Site icon Vistara News

Congress Manifesto : ವಿನಾಶಕಾಲೇ ವಿಪರೀತ ಬುದ್ಧಿ; ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ವಿಜಯೇಂದ್ರ ಖಂಡನೆ

congress-manifesto: 'Extreme intelligence is destructive, says BY vijayendra

congress-manifesto: 'Extreme intelligence is destructive, says BY vijayendra

ಬೆಂಗಳೂರು: ʻʻಇದು ವಿನಾಶ ಕಾಲಕ್ಕೆ ಎದುರಾದ ವಿಪರೀತ ಬುದ್ಧಿ. ರಾಷ್ಟ್ರ ಭಕ್ತ ಸಂಘಟನೆ ‘ಬಜರಂಗ ದಳ’ ನಿಷೇಧದ ನಿಮ್ಮ ಪ್ರಣಾಳಿಕೆಯ ಅಸ್ತ್ರವೇ ನಿಮ್ಮನ್ನು ನಿಶ್ಯಸ್ತ್ರಗೊಳಿಸಿ ನಿಷ್ಕ್ರಿಯಗೊಳಿಸಲಿದೆ- ಹೀಗೆಂದು ಕಾಂಗ್ರೆಸ್‌ ಪಕ್ಷದ ನಡೆಯನ್ನು ಖಂಡಿಸಿದ್ದಾರೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ (BY Vijayendra). ಕಾಂಗ್ರೆಸ್‌ನ ಈ ಪ್ರಸ್ತಾಪವೇ ಅದನ್ನು ಚುನಾವಣೆಯಲ್ಲಿ ಸೋಲಿಸಲು ಸಾಕು ಎಂಬರ್ಥದಲ್ಲಿ ಅವರು ಟ್ವೀಟ್‌ ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಬಿಡುಗಡೆ ಮಾಡಿದ ಕಾಂಗ್ರೆಸ್‌ ಪ್ರಣಾಳಿಕೆ (Congress Manifesto) ʻಸರ್ವ ಜನಾಂಗದ ಶಾಂತಿಯ ತೋಟʼದಲ್ಲಿ ಹಿಂದು ಸಂಘಟನೆಯಾಗಿರುವ ಬಜರಂಗ ದಳವನ್ನು ನಿಷೇಧಿಸುವ ಪ್ರಸ್ತಾಪವಿತ್ತು. ʻʻಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದುʼʼ ಎಂಬ ಹೇಳಲಾಗಿತ್ತು.

ಇದರ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿದ್ದು, ತಾಕತ್ತಿದ್ದರೆ ಬ್ಯಾನ್‌ ಮಾಡಿ ಎಂಬ ಸವಾಲೂ ಕೇಳಿಬಂದಿದೆ.

ಬಿ.ವೈ. ವಿಜಯೇಂದ್ರ ಹೇಳಿದ್ದೇನು?

ಕಾಂಗ್ರೆಸ್‌ ಪಕ್ಷದ ಮುಂದಾಳುಗಳೇ, ನೀವು ಅಧಿಕಾರದಲ್ಲಿದ್ದಾಗ ದೇಶ ವಿದ್ರೋಹಿ ಸಂಘಟನೆಗಳಾದ ಪಿಎಫ್‌ಐ / ಎಸ್‌ಡಿಪಿಐ ಇತ್ಯಾದಿಗಳ ವಿರುದ್ಧ ಎಂದೂ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಒಬ್ಬನೇ ಒಬ್ಬ ಪಾತಕಿಗೂ ಶಿಕ್ಷೆಯಾಗಲಿಲ್ಲ. ದೇಶ ದ್ರೋಹಿಗಳೊಂದಿಗೆ ರಾಜಿ ಮಾಡಿಕೊಂಡು ಇದ್ದಬದ್ದ ಕೇಸಗಳನ್ನೂ ಹಿಂತೆಗೆದುಕೊಂಡ ಕುಖ್ಯಾತಿ ನಿಮ್ಮದು- ಎಂದು ವಿಜಯೇಂದ್ರ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರ ಭಕ್ತ ಸಂಘಟನೆ ‘ಬಜರಂಗ ದಳ’ ನಿಷೇಧದ ನಿಮ್ಮ ಪ್ರಣಾಳಿಕೆಯ ಅಸ್ತ್ರ, ನಿಮ್ಮನ್ನು ನಿಶ್ಯಸ್ತ್ರಗೊಳಿಸಿ ನಿಷ್ಕ್ರಿಯ ಗೊಳಿಸಲಿದೆ ಎಂದು ಎಚ್ಚರಿಸಿರುವ ವಿಜಯೇಂದ್ರ ಅವರು ಕಾಂಗ್ರೆಸ್‌ಗೆ ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂದಿದ್ದಾರೆ. ಧರ್ಮ-ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ… ಎಂದು ಹೇಳುವ ಮೂಲಕ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಸಮಯ ಸನ್ನಿಹಿತವಾಗಿದೆ ಎಂದಿದ್ದಾರೆ.

ಬಜರಂಗ ದಳ ನಿಷೇಧ ಪ್ರಸ್ತಾಪದ ಹಿಂದೆ ಪಿಎಫ್‌ಐ ಇದೆ ಎಂದ ಅಸ್ಸಾಂ ಸಿಎಂ

ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್‌ ಪ್ರಸ್ತಾವನೆ ಹಿಂದೆ ಪಿಎಫ್‍ಐ ಒತ್ತಡವಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಪಿಎಫ್‍ಐ ಮತ್ತು ಮೂಲಭೂತವಾದಿ ಸಂಘಟನೆಗಳ ಪ್ರಣಾಳಿಕೆಯಂತಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಪಿಎಫ್‍ಐ ಮೇಲಿನ ಪ್ರಕರಣಗಳನ್ನು ಹಿಂಪಡೆದು, ಆ ಸಂಘಟನೆಯ 1,700 ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು ಎಂದು ಅವರು ಟೀಕಿಸಿದರು.

ಇದನ್ನೂ ಓದಿ : Congress Manifesto : ಭುಗಿಲೆದ್ದ ಆಕ್ರೋಶದ ಹಿನ್ನೆಲೆ; ಬಜರಂಗ ದಳ ನಿಷೇಧ ಪ್ರಸ್ತಾಪ ಕೈಬಿಡಲು ಚಿಂತನೆ

Exit mobile version