Site icon Vistara News

Yadgiri News: ಮೌಲಾಲಿ ದರ್ಗಾ ಬೆಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಬಡಿದಾಟ; ಕಲ್ಲು ತೂರಾಟದಲ್ಲಿ ಇಬ್ಬರಿಗೆ ಗಾಯ

#image_title

ಯಾದಗಿರಿ: ಧಾರ್ಮಿಕ ಕಾರ್ಯಕ್ರಮಕ್ಕೆ ಮಾಜಿ ಎಂಎಲ್‌ಸಿ, ಕಾಂಗ್ರೆಸ್‌ ನಾಯಕ ಬಾಬುರಾವ್‌ ಚಿಂಚನಸೂರ್‌ ಆಗಮನ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಜಿಲ್ಲೆಯ (Yadgiri News) ಗುರುಮಿಠಕಲ್ ತಾಲೂಕಿನ ಯದ್ಲಾಪುರನ ಮೌಲಾಲಿ ದರ್ಗಾದ ಬೆಟ್ಟದಲ್ಲಿ ಮಾರಾಮಾರಿ ನಡೆದಿದ್ದು, ಕಲ್ಲು ತೂರಾಟ ನಡೆದಿದ್ದರಿಂದ ಇಬ್ಬರಿಗೆ ಗಾಯಗಳಾಗಿವೆ. ಸೋಮವಾರ ಸಂಜೆ ಗಲಾಟೆ ನಡೆದಿದ್ದು, ಕಾರ್ಯಕರ್ತರ ಬಡಿದಾಟದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ದೇವರ ಕಾರ್ಯ ನಿಮಿತ್ತ ಯದ್ಲಾಪುರ ಗ್ರಾಮಸ್ಥರು ಬಾಬುರಾವ್ ಚಿಂಚನಸೂರ್ ಅವರಿಗೆ ಆಹ್ವಾನ ನೀಡಿದ್ದರು. ಅದಂತೆ ಸ್ಥಳಕ್ಕೆ ಅವರು ಆಗಮಿಸಿದಾಗ, ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಈಗ ಯಾಕೆ ಬಂದಿದ್ದೀರಿ ಎಂದು ಜೆಡಿಎಸ್ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ದಳ ಕಾರ್ಯಕರ್ತರ ವಿರುದ್ಧ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಗಲಾಟೆ ಶುರುವಾಗಿದೆ. ಹೀಗಾಗಿ ಬಾಬುರಾವ್ ಚಿಂಚನಸೂರ್ ಸ್ಥಳದಿಂದ ನಿರ್ಗಮಿಸಿದ್ದಾರೆ.

ಇದನ್ನೂ ಓದಿ | Security threat : ಅಮಿತ್‌ ಶಾ ಕಾರ್ಯಕ್ರಮದ ವೇಳೆ ವಿಧಾನಸೌಧಕ್ಕೆ ಬಟನ್‌ ಚಾಕು ಹಿಡಿದುಕೊಂಡು ಬಂದಿದ್ದ ವ್ಯಕ್ತಿ ವಶಕ್ಕೆ

ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ತಾರಕಕ್ಕೇರಿದೆ. ಈ ವೇಳೆ ಎರಡು ಬಣಗಳ ನಡುವೆ ವಾಗ್ವಾದ ನಡೆದು, ತಳ್ಳಾಟ-ನೂಕಾಟ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಕಲ್ಲು ತೂರಾಟ ನಡೆದು ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಗುರುಮಿಠಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕುರಿ ಚರ್ಮ ಎಸೆದು ಚಿಂಚನಸೂರ್‌ಗೆ ತರಾಟೆ

ಮಾಜಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್

ಮೌಲಾಲಿ‌ ದರ್ಗಾಕ್ಕೆ ಆಗಮಿಸಿದ್ದ ಮಾಜಿ ಎಂಎಲ್‌ಸಿ ಬಾಬುರಾವ್ ಚಿಂಚನಸೂರ್ ಮೇಲೆ ಜೆಡಿಎಸ್ ಕಾರ್ಯಕರ್ತರೊಬ್ಬರು ಕುರಿಯ ಚರ್ಮ ಎಸೆದು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಕಾರ್ಯಕರ್ತರ ನಡುವೆ ಮಾತಿನ‌ ಚಕಮಕಿ‌ ಜೋರಾಗಿ ಗಲಾಟೆ ಶುರುವಾಗಿದೆ. ಇದನ್ನು ಅರಿತ ಬಾಬುರಾವ್ ಚಿಂಚನಸೂರ್ ‌ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಚಿಂಚನಸೂರ್‌ ಅವರನ್ನು ಯಾಕೆ ಕರೆಸಿದ್ದೀರಿ ಎಂಬ ವಿಷಯದ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕಲ್ಲು ತೂರಾಟ ನಡೆದಿದೆ.

ಇದನ್ನೂ ಓದಿ | Karnataka Elections : ಬಿಜೆಪಿ ನಾಯಕನ ಮನೆಗೆ ಜಿಎಸ್ಟಿ ದಾಳಿ; ಸೀರೆ, ಗಿಫ್ಟ್‌ ವಸ್ತುಗಳು ಪತ್ತೆ

ಮಧುಗಿರಿ ಮತದಾರರನ್ನು ಧರ್ಮಸ್ಥಳ ಪ್ರವಾಸಕ್ಕೆ ಕರೆದೊಯ್ದಿದ್ದ 4 ಬಸ್‌ ಜಪ್ತಿ

ತುಮಕೂರು: ವಿಧಾನಸಭಾ ಚುನಾವಣೆ (Karnataka Elections 2023) ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಇದೇ ವೇಳೆ ಜೆಡಿಎಸ್ ವತಿಯಿಂದ ಮತದಾರರಿಗೆ ಮತ್ತು ಮುಖಂಡರಿಗೆ ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಭಾಗ್ಯವನ್ನು ಕಲ್ಪಿಸಲಾಗಿತ್ತು. ಈಗ ಪ್ರವಾಸ ಮುಗಿಸಿ ವಾಪಸಾಗುವಾಗ ನಾಲ್ಕು ಬಸ್‌ ಅನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ.

ಧರ್ಮಸ್ಥಳ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ಬಸ್‌ಗಳನ್ನು ಮಧುಗಿರಿ ತಾಲೂಕಿನ ಗಿಡದಾಗಲಹಳ್ಳಿ ಸಮೀಪ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಟ್ಟು ನಾಲ್ಕು ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಮಧುಗಿರಿ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು.

Exit mobile version