ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ರಚಿಸಲಾಗಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಎಂದರೆ ಕಳ್ಳಕಾಕರ ಅಭಿವೃದ್ಧಿ ನಿಗಮ ಎಂಬಂತಾಗಿದೆ ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ, ಶೀಘ್ರದಲ್ಲೇ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಈ ಕುರಿತು ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈ ಮಾತನ್ನು ನಾನು ಮೂರು ವರ್ಷದಿಂದ ಹೇಳುತ್ತಿದ್ದೇನೆ. ಈ ಹಿಂದೆ ಸದನದಲ್ಲಿ ಪ್ರಸ್ತಾಪ ಸಹ ಮಾಡಿದ್ದೇನೆ. ಮಾನವ ಸಂಪನ್ಮೂಲ ಎಂದು ಒಂದು ಸಂಘಟನೆಗೆ 500 ಕೋಟಿ ರೂ. ಕೊಟ್ಟಿದ್ದರು. ನಿಯಮ ಮೀರಿ ಹಣ ಕೊಟ್ಟಿದ್ದರು.
ಕೆರೆ ಒತ್ತುವರಿ ಮಾಡಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಆಗಿದೆ. ನಾನು ಈಗಾಗಲೇ ವೈಯಕ್ತಿಕವಾಗಿ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ಸಮಗ್ರವಾಗಿ ತನಿಖೆ ನಡೆಸುವಂತೆ ಪತ್ರ ಬರೆದಿದ್ದೇನೆ, ಭೇಟಿಯಾಗಿ ಮಾತಾಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಏನೇನು ಆಗಿದೆ ಎಂದು ತನಿಖೆ ಆಗಬೇಕು ಎಂದು ಕೇಳಿದ್ದೇನೆ.
ಸಿಎಂ ಅವರು ಎರಡು ದಿನಗಳಲ್ಲಿ ಇಲಾಖಾ ತನಿಖೆಗೆ ಬರೆಯುತ್ತಾರೆ. ಸಮಗ್ರ ತನಿಖೆ ಮಾಡ್ತೇವೆ. ಎಲ್ಲಾ ಇಲಾಖೆಗಳಲ್ಲೂ ಈ ರೀತಿ ಆಗಿದೆ. ನಿಯಮ ಉಲ್ಲಂಘನೆ ಮಾಡಿ ಕರೆದಿರುವ ಟೆಂಡರ್ ರದ್ದು ಮಾಡಲು ಈಗಾಗಲೆ ಆದೇಶ ಆಗಿದೆ. ಹಿಂದಿನ 40% ಸರ್ಕಾರ ಮಾಫಿಯಾ ರೀತಿಯಲ್ಲಿ ನಡೆಸುತ್ತಿತ್ತು. ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ಇದನ್ನು ಖಂಡಿತವಾಗಿಯೂ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Karnataka Politics: ಗ್ಯಾರಂಟಿ ಯೋಜನೆಗಳ ಜಾರಿ ಸದ್ಯಕ್ಕಿಲ್ಲ?: ಸುಳಿವು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ