Site icon Vistara News

ಸಿದ್ದರಾಮಯ್ಯ @75 | ಹುಬ್ಬಳ್ಳಿ ಸಭೆಯಲ್ಲಿ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ ಕಾಂಗ್ರೆಸ್‌ ನಾಯಕರು

congress cake

ಹುಬ್ಬಳ್ಳಿ: ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆಗಾಗಿ ದಾವಣಗೆರೆಯಲ್ಲಿ ಬುಧವಾರ ಬೃಹತ್‌ ಕಾರ್ಯಕ್ರಮ ಆಯೋಜನೆಯಾಗಿದೆ. ಇದಕ್ಕೂ ಮೊದಲೇ ಅಭಿಮಾನಿಗಳು ಹಲವು ಕಡೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.

ಹುಬ್ಬಳ್ಳಿಯ ಗೋಕುಲ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲೂ ಇದೇ ರೀತಿಯ ಸಂಭ್ರಮ ಮನೆ ಮಾಡಿತ್ತು. ಕಾಂಗ್ರೆಸ್‌ ನಾಯಕರು ಕೇಕ್‌ ತರಿಸಿಕೊಂಡು ಅದನ್ನು ಸಿದ್ದರಾಮಯ್ಯ ಅವರ ಕೈಯಲ್ಲಿ ಕಟ್‌ ಮಾಡಿಸಿ ಖುಷಿಪಟ್ಟರು. ಬುಧವಾರ ದೊಡ್ಡ ಸಮಾವೇಶ ಇರುವುದರಿಂದ ಜತೆಯಾಗಿ ನಿಂತು ಕೇಕ್‌ ಕಟ್‌ ಮಾಡಲು ಅವಕಾಶ ಸಿಗಲಾರದು ಎಂಬ ಕಾರಣಕ್ಕೂ ಇದನ್ನು ಆಯೋಜಿಸಲಾಗಿತ್ತು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ, ಕೆ.ಜೆ ಜಾರ್ಜ್, ಬಿ.ಕೆ ಹರಿಪ್ರಸಾದ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿದ್ದರು. ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ರಾಹುಲ್‌ ಗಾಂಧಿ ಅವರು ಭಾಷಣ ಮಾಡಿ ಹೋದ ಬಳಿಕ ಈ ಹಬ್ಬದ ಆಚರಣೆ ನಡೆದಿದೆ. ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ನಾಯಕರಿಗೆ ಏಕತೆಯ, ಒಗ್ಗಟ್ಟಿನ ಪಾಠ ಬೋಧಿಸಿದ ನಡುವೆಯೇ ಈ ಕೇಕ್‌ ಕಟ್ಟಿಂಗ್‌ ನಡೆದಿರುವುದು ವಿಶೇಷವಾಗಿದೆ. ಸಿದ್ದರಾಮಯ್ಯ ಅವರು ಕೇಕ್‌ ಕತ್ತರಿಸಿದ ಕೂಡಲೇ ಡಿ.ಕೆ ಶಿವಕುಮಾರ್‌ ಕೇಕನ್ನು ತೆಗೆದು ಸಿದ್ದರಾಮಯ್ಯ ಅವರ ಬಾಯಿಗಿಟ್ಟರು. ಬಳಿಕ ಸಿದ್ದರಾಮಯ್ಯ ಅವರು ಡಿಕೆಶಿಗೆ ಕೇಕ್‌ ತಿನ್ನಿಸಿದರು. ಈ ಮೂಲಕ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ ಎಂಬ ಸಂದೇಶ ರವಾನಿಸಿದರು.

ಇದನ್ನೂ ಓದಿ | Rahul Class | ಕಾಂಗ್ರೆಸ್‌ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಿದ ರಾಹುಲ್‌, ಚುನಾವಣೆಯೇ ಟಾರ್ಗೆಟ್‌

Exit mobile version