ವಿಜಯಪುರ: ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಪ್ರಯಾಣಿಸುತ್ತಿದ್ದ ಕಾರು, ನಗರದ ಹೊರವಲಯದ ಮುನೀಶ್ವರ ಭಾಗದಲ್ಲಿ ಅಪಘಾತಕ್ಕೀಡಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ (Car Accident) ವೀಣಾ ಕಾಶಪ್ಪನವರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಂಗ್ರೆಸ್ ನಾಯಕಿ, ಬಾಗಲಕೋಟೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅವರು ವಿಜಯಪುರದಿಂದ ಸಿಂದಗಿ ಕಡೆಗೆ ಕಾರಿನಲ್ಲಿ ಹೊರಟಿದ್ದ ವೇಳೆ ವಿಜಯಪುರ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟಿ ಅಡ್ಡ ಬಂದಿದೆ. ಈ ವೇಳೆ ಸ್ಕೂಟಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯಲಾಗಿದೆ. ಗಾಯಗೊಂಡಿದ್ದ ವೀಣಾ ಕಾಶಪ್ಪನವರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Love Failure: ಅವನನ್ನು ಕರ್ಕೊಂಡು ಬನ್ನಿ, ಇಲ್ಲದಿದ್ದರೆ ಮೇಲಿಂದ ಹಾರ್ತೀನಿ!
ಕಿರುಕುಳ ಎಂದು ದೂರು ಕೊಡಲು ಹೋದರೆ ಠಾಣೆಯಲ್ಲೇ ಕತ್ತು ಕೊಯ್ದ ಗಂಡ
ಹಾಸನ: ಮನೆಯಲ್ಲಿ ವಿಪರೀತ ಹಿಂಸೆ (Domestic Violence) ಕೊಡುತ್ತಿದ್ದ ಗಂಡನ ವಿರುದ್ಧ ಮಹಿಳೆಯೊಬ್ಬರು ಧೈರ್ಯ ಮಾಡಿ ಠಾಣೆಗೆ ದೂರು ನೀಡಲು ಹೋದರೆ ಗಂಡ ಪೊಲೀಸರ ಮುಂದೆಯೇ ಆಕೆಯ ಕತ್ತು ಕೊಯ್ದ (Husband attacks wife) ಭಯಾನಕ ಘಟನೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ (Hasana womens police station) ನಡೆದಿದೆ.
ಹರೀಶ್ ಎಂಬಾತನೇ ತನ್ನ ಹೆಂಡತಿ ಶಿಲ್ಪಾ ಅವರನ್ನು ಪೊಲೀಸ್ ಠಾಣೆಯಲ್ಲೇ ಕತ್ತು ಕೊಯ್ದು ದಾರ್ಷ್ಟ್ಯ ಮೆರೆದ ಗಂಡ. ಆತ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮುಂದೆಯೇ ತನ್ನ ಪತ್ನಿಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆಗೆ ಯತ್ನಿಸಿದ್ದಾನೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಕೊಲೆ ಮಾಡಲು ಮುಂದಾಗಿದ್ದಾನೆ.
ಶಿಲ್ಪಾ ಮತ್ತು ಹರೀಶ್ ನಡುವೆ ಆರು ವರ್ಷದ ಹಿಂದೆ ಮದುವೆ ನಡೆದಿತ್ತು. ಇಬ್ಬರೂ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಹರೀಶ್ ಒಬ್ಬ ಅನುಮಾನ ಪಿಶಾಚಿ. ಆತ ಪ್ರತಿ ಹಂತದಲ್ಲೂ ಹೆಂಡತಿಯ ಮೇಲೆ ಅನುಮಾನಿಸುತ್ತಿದ್ದ. ಹೀಗಾಗಿ ಪ್ರತಿ ನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಅವನು ಬಂದು ಹೊಡೆಯುತ್ತಿದ್ದ. ಇತ್ತ ಶಿಲ್ಪಾಗೂ ಗಂಡನ ಮೇಲೆ ಅನುಮಾನ ಇತ್ತು. ಹೀಗಾಗಿ ಮನೆಯಲ್ಲಿ ಜಗಳ ಎನ್ನುವುದು ಸಾಮಾನ್ಯವಾಗಿತ್ತು.
ಹಲವಾರು ಬಾರಿ ಪರಸ್ಪರ ಹಲ್ಲೆ, ಕೊಲೆಯತ್ನಗಳು ನಡೆದಾಗ ಇನ್ನು ಕೊಂದೇ ಬಿಡುತ್ತಾನೆ ಅನಿಸಿದಾಗ ಶಿಲ್ಪಾ ಆತನ ವಿರುದ್ದ ಹಾಸನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಗಂಡ ತೊಂದರೆ ಕೊಡುತ್ತಿದ್ದಾನೆ ಎಂಬ ಶಿಲ್ಪಾ ದೂರಿನ ಅನ್ವಯ ಪೊಲೀಸರು ಎಚ್ಚರಿಕೆ ನೀಡಲೆಂದು ಹರೀಶ್ ನನ್ನು ಬರ ಹೇಳಿದ್ದರು. ಶಿಲ್ಪಾ ಕೂಡಾ ಬಂದಿದ್ದಳು. ಪಿಎಸ್‌ಐ ಉಮಾ ಅವರು ಹರೀಶ್ ನನ್ನು ವಿಚಾರಣೆ ನಡೆಸಿದ್ದರು.
ಹೀಗೆ ವಿಚಾರಣೆ ನಡೆಸಿದ ಬೆನ್ನಿಗೇ ಹರೀಶ್ ಠಾಣೆಯಲ್ಲೇ ಇದ್ದ ಪತ್ನಿಯ ಮೇಲೆ ಏರಿಹೋಗಿದ್ದಾನೆ. ತಾನು ಮೊದಲೇ ತಂದಿದ್ದ ಚಾಕುವನ್ನು ಬಳಸಿ ಪತ್ನಿಯ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಆತನ ಕೈಯಲ್ಲಿದ್ದ ಚಾಕುವನ್ನು ಕಿತ್ತುಕೊಂಡಿದ್ದಾರೆ.
ಇದನ್ನೂ ಓದಿ | Murugha Seer: ರಿಲೀಸ್ ಆದ ಐದೇ ದಿನಕ್ಕೆ ಮತ್ತೆ ಮುರುಘಾಶ್ರೀ ಬಂಧನ
ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ, ಹರೀಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.