Site icon Vistara News

Congress Karnataka: ನಿಗಮ-ಮಂಡಳಿಗೆ 70:30 ಫಾರ್ಮುಲಾ! ಈ ಸಂಕ್ರಾಂತಿಗೆ ಗಿಫ್ಟ್‌?

CM Siddaramaiah and DCM DK Shivakumar

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress Karnataka) ತನ್ನ ಕಾರ್ಯತಂತ್ರವನ್ನು ಚುರುಕುಗೊಳಿಸಿದೆ. ನಾಯಕರು ಹಾಗೂ ಕಾರ್ಯಕರ್ತರು ಅಖಾಡಕ್ಕಿಳಿಯುವಂತೆ ಮಾಡಲು, ಗರಿಷ್ಠ ಸೀಟನ್ನು ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ನಡುವೆ ನಿಗಮ-ಮಂಡಳಿ (Appointment of board of directors) ಅಧ್ಯಕ್ಷ, ಉಪಾಧ್ಯಕ್ಷರ ನೇಮಕಕ್ಕೆ ಮುಂದಾಗಲಾಗಿದ್ದು, 70:30 ಫಾರ್ಮುಲಾ ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಬರುವ ಸಂಕ್ರಾಂತಿಗೆ ಶಾಸಕರು ಕಾರ್ಯಕರ್ತರಿಗೆ ನಿಗಮ ಮಂಡಳಿ ಗಿಫ್ಟ್ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನಿಗಮ ಮಂಡಳಿ ಪಟ್ಟಿ ಫೈನಲ್ ಆಗುತ್ತಾ?

ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಕಳೆದ ವಾರ ಭೇಟಿ ನೀಡಿದಾಗ ಶಾಸಕರ ಪಟ್ಟಿಯನ್ನು ಹಿಡಿದು ಒಯ್ದಿದ್ದರು. ಆದರೆ, ಈ ಪಟ್ಟಿಯನ್ನು ನೋಡಿದ ನಾಯಕ ರಾಹುಲ್‌ ಗಾಂಧಿ, ಕೇವಲ ಶಾಸಕರಿಗೆ ಮಾತ್ರ ಸ್ಥಾನ ಕಲ್ಪಿಸಿದರೆ ಸಾಲದು, ಕಾರ್ಯಕರ್ತರಿಗೂ ಸ್ಥಾನ ನೀಡಿ. ಹೊಸ ಪಟ್ಟಿಯನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದರು. ಇದರಿಂದ ನೇಮಕಕ್ಕೆ ಹಿನ್ನಡೆಯಾಗಿತ್ತು.

ಈಗ ಪುನಃ ಸಿಎಂ ಹಾಗೂ ಡಿಸಿಎಂ ಹೊಸ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದು, ಇದಕ್ಕೆ ರಾಹುಲ್‌ ಗಾಂಧಿ ಒಪ್ಪಿಗೆ ಸೂಚಿಸಲಿದ್ದಾರೆಯೇ? ಎಂಬ ಕುತೂಹಲ ಮೂಡಿದೆ. ಶಾಸಕರ ಜತೆಗೆ ಕೆಲ ಕಾರ್ಯಕರ್ತರಿಗೂ ಅವಕಾಶ ನೀಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಶೇಕಡಾ 70 ರಷ್ಟು ಶಾಸಕರಿಗೆ ಹಾಗೂ ಶೇಕಡಾ 30ರಷ್ಟು ಕಾರ್ಯಕರ್ತರಿಗೆ ಕೊಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಈ ಸಂಕ್ರಾಂತಿಗೆ ಅಂದರೆ ಜ. 15 ರಂದು ಪಟ್ಟಿ ಬಿಡುಗಡೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಲೋಕಸಭೆಗೆ ಸಚಿವರು ಸ್ಪರ್ಧೆ ಮಾಡುತ್ತಾರಾ?

ರಾಜ್ಯ ನಾಯಕರ ನಿರಾಸಕ್ತಿ ನಡುವೆಯೂ 10ಕ್ಕೂ ಹೆಚ್ಚು ಸಚಿವರನ್ನು ಲೋಕಸಭಾ ಕಣಕ್ಕೆ ಇಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿದೆ ಎಂಬ ವಿಷಯ ಗೊತ್ತಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಈಗಾಗಲೇ ರಾಜ್ಯ ಘಟಕದ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲಾ ಘಟಕಗಳಿಂದ ಮಾಹಿತಿ ಪಡೆದು ಪಟ್ಟಿ ಸಿದ್ಧಪಡಿಸಿದ್ದಾರೆ. ಆದರೆ, ಈ ಪಟ್ಟಿ ಬಗ್ಗೆ ಹೈಕಮಾಂಡ್ ನಾಯಕರಿಗೆ ಅಷ್ಟಾಗಿ ಮನಸ್ಸಿಲ್ಲ. ಶತಾಯಗತಾಯ ಅತಿ ಹೆಚ್ಚು ಸೀಟ್‌ಗಳನ್ನು ಪಡೆಯಬೇಕು ಎಂಬ ಗುರಿಯನ್ನು ಹಾಕಿಕೊಂಡಿರುವ ಕಾಂಗ್ರೆಸ್‌ ದಿಲ್ಲಿ ನಾಯಕರು, ಇದಕ್ಕಾಗಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಇದ್ದಾರೆ. ಆದರೆ, ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿ ಕೊರತೆ ಎದುರಾಗಿದೆ.

ಆ ಕ್ಷೇತ್ರಗಳು ಯಾವುವು?

ಹೈಕಮಾಂಡ್ ಲಿಸ್ಟ್‌ನಲ್ಲಿ ಇರುವ ಸಚಿವರು?

ಇವರಿಗೆ ಇಲ್ಲ ಆಸಕ್ತಿ!

ಆದರೆ, ಸಚಿವರಿಗೆ ಲೋಕಸಭಾ ಚುನಾವಣೆ ಕಣಕ್ಕೆ ಇಳಿಯಲು ಅಷ್ಟಾಗಿ ಆಸಕ್ತಿ ಇಲ್ಲ ಎನ್ನಲಾಗಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರಿಗೂ ಈ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಸೋತರೆ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ ಎಂಬ ಕಾರಣವನ್ನೂ ಹಲವರು ನೀಡುತ್ತಿದ್ದಾರೆ.

ಹಿಂದೇಟಿಗೆ ಕಾರಣವೇನು?

ಲೋಕಸಭಾ ಚುನಾವಣೆಯಲ್ಲಿ ಸಚಿವರನ್ನು ಕಣಕ್ಕಿಳಿಸಲು ಹೈಕಮಾಂಡ್‌ ಪ್ಲಾನ್ ಮಾಡಿದೆಯಾದರೂ ಸ್ಪರ್ಧೆಗೆ ಹಲವು ಸಚಿವರು ನಿರಾಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ. ಹೈಕಮಾಂಡ್‌ ನಿರ್ಧಾರವನ್ನು ಈಗಾಗಲೇ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಆದರೆ, ತಾವು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ನಾವು ಸೋತರೆ ವಿರೋಧ ಪಕ್ಷಗಳಿಗೆ ಆಹಾರವಾಗಬೇಕು ಎಂಬ ಕಾರಣವನ್ನು ಇಡುತ್ತಿದ್ದಾರೆ. ಹೀಗಾಗಿ ನೀವು ಪರ್ಯಾಯ ಅಭ್ಯರ್ಥಿಯನ್ನು ಹುಡುಕಿ ಕಣಕ್ಕಿಳಿಸುವುದೇ ಸೂಕ್ತ ಎಂದು ಹೇಳುತ್ತಿದ್ದಾರೆ.

ಕುಟುಂಬ ವರ್ಗಕ್ಕೆ ನೀಡಲು ಮನವಿ

ಇನ್ನು ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಹೋದ್ಯೋಗಿಗಳ ಬೆಂಬಲಕ್ಕೆ ನಿಂತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಚಿವರ ಸ್ಪರ್ಧೆ ಬೇಡ. ಇದು ವಿಪಕ್ಷಗಳಿಗೆ ಅಸ್ತ್ರವಾಗಲಿದೆ ಎಂದು ಹೇಳಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Karnataka Weather : ಗುಡುಗು ಮಿಂಚು ಸಹಿತ ಮಳೆ; ಹವಾಮಾನ ಇಲಾಖೆ ಸೂಚನೆ

ಇನ್ನು ನಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬೇರೆ ಸಂದೇಶ ರವಾನೆಯಾಗಲಿದೆ. ಫಲಿತಾಂಶ ವ್ಯತಿರಿಕ್ತವಾಗಿ ಬಂದಲ್ಲಿ ಇಲಾಖೆಯ ಮೇಲಿನ ಹಿಡಿತ ತಪ್ಪುತ್ತದೆ. ನಮ್ಮ ಸ್ಪರ್ಧೆ ಬದಲಿಗೆ ಕುಟುಂಬ ವರ್ಗಕ್ಕೆ ಇಲ್ಲವೇ, ನಾವು ಸೂಚಿಸಿದವರಿಗೆ ಟಿಕೆಟ್ ನೀಡಬೇಕು ಎಂದು ಮಂತ್ರಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.

Exit mobile version