ನವದೆಹಲಿ: ಕರ್ನಾಟಕಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಡ್ರಟಿ ಪಾಲಿಟಿಕ್ಸ್ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಗೇಹಸಚಿವ ಅಮಿತ್ ಶಾ ಜತೆಗೆ ಈ ವಿಚಾರವನ್ನು ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. ನವದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸಿಎಂ ಆದ ನಂತರ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದೆ. ಇದೊಂದು ಸೌಹಾರ್ದ ಭೇಟಿ ಅಷ್ಟೇ. ಗೃಹ ಸಚಿವರನ್ನು ಸಹ ಭೇಟಿಯಾಗಲಿದ್ದೇನೆ. ಗೃಹ ಸಚಿವರ ಭೇಟಿ ಸಹ ಸೌಹಾರ್ದ ಭೇಟಿಯಾಗಿದೆ. ಆದರೆ ಅಮಿತ್ ಶಾ ಜತೆ ಬೇರೆ ಬೇರೆ ವಿಷಯದ ಬಗ್ಗೆಯೂ ಚರ್ಚೆ ಮಾಡುತ್ತೇನೆ. ರಾಜ್ಯಕ್ಕೆ ಅಕ್ಕಿ ನೀಡುವ ವಿಚಾರ ಸಹ ಅಮಿತ್ ಶಾ ಜತೆ ಚರ್ಚೆ ಮಾಡುವೆ ಎಂದರು.
ಕೇಂದ್ರ ಸರ್ಕಾರ ಡರ್ಟಿ ಪಾಲಿಟಿಕ್ಸ್ ಮಾಡ್ತಾ ಇದೆ. ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡ್ತಾ ಇದೆ. ಜುಲೈ 1ಕ್ಕೆ ಅಕ್ಕಿ ನೀಡೋ ಪ್ರಕ್ರಿಯೆ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ದೇವೆ. ಈಗಾಗಲೇ ತೆಲಂಗಾಣ, ಪಂಜಾಬ್ ಸೇರಿದಂತೆ ಎಲ್ಲಾ ಕಡೆ ಕೇಳಿದ್ದೇವೆ. 42 ರೂ. ಪ್ರತಿ ಕೆ.ಜಿ.ಗೆ ನೀಡಿ ಆಂಧ್ರಪ್ರದೇಶದಿಂದ ತರಬಹುದು. 1 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೇವಲ ಒಂದು ತಿಂಗಳು ಕೊಡೋಕೆ ಸಾಧ್ಯ ಎಂದು ಛತ್ತೀಸ್‌ಗಢ ಹೇಳಿದೆ.
ತೆಲಂಗಾಣ ಕೇವಲ ಗೋಧಿ ಮಾತ್ರ ಕೊಡೋಕೆ ಸಾಧ್ಯ ಅಂತ ಹೇಳಿದೆ. ಕರ್ನಾಟಕದಲ್ಲಿ ಬಹಳ ಅಕ್ಕಿ ಸಿಗೋಲ್ಲ. ಓಪನ್ ಮಾರ್ಕೆಟ್‌ಗೆ ಹೋಗ್ಬೇಕು. ಟೆಂಡರ್ ಕರಿಬೇಕು, ಹೀಗೆಲ್ಲ ಆದ್ರೆ ಇನ್ನು 2 ತಿಂಗಳಿಗೂ ಹೆಚ್ಚು ಸಮಯ ಆಗುತ್ತೆ. ಕೇಂದ್ರ ಸರ್ಕಾರದ ಏಜೆನ್ಸಿಗಳಿಂದ ಕೊಟೇಷನ್ ಕರೆದಿದ್ದೇವೆ. ಈ ವಿಚಾರವಾಗಿ ನಾಳೆ ಸ್ಪಷ್ಟತೆ ಸಿಗುತ್ತೆ. ಅದರ ಮೇಲೆ ನಾವು ತೀರ್ಮಾನ ಮಾಡ್ತೇವೆ. ಈ ಕಾರಣದಿಂದ ಅಕ್ಕಿ ಕೊಡೋದು ಸ್ವಲ್ಪ ವಿಳಂಬ ಆಗಬಹುದು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ ಎಂದಿದ್ದರೆ ಹೀಗೆ ಆಗುತ್ತ ಇರಲಿಲ್ಲ ಎಂದರು.
7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದ್ದಮೇಲೆ ಅದನ್ನು ಕೊಡುತ್ತೇವೆ ಎಂದು ಹೇಳಿದಮೇಲೆ ಚರ್ಚೆ ಯಾಕೆ ಮಾಡಬೇಕು? 7 ಲಕ್ಷ ಮೆಟ್ರಿಕ್ ಟನ್ ನಮ್ಮ ಹತ್ತಿರ ಇದೆ, ಕೊಡುತ್ತೇವೆ ಎಂದು ಹೇಳಿ ಯಾಕೆ ಕೊಡಲಿಲ್ಲ? ಹಾಗಿದ್ದಿದ್ರೆ, 12ನೇ ತಾರೀಖು ಅವರು ನಮಗೆ ಯಾಕೆ ಪತ್ರ ಬರೆದರು? ನಮಗೆ ಯಾಕೆ ಓಕೆ ಅಂತ ಹೇಳಿದರು? ಅಧಿಕಾರಿಗೆ ಮಾಹಿತಿ ಇಲ್ಲಾ ಅಂದ್ರೆ ಸರ್ಕಾರದ ವೈಫಲ್ಯ ಅದು ಎಂದರು.
ನಾನೇ ಪೂರ್ಣ ಸಿಎಂ
ಪ್ರತಾಪ್ ಸಿಂಹ ಪ್ರಶ್ನೆಗೆಲ್ಲ ನಾನು ಉತ್ತರ ಕೊಡೋಲ್ಲ ಎಂದು ಸಿಎಂ ಸಿದ್ದರಾಮಯ್ಯ ಉತ್ತರಿಸಿದರು. ಸಿಎಂ ಆಗಿ ಪೂರಾ ಐದು ವರ್ಷ ಇರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸಿಎಂ ಆಗಿದ್ದೇನೆ. ನಮ್ಮದು ಮೈತ್ರಿ ಗವರ್ನಮೆಂಟ್ ಅಲ್ಲ. 136 ಸೀಟ್ ನಮ್ಮದು ಬಂದಿದೆ. ಶಾಸಕರುಗಳು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Compromise Politics : ಎಂ.ಬಿ ಪಾಟೀಲ್ ಜತೆ ಕಾಂಪ್ರೊಮೈಸ್ ಮಾಡಿಕೊಂಡ್ರಾ ಪ್ರತಾಪ್‌ಸಿಂಹ?