Site icon Vistara News

Congress Guarantee: ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ಅಕ್ರಮ ಸಕ್ರಮಕ್ಕೆ ಮುಂದಾದ ಸರ್ಕಾರ

Budget-siddaramaiah

ಬೆಂಗಳೂರು: ಕಾಂಗ್ರೆಸ್‌ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳಿಗೆ (Congress Guarantee) ಹಣ ಸಂಗ್ರಹಕ್ಕೆ ತೆರಿಗೆ ಮಾರ್ಗ ಹುಡುಕಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಅಕ್ರಮ ಸಕ್ರಮ ಮಾಡಲು ಮುಂದಾಗಿದೆ. ರಾಜ್ಯಾದ್ಯಂತ ಅಕ್ರಮ ಲೇಔಟ್‌ಗಳಲ್ಲಿ ಕಟ್ಟಿದ ಮನೆ ಸಕ್ರಮ ಮಾಡಲು ಮುಂದಾಗಿದೆ.

ಈ ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ (CM siddaramaiah) ಅವರು ಕೊರತೆ ಬಜೆಟ್‌ ಮಂಡಿಸಿದ್ದಾರೆ. ಕಾಂಗ್ರೆಸ್‌ ಘೋಷಿಸಿದ ಶಕ್ತಿ ಯೋಜನೆ (shakti scheme), ಗೃಹಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್‌ (Free electricity) ಮುಂತಾದ ಐದು ಗ್ಯಾರೆಂಟಿಗಳಿಗೆ ಹಣದ ಕೊರತೆ ಆಗಿರುವುದರಿಂದ ಇತರ ಇಲಾಖೆಗಳಿಗೆ ಅನುದಾನದ ಕಡಿತವಾಗಿದೆ. ಹೀಗಾಗಿ ಅಕ್ರಮ ಸಕ್ರಮ ಮೂಲಕ ಹಣ ಸಂಗ್ರಹಿಸಲು ರಾಜ್ಯ ಸರ್ಕಾರ (Karnataka government) ಮುಂದಾಗಿದೆ.

ರಾಜ್ಯಾದ್ಯಂತ ಅಕ್ರಮ ಲೇಔಟ್‌ಗಳಲ್ಲಿ ಕಟ್ಟಿದ ಮನೆಗಳನ್ನು ಸಕ್ರಮ ಮಾಡಲು ಸರ್ಕಾರ ಮುಂದಾಗಿದ್ದು, ಇದರಿಂದ ಬೆಂಗಳೂರು ಒಂದು ಜಿಲ್ಲೆಯಲ್ಲಿಯೇ ಸುಮಾರು 2000 ಸಾವಿರ ಕೋಟಿ ರೂ. ಸಂಗ್ರಹ ಆಗುವ ಸಾಧ್ಯತೆ ಇದೆ. ಒಂದು ಬಾರಿಗೆ ದಂಡ ಹಾಕಿ ಬಿ ಖಾತೆ (B Khata) ನೀಡುವ ಬಗ್ಗೆ ನಗರಾಭಿವೃದ್ಧಿ ಮತ್ತು ಕಂದಾಯ, ಪಂಚಾಯತ್ ರಾಜ್ ಇಲಾಖೆ ಪ್ರಸ್ತಾಪ ಮಾಡಿದೆ. ನಗರ, ಸ್ಥಳೀಯ ಸಂಸ್ಥೆ, ಪಂಚಾಯತ್ ಮಟ್ಟದಲ್ಲಿ ಕಟ್ಟಿಕೊಂಡಿರುವ ಸಾವಿರಾರು ಅನಧಿಕೃತ ಲೇಔಟ್‌ಗಳಿವೆ. ಇವುಗಳಿಗೆ ಲೇಔಟ್‌ ಅಭಿವೃದ್ಧಿ ತೆರಿಗೆ ಕಟ್ಟಿಲ್ಲದಿರುವುದರಿಂದ ಇವು ಅಕ್ರಮ ಎನಿಸಿವೆ.

ಜತೆಗೆ ಬಿ ಖಾತಾದ ಕಾರಣ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಕ್ಷೆ ಮಂಜೂರಾಗದೆ ಮನೆಗಳು ಅಕ್ರಮವೆನಿಸಿವೆ. ಇವುಗಳನ್ನು ಸಕ್ರಮ ಮಾಡಿ ಆದಾಯ ಸಂಗ್ರಹ ಮಾಡುವ ಗುರಿ ಇದೆ. ಇದಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಇರುವ ಪ್ರಕರಣಕ್ಕೆ ಸಮಿತಿ ರಚಿಸಿ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಸರ್ಕಾರದ ಬೊಕ್ಕಸ ತುಂಬುವುದರ ಜತೆಗೆ ಹಲವು ವರ್ಷಗಳಿಂದ ಇರುವ ಜನರ ಬೇಡಿಕೆ ಸಹ ಈಡೇರಿದಂತೆ ಆಗುತ್ತದೆ ಅನ್ನುವ ಲೆಕ್ಕಾಚಾರ ಹಾಕಲಾಗಿದೆ.

ಇದನ್ನೂ ಓದಿ: Congress Guarantee: ಸೋಮವಾರದಿಂದ ಅನ್ನಭಾಗ್ಯ ಚಾಲನೆ: ನೇರವಾಗಿ ಅಕೌಂಟಿಗೆ ಬಂದು ಬೀಳಲಿದೆ 170 ರೂ.!

Exit mobile version