Site icon Vistara News

Congress Guarantee: ಡಿಗ್ರಿ ನಂತರ ಪಿಜಿ ಓದಿದರೆ ಯುವನಿಧಿ ಇಲ್ಲ: ಸರ್ಕಾರದ ಮಾರ್ಗಸೂಚಿಯಲ್ಲಿ ಬಯಲಾಯ್ತು ಸತ್ಯ

Unemployed youth of india AI Photo

#image_title

ಬೆಂಗಳೂರು: ರಾಜ್ಯದ ನಿರುದ್ಯೋಗ ಯುವಕರಿಗೆ ಭತ್ಯೆ ನೀಡುವ ಯುವನಿಧಿ ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹಾಗೂ ಮಾರ್ಗಸೂಚಿ ಪ್ರಕಟಿಸಿದೆ. ಅದರಂತೆ, ಪದವಿ ವ್ಯಾಸಂಗ ಮಾಡಿದವರಿಗಷ್ಟೆ ನಿರುದ್ಯೋಗಭತ್ಯೆ ಸಿಗಲಿದೆ.

2022-23 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿ೦ಗಳು 3000 ರೂ. ಹಾಗೂ
ಡಿಪ್ಲೊಮಾ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿ೦ಗಳು 1500 ರೂ. ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ ಯೋಜನೆ” ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆಯನ್ನು ಮೊದಲ ಸಂಪುಟ ಸಭೆಯಲ್ಲಿ ಸರ್ಕಾರ ನೀಡಿತ್ತು.

ಸಚಿವ ಸಂಪುಟದ ಅನುಮೋದನೆ ನ೦ತರ ಯೋಜನೆಯನ್ನು ಅನುಷ್ಠಾನಗೊಳಿಸಲು ಷರತ್ತು ಮತ್ತು ನಿಬ೦ಧನೆಗಳು ಹಾಗೂ ಅನರ್ಹತೆಯ ಮಾನದಂಡಗಳನ್ನು ವಿಧಿಸಿ ಆದೇಶ ಹೊರಡಿಸಿದೆ.

2023ರ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾ೦ಕದಿ೦ದ 180 ದಿನಗಳು ಕಳೆದರೂ ಉದ್ಯೋಗ
ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿ೦ಗಳು 3000 ರೂ. ನೀಡಲಾಗುತ್ತದೆ. ಇದರಲ್ಲಿ ಇಂಜಿನಿಯರಿಂಗ್‌, ಮೆಡಿಕಲ್‌ನಂತಹ ವೃತ್ತಿಪರ ಕೋರ್ಸ್‌ಗಳೂ ಸೇರಿವೆ. ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ
ತಿ೦ಗಳು 1500 ರೂ. ನೀಡಲಾಗುತ್ತದೆ. ಎರಡೂ ಭತ್ಯೆಗಳನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ಅವಧಿಗೆ ನೀಡಲಾಗುತ್ತದೆ.

ಪದವೀಧರರಿಗೆ ಯುವನಿಧಿ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಪದವಿ ನಂತರ ಸ್ನಾತಕೋತ್ತರ ವ್ಯಾಸಂಗಕ್ಕೆ ತೆರಳುವವರಿಗೆ ಭತ್ಯೆ ಇಲ್ಲ ಎಂದು ತಿಳಿಸಿದೆ. ಆದರೆ ಸ್ನಾತಕೋತ್ತರ ಪದವಿ ನಂತರ ಉದ್ಯೋಗ ಲಭಿಸದಿದ್ದರೆ ಏನು ಎಂಬ ಪ್ರಶ್ನೆಗೆ ಮಾರ್ಗಸೂಚಿಯಲ್ಲಿ ಉತ್ತರ ಇಲ್ಲ.

ಷರತ್ತು ಮತ್ತು ನಿಬಂಧನೆಗಳು:

  1. ಪದವಿ ಅಥವಾ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ.
  2. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ
    ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಮಗಿತಗೊಳಿಸಲಾಗುವುದು.
  3. ಭತ್ಯೆಯನ್ನು ಖಾತೆಗೆ ನೇರ ನಗದು ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು
    ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು.
  4. ವಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತ೦ತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನ೦ತರ ತಪ್ಪು ಫೋಷಣೆ
    ಅಥವಾ ಘೋಷಿಸಲು ವಿಫಲವಾದರೆ ದ೦ಡ ವಿಧಿಸಲಾಗುವುದು.

ಯೋಜನೆಗೆ ಅರ್ಹರಾಗದೇ ಇರುವವರು ಯಾರು?

  1. ಉನ್ನತ ವ್ಯಾಸ೦ಗಕ್ಕೆ ದಾಖಲಾತಿ ಹೊ೦ದಿ ವಿದ್ಯಾಭ್ಯಾಸ ಮು೦ದುವರಿಸುವವರು.
  2. ಶಿಶಿಕ್ಕು (ಅಪ್ರೆಂಟೀಸ್‌) ವೇತನವನ್ನು ಪಡೆಯುತ್ತಿರುವವರು.
  3. ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.
  4. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ
    ಉದ್ಯೋಗ ಹೊ೦ದಿದವರು ಈ ಯೋಜನೆಗೆ ಅರ್ಹರಲ್ಲ.

ನಿವಾಸಿ ಪ್ರಮಾಣ ಪತ್ರ:
ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಹಾಗಾಗಿ ಕರ್ನಾಟಕದ ನಿವಾಸಿ ಎಂದು ದೃಢೀಕರಿಸಲು ಡೊಮಿಸಿಲ್‌ ಸರ್ಟಿಫಿಕೇಟ್‌ (ನಿವಾಸಿ ಪ್ರಮಾಣಪತ್ರ) ಅಗತ್ಯವಾಗುತ್ತದೆ ಎಂಬ ಚರ್ಚೆ ನಡೆದಿದೆ. ನಿವಾಸಿ ಪ್ರಮಾಣಪತ್ರಕ್ಕೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. ಈ ಕುರಿತು ವಿವರಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ಸೇವಾಸಿಂಧು ಮೂಲಕ ಅರ್ಜಿ:
ನಿರುದ್ಯೋಗ ಭತ್ಯೆಗಾಗಿ ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ. ಆದರೆ ಇನ್ನೂ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ. ಕಾರಣವೇನೆಂದರೆ ಈ ವರ್ಷ ಅಂದರೆ 2023ರಲ್ಲಿ ತೇರ್ಗಡೆ ಹೊಂದಿರುವ ಪದವೀಧರರು ಹಾಗೂ ಡಿಪ್ಲೊಮಾದಾರರಿಗೆ ಮಾತ್ರವೇ ಈ ಯೋಜನೆ ಅನ್ವಯವಾಗಲಿದೆ. ಪದವಿ ಫಲಿತಾಂಶಗಳು ಆಗಮಿಸಿ ಆರು ತಿಂಗಳ ನಂತರವಷ್ಟೆ ನಿರುದ್ಯೋಗಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಹಾಗಾಗಿ ಇದಕ್ಕೆ ಇನ್ನೂ ಸಮಯವಿದೆ.

Exit mobile version