ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ (KPCC Office) ಮಂಗಳವಾರ ಚಿಕ್ಕ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಅದೂ ಕಾಂಗ್ರೆಸ್ (Congress Karnataka) ಕಾರ್ಯಕರ್ತೆ ಹಾಗೂ ಕೆಪಿಸಿಸಿ ಫೋಟೋಗ್ರಾಫರ್ ನಡುವೆ ಜಟಾಪಟಿ ನಡೆದಿದ್ದು, ಕುರ್ಚಿಯ ವಿಚಾರಕ್ಕಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆಯನ್ನು ಆಯೋಜನೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಅಲ್ಲಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಆಗಮಿಸಬೇಕಿತ್ತು. ಎಲ್ಲರೂ ಕಾರ್ಯಕ್ರಮಕ್ಕಾಗಿ ಕಾಯುತ್ತಾ ಇದ್ದರು. ಸಿಎಂ, ಡಿಸಿಎಂ ಬರುವಿಕೆಗಾಗಿ ಎದುರು ನೋಡುತ್ತಿದ್ದರು. ಒಬ್ಬೊಬ್ಬರೇ ಖಾಲಿ ಇದ್ದ ಕುರ್ಚಿಗಳಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತೆ ಮಂಜುಳಾ ನಾಗರಾಜ್ ಎಂಬುವವರು ಒಂದು ಕುರ್ಚಿಯಲ್ಲಿ ಕೂರಲು ಹೋದ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ.
ಮಂಜುಳಾ ನಾಗರಾಜ್ ಅವರು ಚೇರ್ ಹಾಕಿಕೊಂಡು ಕೂರಲು ಮುಂದಾಗುತ್ತಿದ್ದಂತೆ ಅಲ್ಲಿಯೇ ಇದ್ದ ಕೆಪಿಸಿಸಿ ಫೋಟೋಗ್ರಾಫರ್ ಮಂಜುನಾಥ್ ಎಂಬುವವರು, “ಇಲ್ಲಿ ಕೂರಬೇಡಿ” ಎಂದು ಹೇಳಿದ್ದಾರೆ. ಇದಕ್ಕೆ ಸಿಟ್ಟಾದ ಮಂಜುಳಾ ನಾಗರಾಜ್, “ನಾನೇಕೆ ಇಲ್ಲಿ ಕೂರಬಾರದು? ಅದೇ ನನ್ನ ಜಾಗದಲ್ಲಿ ಹುಡುಗಿ ಇದ್ದರೆ ನೀನು ಕೂರು ಅಂತೀಯ. ನಮ್ಮಂತವರಿಗೆ ಮಾತ್ರ ಬೇಡ ಅಂತೀಯ. ಹುಡುಗಿಯರು ಕಂಡರೆ ಫೋಟೋ ತಗೆಯುತ್ತೀಯ. ನಮ್ಮಂತಹ ವಯಸ್ಸಾದವರನ್ನು ಕಂಡರೆ ನಿನಗೆ ಆಗುವುದಿಲ್ಲ” ಎಂದು ಜೋರಾಗಿಯೇ ಗಲಾಟೆ ಮಾಡಿದ್ದಾರೆ.
ಹೊಡೆಯಲು ಹೋಗಿದ್ದ ಮಂಜುಳಾ
ಈ ವೇಳೆ ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದಿದೆ. ಆ ವೇಳೆ ಫೋಟೋಗ್ರಾಫರ್ ಸಹ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇಲ್ಲಿ ಫೋಟೋ ತೆಗೆಯಲು ಕಷ್ಟವಾಗುತ್ತದೆ. ಹೀಗಾಗಿ ಬೇಡ ಎಂದು ಹೇಳಿದೆ ಎಂದು ಹೇಳಿದ್ದಾರೆ. ಆದರೆ, ಮಂಜುಳಾ ನಾಗರಾಜ್ ಇದ್ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಒಂದು ಹಂತದಲ್ಲಿ ಫೋಟೋಗ್ರಾಫರ್‌ಗೆ ಮಂಜುಳಾ ಅವರು ಹೊಡೆಯಲೇ ಹೋಗಿದ್ದಾರೆ. ಆಗ ಅಲ್ಲಿಯೇ ಇದ್ದ ಕಾರ್ಯಕರ್ತೆಯರು ಮಂಜುಳಾ ಅವರನ್ನು ತಡೆದರು. ಮಂಜುಳಾ ನಾಗರಾಜ್ ಕಿಯೋನಿಕ್ಸ್ ಮಾಜಿ ಅಧ್ಯಕ್ಷೆಯಾಗಿದ್ದಾರೆ.
Corporation Board: ಶಾಸಕರಿಗಾಯ್ತು ಈಗ 34 ಕಾರ್ಯಕರ್ತರಿಗೆ ನಿಗಮ-ಮಂಡಳಿ ಸ್ಥಾನ; ಯಾರಿಗೆಲ್ಲ ಅವಕಾಶ?
ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ (Congress Karnataka) ಚುರುಕುಗೊಂಡಿದೆ. ಪಕ್ಷ ಸಂಘಟನೆ ಜತೆ ಜತೆಗೆ ಕಾರ್ಯಕರ್ತರು, ನಾಯಕರಿಗೆ ಆದ್ಯತೆ ಕೊಡಲು ಮುಂದಾಗಿದೆ. ಈ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಗುರಿಯನ್ನು ಸಾಧಿಸಲು ಹೊರಟಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಹೈಕಮಾಂಡ್ (Congress High Command) ಟಾಸ್ಕ್ ನೀಡಿದೆ. ಈ ನಡುವೆ ನಾಲ್ಕು ದಿನದ ಹಿಂದಷ್ಟೇ 34 ನಿಗಮ – ಮಂಡಳಿಗಳಿಗೆ (Corporation Board) ಶಾಸಕರನ್ನು ನೇಮಕ ಮಾಡಿದ್ದ ಕಾಂಗ್ರೆಸ್ ಈಗ ಕಾರ್ಯಕರ್ತರತ್ತ ದೃಷ್ಟಿ ನೆಟ್ಟಿದೆ. ಇಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಕಾರ್ಯಕರ್ತರಿಗೆ ನಿಗಮ, ಮಂಡಳಿ ಸ್ಥಾನ ನೀಡುವ ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಭೆ ನಡೆಸಿದ್ದಾರೆ. ಸೋಮವಾರ ತಡರಾತ್ರಿವರೆಗೂ ಚರ್ಚೆ ನಡೆಸಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕು? ಆಯ್ಕೆ ಮಾನದಂಡ ಹೇಗಿರಬೇಕು? ಅಸಮಾಧಾನಗೊಂಡರೆ ಏನು ಮಾಡಬೇಕು? ಎಂಬಿತ್ಯಾದಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ವೇಳೆ ಒಟ್ಟು 34 ಜನ ಕಾರ್ಯಕರ್ತರಿಗೆ ನಿಗಮ – ಮಂಡಳಿಯಲ್ಲಿ ಸ್ಥಾನ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೆರಡು ದಿನದಲ್ಲಿ ಪಟ್ಟಿ ಬಿಡುಗಡೆ?
ಯಾರಿಗೆ ಯಾವ ನಿಗಮ ನೀಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಈ ಪಟ್ಟಿ ಈಗ ವಿಸ್ತಾರ ನ್ಯೂಸ್‌ನಲ್ಲಿ ಲಭ್ಯವಿದ್ದು, ಇದಕ್ಕೆ ಹೈಕಮಾಂಡ್ ಯಾವುದೇ ಬದಲಾವಣೆ ಇಲ್ಲದೆ ಒಪ್ಪಿಗೆ ಸೂಚಿಸಿದರೆ ಇನ್ನೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿ ಇಂತಿದೆ
- ಕಾಂತಾ ನಾಯಕ್
- ಮುಂಡರಗಿ ನಾಗರಾಜ್
- ವಿನೋದ್ ಎಸ್ ಅಸೂಟಿ
- ಬಿ.ಎಚ್. ಹರೀಶ್
- ಡಾ. ಅಂಶುಮಂತ್
- ಜೆ.ಎಸ್. ಆಂಜನೇಯಲು
- ಡಾ. ಬಿ. ಯೋಗೇಶ್ ಬಾಬು
- ಡಾ. ಎಚ್. ಕೃಷ್ಣ
- ಮರಿಗೌಡ
- ದೇವೇಂದ್ರಪ್ಪ ಮಾರ್ತೂರು
- ರಾಜಶೇಖರ್ ರಾಮಸ್ವಾಮಿ
- ಕೆ. ಮರೀಗೌಡ
- ಎಸ್. ಮನೋಹರ್
- ಅಯೂಬ್ ಖಾನ್
- ಮಮತಾ ಗುಟ್ಟಿ
- ಪಲ್ಲವಿ ಜಿ.
- ಎಸ್.ಇ. ಸುದೀಂದ್ರ
- ಡಾ. ನಾಗಲಕ್ಷ್ಮಿ ಚೌಧರಿ
- ಎಚ್.ಎಸ್. ಸುಂದರೇಶ್
- ಆರ್.ಎಂ. ಮಂಜುನಾಥ್ ಗೌಡ
- ಜಯಣ್ಣ
- ಎಸ್.ಆರ್. ಪಾಟೀಲ್ ಬ್ಯಾಡಗಿ
- ಆರ್. ಸಂಪತ್ ರಾಜ್
- ಪದ್ಮಾವತಿ
- ಸರೋವರ್ ಶ್ರೀನಿವಾಸ್
- ಶಕೀರ್ ಸನದಿ
- ಸೋಮಣ್ಣ ಬೇವಿನಮರದ
- ಬಿ.ಪುಷ್ಪಾ ಅಮರನಾಥ್
- ಮೆಹಬೂಬ್ ಪಾಷಾ
- ಕೀರ್ತಿ ಗಣೇಶ್
- ಮಜರ್ ಖಾನ್
- ಸವಿತಾ ರಘು
- ಲಲಿತ್ ರಾಘವ್
- ಜಿ.ಎಸ್.ಮಂಜುನಾಥ್
ಇದನ್ನೂ ಓದಿ: JDS Karnataka : ಗೋಸುಂಬೆ ಕಾಂಗ್ರೆಸ್‌ಗೆ ಹನುಮನಿಂದಲೇ ಅಂತ್ಯ; ಜೆಡಿಎಸ್ ಆಕ್ರೋಶ
ಹೀಗಾಗಿ 34 ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡುವುದರಿಂದ ಎಲ್ಲಿಯೂ ಸಹ ಅಸಮಾಧಾನಕ್ಕೆ ಕಾರಣವಾಗುವುದಿಲ್ಲ. ಶಾಸಕರಿಗೆ ಕೊಟ್ಟಷ್ಟೇ ಆದ್ಯತೆಯನ್ನು ಕಾರ್ಯಕರ್ತರಿಗೂ ನೀಡಿದ್ದೇವೆ. ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದ್ದೇವೆ ಎಂದು ಹೇಳುವ ಮೂಲಕ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ಪಡೆಯುವ ಲೆಕ್ಕಾಚಾರವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಕಿಕೊಂಡಿದ್ದಾರೆ. ಈಗ ಹೈಕಮಾಂಡ್‌ಗೆ ಪಟ್ಟಿ ರವಾನೆ ಆಗಿದ್ದು, ಅಲ್ಲಿ ಯಾವುದಾದರೂ ಬದಲಾವಣೆ ನಡೆಯಲಿದೆಯೇ? ಅಥವಾ ಈ ಪಟ್ಟಿಗೇ ಒಪ್ಪಿಗೆ ದೊರೆಯಲಿದೆಯೇ? ಎಂಬುದು ಸದ್ಯದ ಕುತೂಹಲವಾಗಿದೆ.