 ಕೆ.ಜಿ. ಅಕ್ಕಿ ದುಡ್ಡನ್ನು ಅಕೌಂಟಿಗೆ ಹಾಕಿ ಎಂದ ಮಾಜಿ ಸಿಎಂ ಬೊಮ್ಮಾಯಿ: ಪ್ರತಿಯೊಬ್ಬರಿಗೆ ಎಷ್ಟು ಸಿಗುತ್ತದೆ?
ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದಿಂದ ತೊಡರುಗಾಲು ಹಾಕಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದನ್ನು ಖಂಡಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜೂನ್ ತಿಂಗಳಲ್ಲಿ ಪ್ರತಿಯೊಬ್ಬರ ಖಾತೆಗೆ ಹಣವನ್ನು ಹಾಕುವಂತೆ ಆಗ್ರಹಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Gruhalakshmi scheme : ಗೃಹಲಕ್ಷ್ಮಿ ಯೋಜನೆಗೆ ಶುಭ ಶುಕ್ರವಾರದಿಂದ ಅರ್ಜಿ ಸಲ್ಲಿಕೆ! ದಾಖಲೆ ಏನೇನು ಬೇಕು?
4. Congress Guarantee: 200 ಯುನಿಟ್ ಫ್ರೀ ಕರೆಂಟ್ ಕೊಡಬೇಡಿ; ಅದರ ಬದಲು ಹೀಗೆ ಮಾಡಿ ಎಂದ ರೈತ ಒಕ್ಕೂಟ
ಈಗಾಗಲೆ ಕಾಂಗ್ರೆಸ್ ಸರ್ಕಾರ ಊದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆರಂಭಿಸಿದೆ. ಮೊದಲನೆಯದಾಗಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಇನ್ನೂ ಆರಂಭಿಸಬೇಕು. ಇದೆ ನಡುವೆಯೇ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರೈತ ಸಂಘಟನೆಗಳ ಒಕ್ಕೂಟ ವಿನೂತನವಾದ ಸಲಹೆಯೊಂದನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. KCET 2023 Result : ಸಿಇಟಿ ಫಲಿತಾಂಶ ಪ್ರಕಟ; ಬೆಂಗಳೂರಿನ ವಿಘ್ನೇಶ್ ನಟರಾಜ್ ಕುಮಾರ್‌ಗೆ ಮೊದಲ ರ‍್ಯಾಂಕ್
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷ ಪ್ರಾಧಿಕಾರ (ಕೆಇಎ) ನಡೆಸಿದ ʻಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆʼಯ (KCET 2023) ಫಲಿತಾಂಶ (KCET 2023 Result) ಪ್ರಕಟವಾಗಿದ್ದು, ಬೆಂಗಳೂರಿನ ಕುಮಾರನ್ಸ್ ಕಾಲೇಜಿನ ವಿಘ್ನೇಶ್ ನಟರಾಜ್ ಕುಮಾರ್ ಎಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Gruhalakshmi scheme : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ದಿನಾಂಕ ಮುಂದೂಡಿಕೆ!
ರಾಜ್ಯಾದ್ಯಂತ ಸದ್ದು ಮಾಡಿರುವ, ಚರ್ಚೆಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಸ್ಕೀಮ್ (Congress Guarantee) ಗೃಹ ಲಕ್ಷ್ಮೀ ಯೋಜನೆಗೆ (Gruhalakshmi scheme) ಅರ್ಜಿ ಸಲ್ಲಿಕೆ ಜೂನ್ 16ರಿಂದ (ಶುಕ್ರವಾರ) ಆರಂಭಗೊಳ್ಳಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗ್ಗೆ ಹೇಳಿದ್ದರು. ಸಂಜೆ ವೇಳೆಗೆ ಮತ್ತೆ ಮಾತನಾಡಿದ ಅವರು ಇನ್ನೂ ನಾಲ್ಕೈದು ದಿನ ಬೇಕು ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. Weather Report: ಇನ್ನು ತಡೆಯೋಕ್ಕಾಗಲ್ಲ ಕರಾವಳಿಯಲ್ಲಿ ಹೆವಿ ಮಳೆ ‘ಗ್ಯಾರಂಟಿ’; ಇತರ ಕಡೆಗೂ ಇದೆ ವರುಣನ ವಾರಂಟಿ
ಕರ್ನಾಟಕ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Weather Report) ಮುನ್ಸೂಚನೆಯನ್ನು ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Cabinet Meeting : ಸಾರಿಗೆ ನೌಕರರ ವೇತನ 15% ಹೆಚ್ಚಳ; ನೌಕರರ ಸಂಘಟನೆ ಒಪ್ಪುವುದೇ?
ರಾಜ್ಯದಲ್ಲಿ ಸಾರಿಗೆ ನೌಕರರ ವೇತನವನ್ನು (Employees salary) ಶೇಕಡಾ 15ರಷ್ಟು ಹೆಚ್ಚಿಸಲು ಜೂನ್ 16 (ಗುರುವಾರ) ನಡೆದ ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು 2023ರ ಏಪ್ರಿಲ್ ತಿಂಗಳಿಂದಲೇ ಪೂರ್ವಾನ್ವಯವಾಗಿ ಜಾರಿಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. IND vs WI: ‘ಯಂಗ್ ಇಂಡಿಯಾ’ ಕಟ್ಟಲು ಬಿಸಿಸಿಐ ಪ್ಲ್ಯಾನ್; ಯಾರಿಗೆಲ್ಲ ಕೊಕ್?
ಆಸ್ಟ್ರೇಲಿಯಾದ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸೋಲು ಕಂಡ ಭಾರತ ತಂಡ ಮುಂದಿನ ತಿಂಗಳು ಜುಲೈ 12 ರಿಂದ ವೆಸ್ಟ್ ಇಂಡೀಸ್(IND vs WI) ವಿರುದ್ಧ ಮೂರು ಮಾದರಿಯ ಕ್ರಿಕೆಟ್ ಸರಣಿಯನ್ನು ಆಡಲಿದೆ. ಬಹುಕಾಲದಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಿರುವ ಭಾರತ ತಂಡದಲ್ಲಿ ಮೇಜರ್ ಸರ್ಜರಿ ನಡೆಸಲು ಬಿಸಿಸಿಐ(BCCI) ಮುಂದಾಗಿದ್ದು ವಿಂಡೀಸ್ ಸರಣಿಯಿಂದಲೇ ಇದು ಜಾರಿಯಾಗುವ ಸಾಧ್ಯತೆಯೊಂದು ಎದ್ದು ಕಾಣುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಗಂಡು-ಹೆಣ್ಣು ಕೂಡದೇ ಮಗು ಹುಟ್ಟುತ್ತೆ! ವೀರ್ಯ, ಅಂಡಾಣು ಇಲ್ಲದೇ ಸಿಂಥೆಟೆಕ್ ಸೆಲ್‌ನಿಂದ ಮಾನವ ಪಿಂಡ ಸೃಷ್ಟಿ
ನೈಸರ್ಗಿಕ ನಿಯಮ ಪ್ರಕಾರ, ಯಾವುದೇ ಒಂದು ಜೀವಿ ಜನಿಸಲು ಗಂಡು ಮತ್ತು ಹೆಣ್ಣು ಜೀವಿ ಕೂಡಲೇಬೇಕು. ಆಗಲೇ ಜೀವಿ ಸೃಷ್ಟಿಯಾಗಲು ಸಾಧ್ಯ. ಇದಕ್ಕೆ ಮಾನವರು ಹೊರತಲ್ಲ. ಗಂಡು ಮತ್ತು ಹೆಣ್ಣು ಕೂಡಿದಾಗಲೇ ಮಗು ಹುಟ್ಟಲು ಸಾಧ್ಯ. ಆದರೆ, ವಿಜ್ಞಾನವು ಈ ನಿಯಮವನ್ನು ಬುಡಮೇಲು ಹೊರಟಿದೆ. ಅಂದರೆ, ವೀರ್ಯ (sperm) ಮತ್ತು ಅಂಡಾಣಗಳು (egg) ಇಲ್ಲದೇ ಈಗ ಮಗು ಜನಿಸಬಹುದು. ಹೌದು, ಇದು ಆಶ್ಚರ್ಯವಾಗಬಹುದು. ಅದ್ಭುತ ಬೆಳವಣಿಗೆಯೊಂದರಲ್ಲಿ ವಿಜ್ಞಾನಿಗಳು (Scientists) ವೀರ್ಯ ಅಥವಾ ಮೊಟ್ಟೆಗಳನ್ನು ಬಳಸದೆಯೇ ಸಿಂಥೆಟಿಕ್ ಕಾಂಡಕೋಶಗಳಿಂದ (stem cells) ಕೃತಕ ಮಾನವ ಪಿಂಡ (embryo) ಸೃಷ್ಟಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.