congress-manifesto : Congress may backtrack from Bajaranga dal ban proposal in Manifesto Congress Manifesto : ಭುಗಿಲೆದ್ದ ಆಕ್ರೋಶದ ಹಿನ್ನೆಲೆ; ಬಜರಂಗ ದಳ ನಿಷೇಧ ಪ್ರಸ್ತಾಪ ಕೈಬಿಡಲು ಚಿಂತನೆ - Vistara News

ಕರ್ನಾಟಕ

Congress Manifesto : ಭುಗಿಲೆದ್ದ ಆಕ್ರೋಶದ ಹಿನ್ನೆಲೆ; ಬಜರಂಗ ದಳ ನಿಷೇಧ ಪ್ರಸ್ತಾಪ ಕೈಬಿಡಲು ಚಿಂತನೆ

Karnataka Election 2023 : ಬಜರಂಗ ದಳ ನಿಷೇಧ ಮಾಡುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ನಿಲುವಿನ ಮರುಪರಿಶೀಲನೆ ನಡೆಸಲು ಮುಂದಾಗಿದೆ.

VISTARANEWS.COM


on

congress-manifesto : Congress may backtrack from Bajaranga dal ban proposal in Manifesto
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಿಶ್ವ ಹಿಂದು ಪರಿಷತ್‌ನ ಪರಿವಾರ ಸಂಘಟನೆಗಳಲ್ಲಿ ಒಂದಾಗಿರುವ ಬಜರಂಗ ದಳವನ್ನು ನಿಷೇಧಿಸುವ ಕುರಿತು ಪ್ರಣಾಳಿಕೆಯಲ್ಲಿ (Congress Manifesto) ಮಂಡಿಸಿದ್ದ ಪ್ರಸ್ತಾಪವನ್ನು ಕೈಬಿಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

ಮಂಗಳವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿ ಬಿಡುಗಡೆ ಮಾಡಿದ ಕಾಂಗ್ರೆಸ್‌ ಪ್ರಣಾಳಿಕೆ ʻಸರ್ವ ಜನಾಂಗದ ಶಾಂತಿಯ ತೋಟʼದಲ್ಲಿ ʻʻಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದುʼʼ ಎಂಬ ಹೇಳಲಾಗಿತ್ತು.

ಇದು ಬಿಜೆಪಿ ಮತ್ತು ಸಂಘ ಪರಿವಾರವನ್ನು ತೀವ್ರವಾಗಿ ಕೆರಳಿಸಿತ್ತು. ಬಿಜೆಪಿಯ ಹಲವು ನಾಯಕರು ʻತಾಕತ್ತಿದ್ದರೆ ಬ್ಯಾನ್‌ ಮಾಡಿʼ ಎಂದು ಸವಾಲು ಹಾಕಿದರೆ, ಬಜರಂಗದಳದ ನಾಯಕರಂತೂ ಇದು ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಯಕರು ʻನಾನು ಬಜರಂಗಿ, ನನ್ನನ್ನು ಬಂಧಿಸಿʼ ಎಂದೆಲ್ಲ ಸವಾಲು ಹಾಕಿದರು. ಪ್ರಣಾಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಮೋದಿ ಅವರು ಕೂಡಾ ಇದಕ್ಕೆ ಪ್ರತಿಕ್ರಿಯಿಸಿದರು. ಹೆಚ್ಚಿನವರು ಬಜರಂಗದಳ ಮತ್ತು ಪಿಎಫ್‌ಐ ನಡುವೆ ಸಂಬಂಧ ಕಲ್ಪಿಸಿದ್ದನ್ನು ಕಟುವಾಗಿ ಟೀಕಿಸಿದರು.

ವಿಶ್ವ ಹಿಂದು ಪರಿಷತ್‌ನ ರಾಷ್ಟ್ರ ಮಟ್ಟದ ನಾಯಕರು ಬಜರಂಗ ದಳ ನಿಷೇಧದ ಪ್ರಸ್ತಾಪದ ವಿರುದ್ಧ ಮಾತನಾಡಿದರು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೇ ನಡೆಯಿತು.

ಕಾಂಗ್ರೆಸ್‌ ಪರವಾಗಿದ್ದವರು ಕೂಡಾ ಚುನಾವಣೆಯ ಸಂದರ್ಭದಲ್ಲಿ ಇಂಥ ಎಡವಟ್ಟು ಬೇಕಿತ್ತಾ ಎಂದು ಪ್ರಶ್ನಿಸಲು ತೊಡಗಿದರು. ಇತ್ತ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯ್ಲಿ ಅವರು ಈ ಪ್ರಸ್ತಾಪವನ್ನು ಬಲವಾಗಿ ಸಮರ್ಥಿಸಿದರೆ, ಸಿದ್ದರಾಮಯ್ಯ ಅವರು ತಾವು ನಿಷೇಧ ಮಾಡಲಿರುವುದು ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಸಂಘಟನೆಗಳನ್ನು. ಅದು ಬಜರಂಗ ದಳವೂ ಇರಬಹುದು, ಪಿಎಫ್‌ಐ ಸಂಘಟನೆಯೂ ಇರಬಹುದು ಎಂದು ಹೇಳಿದರು.

ಈ ಎಲ್ಲ ವಿಚಾರಗಳನ್ನು ಪರಿಗಣಿಸಿದ ಕಾಂಗ್ರೆಸ್‌ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ. ಬಜರಂಗ ದಳ ಬ್ಯಾನ್ ವಿಚಾರವನ್ನು ಪ್ರಣಾಳಿಕೆಯಿಂದ ಕೈ ಬಿಡುವ ಸಾಧ್ಯತೆ ಕಂಡುಬಂದಿದೆ. ಮಂಗಳವಾರ ರಾತ್ರಿ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ. ಸಭೆಯ ಬಳಿಕ ರಾತ್ರಿಯೇ ಅಥವಾ ಬುಧವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಬಜರಂಗದಳ ವಿಚಾರದಲ್ಲಿ ಪ್ರಣಾಳಿಕೆಯಲ್ಲಿ ಇರುವುದೇನು?

ಸಮಾಜದಲ್ಲಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲೀ, ಬಜರಂಗ ದಳ ಮತ್ತು ಪಿಎಫ್‌ಐ ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು, ಸಹಿಸುವುದಿಲ್ಲ. ಆದ ಕಾರಣ ಇಂಥ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Karnataka Election : ಬಿಜೆಪಿ ಕೈಗೆ ಸಿಕ್ತು ಬಜರಂಗದಳ ಅಸ್ತ್ರ; ನಿಷೇಧ ಪ್ರಸ್ತಾಪ ವಿರುದ್ಧ ಕೆಂಡಾಮಂಡಲ

congress-manifesto : Congress may backtrack from Bajaranga dal ban proposal in Manifesto

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

Road Accident: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಸರ್ಕಲ್ ಬಳಿ ಮಂಗಳವಾರ ಅಪಘಾತದ ನಡೆದಿದೆ. ಹಿಂಬದಿಯಿಂದ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ.

VISTARANEWS.COM


on

Road Accident
Koo

ಹಾಸನ: ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ನಡೆದು, ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Road Accident) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಸರ್ಕಲ್ ಬಳಿ ಮಂಗಳವಾರ ನಡೆದಿದೆ. ಅಪಘಾತದ ನಂತರ ರಸ್ತೆಯಲ್ಲಿ ಕೆ‌ಎಸ್‌ಆರ್‌ಟಿಸಿ ಬಸ್ ಹೊತ್ತಿ ಉರಿದಿದೆ.

ಬೆಂಗಳೂರು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್, ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಮೃತದೇಹಗಳು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ | Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

ಅಪಘಾತದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ರಸ್ತೆಯಲ್ಲೇ ಚಾಲಕ ಬಸ್ ನಿಲ್ಲಿಸಿದ್ದು, ಬಸ್‌ನಿಂದ ಕೆಳಗಿಳಿದು ಪ್ರಯಾಣಿಕರು ಓಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಬೆಂಕಿಗೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೀರು ತರುತ್ತಿದ್ದ ಹನುಮ ಮಾಲಾಧಾರಿಗಳಿಗೆ ಬೊಲೆರೋ ಡಿಕ್ಕಿ, 3 ಸಾವು

bolero hit 3 death road accident raichur

ರಾಯಚೂರು: ಹನುಮ ಮಾಲಾಧಾರಿಗಳಿಗೆ (Hanuman Devotees) ಬೊಲೇರೋ ವಾಹನ (Bolero Hit) ಡಿಕ್ಕಿಯಾಗಿ ಸ್ಥಳದಲ್ಲಿಯೇ (Road Accident) ಮೂರು ಜನ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ರಾಯಚೂರಿನ ಶಕ್ತಿನಗರದ ಯಾದವ ನಗರ ಕ್ರಾಸ್ ಬಳಿ ಘಟನೆ ನಡೆದಿದೆ. ಹನುಮಮಾಲಾಧಾರಿಗಳು ಹನುಮಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ನೀರು ತರಲು ಬಂದಾಗ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯಮಸ್ವರೂಪಿ ಬೊಲೆರೋ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ.

ಅಯ್ಯನಗೌಡ (28) ಮಹೇಶ (22), ಉದಯಕುಮಾರ (28) ಮೃತ ದುರ್ದೈವಿಗಳು. ರಮೇಶ ಭೂಷಣ ಎಂಬ ಇಬ್ಬರಿಗೆ ಗಂಭೀರ ಗಾಯವಾಗಿದೆ. ಎಲ್ಲರೂ ರಾಯಚೂರಿನ ಹೆಗಸನಹಳ್ಳಿ ನಿವಾಸಿಗಳು. ಕೋಳಿ ತುಂಬಿಕೊಂಡು ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಮಾನದಲ್ಲಿ ಬಂತು 10 ಅನಕೊಂಡ! ಬ್ಯಾಂಕಾಕ್‌ನಿಂದ ಅಕ್ರಮ ಆಮದು, ಬಂಧನ

ಬೆಂಗಳೂರು: ಬೆಂಗಳೂರು ಏರ್ ಕಸ್ಟಮ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಬ್ಯಾಂಕಾಕ್‌ನಿಂದ ಅಕ್ರಮವಾಗಿ ಕದ್ದು ತರಲಾಗುತ್ತಿದ್ದ 10 ಅನಕೊಂಡಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ತರಲಾಗಿದ್ದ 10 ಹಳದಿ ಆನಕೊಂಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್‌ನಿಂದ ಪ್ರಯಾಣಿಕರೊಬ್ಬರು ಅಕ್ರಮವಾಗಿ ಲಗೇಜ್ ಬ್ಯಾಗ್‌ನಲ್ಲಿ ಈ ಆನಕೊಂಡಗಳನ್ನು ತಂದಿದ್ದರು. ಏರ್ ಕಸ್ಟಮ್ ಅಧಿಕಾರಿಗಳ ಪರಿಶೀಲನೆ ವೇಳೆ ಇವು ಪತ್ತೆಯಾಗಿವೆ. ಸದ್ಯ ಅನಕೊಂಡಗಳನ್ನು ರಕ್ಷಿಸಿ ಆರೋಪಿಯನ್ನು ಏರ್ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಹಳದಿ ಬಣ್ಣ ಉಳ್ಳ ಆನಕೊಂಡ ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಅರಣ್ಯ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಹಳದಿ ಅನಕೊಂಡವನ್ನು ಪರಾಗ್ವೆಯನ್ ಅನಕೊಂಡ ಎಂದೂ ಕರೆಯುತ್ತಾರೆ. ಇದು ದಕ್ಷಿಣ ಅಮೆರಿಕಾಕ್ಕೆ ಸೇರಿದ ಬೋವಾ ಜಾತಿಯ ಹಾವು. ಇದು ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದು. ಆದರೆ ಅದರ ಹತ್ತಿರದ ಸಂಬಂಧಿ ಹಸಿರು ಅನಕೊಂಡಕ್ಕಿಂತ ಚಿಕ್ಕದು. ಇವುಗಳ ಮರಿಗಳನ್ನು ಕದ್ದು ಸಾಗಿಸುವ ವ್ಯಾಪಕ ಜಾಲ ಅಂತಾರಾಷ್ಟ್ರೀಯವಾಗಿ ಸಕ್ರಿಯವಾಗಿದೆ. ಈ ನಿಟ್ಟಿನಲ್ಲಿ ಕಸ್ಟಮ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ವಿದೇಶದ ವಿಶಿಷ್ಟ ಪ್ರಾಣಿಗಳನ್ನು (Exotic Animals) ಆಮದು ಮಾಡುವುದು ಹಾಗೂ ಸಾಕುವುದನ್ನು ನಿಷೇಧಿಸಲಾಗಿದೆ.

ʻಚುನಾವಣೆ ಪ್ರಚಾರ ಮಾಡಿದ್ರೆ ಹುಷಾರ್!‌ʼ ಎಂದು ಲಾಂಗ್‌ ಝಳಪಿಸಿದ ಜೆಡಿಎಸ್‌ ನಾಯಕ

ಚಿಕ್ಕಬಳ್ಳಾಪುರ: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ‌ ಚಿಂತಾಮಣಿಯಲ್ಲಿ ಜೆಡಿಎಸ್‌ ನಾಯಕನೊಬ್ಬ ಎದುರಾಳಿಗಳ ಮುಂದೆ ಲಾಂಗ್‌ ಝಳಪಿಸಿ ಆವಾಜ್ ಹಾಕಿದ್ದಾನೆ. ಚುನಾವಣೆ ಪ್ರಚಾರ, ಮತದಾನದಲ್ಲಿ ಪಾಲ್ಗೊಂಡರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಕೋನಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಜೆಡಿಎಸ್ ಮುಖಂಡನಿಂದ ಕಾಂಗ್ರೆಸ್ ಬೆಂಬಲಿಗರಿಗೆ ಬೆದರಿಕೆ ಹಾಕಿದ ಆರೋಪವಿದೆ. ಗ್ರಾಮದಲ್ಲಿ ನಡೆಯುತ್ತಿದ್ದ ಪಲ್ಲಕ್ಕಿ ಉತ್ಸವದಲ್ಲಿ ಲಾಂಗು ಹಿಡಿದು ಬೆದರಿಕೆ ಹಾಕಿದ್ದಾನೆ. ಇದರ ವಿಡಿಯೋ ಸಾಕ್ಷಿ ಲಭ್ಯವಾಗಿದೆ.

ಕೋದಂಡಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆಯುತಿದ್ದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ವಿ‌ ಶ್ರೀನಿವಾಸರೆಡ್ಡಿ (ಕೆವಿಎಸ್) ಎಂಬಾತ ಲಾಂಗ್‌ ತೋರಿಸಿ ಬೆದರಿಕೆ ಹಾಕಿದ್ದಾನೆ. “ಏ ನನ್ನ ಮಕ್ಳಾ, ಚುನಾವಣಾ ಪ್ರಚಾರ ಅಥವಾ ಮತದಾನದಲ್ಲಿ ಪಾಲ್ಗೊಂಡರೆ‌ ಕತ್ತರಿಸುತ್ತೇನೆ” ಎಂದು ಬೆದರಿಕೆ‌ ಹಾಕಿದ್ದಾನೆ ಎನ್ನಲಾಗಿದೆ. ಎದುರಾಳಿಗಳಾದ ಕಲ್ಯಾಣ್‌ ರೆಡ್ಡಿ ಹಾಗು ಆತನ ಕುಟುಂಬದವರನ್ನು ಅಟ್ಟಾಡಿಸಿ ಬೆದರಿಸಿದ್ದಾನೆ.

ಇದನ್ನೂ ಓದಿ: Car Accident: ಆಕಸ್ಮಿಕವಾಗಿ ಕಾರು ಹರಿದು ಒಂದೂವರೆ ವರ್ಷದ ಮಗು ಸಾವು; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಕುರಿತು ಶ್ರೀನಿವಾಸರೆಡ್ಡಿ ವಿರುದ್ಧ ಕಲ್ಯಾಣ್ ಕುಮಾರ್ ಪ್ರಾಣಬೆದರಿಕೆ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಕುಮಾರ್ ಹಾಲಿ ಸಚಿವ ಡಾ. ಎಂ. ಸಿ‌ ಸುಧಾಕರ್ ಬೆಂಬಲಿಗರಾಗಿದ್ದು, ಚಿಂತಾಮಣಿ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Continue Reading

ತುಮಕೂರು

Lok Sabha Election 2024: ಶಿರಾದಲ್ಲಿ ಕ್ಯಾಂಡಲ್‌ ಹಿಡಿದು ಮತದಾನ ಜಾಗೃತಿ

Lok Sabha Election 2024: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಪ್ರಯುಕ್ತ ಶಿರಾ ನಗರದಲ್ಲಿ ಸೋಮವಾರ ಸಂಜೆ ಕ್ಯಾಂಡಲ್ ಹಿಡಿದು ಪ್ರಮುಖ ಬೀದಿಯಲ್ಲಿ ಸಂಚರಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

VISTARANEWS.COM


on

Voting awareness programme in Shira
Koo

ಶಿರಾ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ (Lok Sabha Election 2024) ಪ್ರಯುಕ್ತ ನಗರದಲ್ಲಿ ಸೋಮವಾರ ಸಂಜೆ ಕ್ಯಾಂಡಲ್ ಹಿಡಿದು ಪ್ರಮುಖ ಬೀದಿಯಲ್ಲಿ ಸಂಚರಿಸುವ ಮೂಲಕ ಮತದಾನ ಜಾಗೃತಿ (Voting awareness) ಮೂಡಿಸಲಾಯಿತು.

ತಾಲೂಕು ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾ.ಪಂ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಸಹಾಯಕ ಚುನಾವಣಾ ಅಧಿಕಾರಿ ಸೋಮಪ್ಪ ಕಡಕೋಳ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

ತಹಸೀಲ್ದಾರ್‌ ದತ್ತಾತ್ರೇಯ, ನಗರಸಭೆ ಆಯುಕ್ತ ರುದ್ರೇಶ್ ಮಾತನಾಡಿದರು.

ಮತದಾನದ ಜಾಗೃತಿ ಘೋಷಣೆಗಳ ಫಲಕಗಳ ಮೂಲಕ ಕ್ಯಾಂಡಲ್ ಹಿಡಿದು ಸಾರ್ವಜನಿಕರಿಗೆ ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.

ಇದನ್ನೂ ಓದಿ: Bridge Collapse: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಈ ಸಂದರ್ಭದಲ್ಲಿ ತಾಪಂ ಇಒ ಹನುಮಂತರಾಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಮಳೆ

Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

Karnataka Weather Forecast : ಬಿರುಗಾಳಿ ಸಹಿತ ಸುರಿದ ಮಳೆಗೆ (Rain News) ಬೀದರ್‌, ವಿಜಯನಗರ, ದಾವಣಗೆರೆ ರೈತರು ತತ್ತರಿಸಿ ಹೋಗಿದ್ದಾರೆ. ಸಾಲಸೋಲ ಮಾಡಿ ಖರೀದಿಸಿದ್ದ ಎತ್ತುಗಳು ಸಿಡಿಲಿಗೆ ಬಲಿಯಾದರೆ, ನೀರಿಲ್ಲದಿದ್ದರೂ ಟ್ಯಾಂಕರ್‌ ಮೂಲಕ ಕಷ್ಟ ಪಟ್ಟು ಬೆಳೆದಿದ್ದ ಬೆಳೆಯು ನೆಲಕಚ್ಚಿದೆ. ಸದ್ಯ ಬುಧವಾರದಂದು ಎಲ್ಲೆಲ್ಲಿ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಅಬ್ಬರಕ್ಕೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ (Rain News) ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ಮಧ್ಯ‌ ಮಹಾರಾಷ್ಟ್ರದಿಂದ ಕರ್ನಾಟಕ ಸೇರಿ ಕೇರಳದವರೆಗೆ ಸುಳಿಗಾಳಿಯ ಚಲನೆಯಿಂದ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿದೆ. ಇದರ ಪ್ರಭಾವದಿಂದಾಗಿ ಇನ್ನೆರಡು ದಿನಗಳು ಕರ್ನಾಟಕದಲ್ಲಿ ಮಳೆಯಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಪ್ರಮುಖವಾಗಿ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ದಕ್ಷಿಣ ಒಳನಾಡಿನ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಇನ್ನೂ 30-40 ಕಿಮೀ ವೇಗದಲ್ಲಿ ಬಿರುಸಿನ ಗಾಳಿ ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಇದನ್ನೂ ಓದಿ:Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

ಸಿಡಿಲಿಗೆ ಎತ್ತುಗಳು ಬಲಿ

ಬೀದರ್‌ನ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಸಿಡಿಲು ಬಡಿದು 2 ಎತ್ತುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ತಡರಾತ್ರಿಯಲ್ಲಿ ಭಾರಿ ಮಳೆಯೊಂದಿಗೆ ಸಿಡಿಲು ಬಡಿದಿದೆ. ಪರಿಣಾಮ ಸಾಗರ ಬಸವರಾಜ ಪಾಟೀಲ ಎಂಬುವವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ.

ವಿಜಯನಗರದಲ್ಲಿ ಗಾಳಿ-ಮಳೆಗೆ ಹಾರಿದ ಶಾಮಿಯಾನ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದ ಗ್ರಾಮದ ಬಳಿಯ ಆಂಜನೇಯ ದೇಗುಲದಲ್ಲಿ ಹನುಮ ಜಯಂತಿ ನಿಮಿತ್ತ ಶಾಮಿಯಾನ, ಲೈಟಿಂಗ್ ಹಾಕಲಾಗಿತ್ತು. ಆದರೆ ಜೋರಾಗಿ ಬೀಸಿದ ಗಾಳಿ, ಮಳೆಗೆ ಶಾಮಿಯಾನ, ಲೈಟಿಂಗ್ಸ್‌ ಹಾರಿ ಹೋಗಿತ್ತು. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿತ್ತು.

ತಡರಾತ್ರಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆ ನೆಲಕ್ಕೆ ಉರುಳಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಟ್ಟಮ್ಮನಹಳ್ಳಿ ಗ್ರಾಮದ ಮೂಗಪ್ಪ ಎಂಬುವರಿಗೆ ಸೇರಿದ 5 ಎಕರೆ ಪಪ್ಪಾಯಿ ಬೆಳೆ ಹಾಳಾಗಿದೆ. ಇದರಿಂದ ಅಂದಾಜು 5 ರಿಂದ 7 ಲಕ್ಷ ರೂಪಾಯಿ ಬೆಲೆ ಬಾಳುವ ಪಪ್ಪಾಯಿ ಬೆಳೆಗೆ ಹಾನಿಯಾಗಿದೆ. ಇದೇ ಗ್ರಾಮದ ಪತ್ರಿಗೌಡ ಹೊನ್ನೆಹಳ್ಳಿ ಎನ್ನುವವರ 3 ಎಕರೆ, ಕುಸುಮ ಅವರ 4 ಎಕರೆ ಪಪ್ಪಾಯಿ ಬೆಳೆ ನಷ್ಟವಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.

ದಾವಣಗೆರೆಯಲ್ಲಿ ಬಾಳೆ ಬೆಳೆ ನಾಶ

ಸೋಮವಾರ ಸಂಜೆ ಸುರಿದ ಗಾಳಿ ಮಳೆಗೆ ಅಪಾರ ಪ್ರಮಾಣದ ಬಾಳೆ ಬೆಳೆ ನಾಶವಾಗಿವೆ. ದಾವಣಗೆರೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ, ಜಮ್ಮಪುರ, ಹರಿಶಿನಗುಂಡಿ ಸೇರಿದಂತೆ ಹಲವು ಕಡೆ ಬೆಳೆ ನಾಶವಾಗಿದೆ. ಕಟ್ಟಿಗೆಹಳ್ಳಿ ಗ್ರಾಮದ ಸಿದ್ದಮ್ಮ, ಬಸವರಾಜಪ್ಪ ಎಂಬುವರಿಗೆ ಸೇರಿದ 20 ಎಕರೆ ಬಾಳೆ ತೋಟ ನೆಲಕಚ್ಚಿದೆ. ಬರಗಾಲದಲ್ಲಿ ಟ್ಯಾಂಕರ್ ನೀರು ಖರೀದಿ ಮಾಡಿ ಬಾಳೆ ಬೆಳೆಸಿದ್ದರು. ಆದರೆ ಗಾಳಿ ಮಳೆಗೆ ಬಾಳೆಯು ನೆಲಸಮವಾಗಿದೆ. ಕೂಡಲೇ ಹಾನಿಗೊಂಡ ಬೆಳೆಗೆ ಸರ್ಕಾರ ಪರಿಹಾರ ‌ನೀಡುವಂತೆ ಒತ್ತಾಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

HD Devegowda: ನಾನು ಇನ್ನೆರಡು ವರ್ಷ ಬದುಕಬಹುದು ಎಂದು ಕಣ್ಣೀರು ಹಾಕಿದ ದೇವೇಗೌಡರು

HD Devegowda: ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ ಎಂದು ದೊಡ್ಡಗೌಡರು ಕಣ್ಣೀರು ಹಾಕಿದ್ದಾರೆ.

VISTARANEWS.COM


on

HD Devegowda
Koo

ಹಾಸನ: ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಅವರು ಕಣ್ಣೀರು ಹಾಕಿರುವುದು ಕಂಡುಬಂದಿದೆ. ಜಿಲ್ಲೆಯ ಸಕಲೇಶಪುರ ಕಟ್ಟಾಯ ಹೋಬಳಿ ಸತ್ತಿಗರಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ ಎಂದು ದೊಡ್ಡಗೌಡರು ಕಣ್ಣೀರು ಹಾಕಿದ್ದಾರೆ.

ನಾನು ಹನಿ ನೀರಾವರಿ, ಟ್ರ್ಯಾಕ್ಟರ್, ಟಿಲ್ಲರ್‌ಗೆ ಸಬ್ಸಿಡಿ ಕೊಟ್ಟಿದ್ದೆ. ಚಿಕ್ಕಬಳ್ಳಾಪುರ ಸಭೆಯಲ್ಲಿ ನಮ್ಮ ರಾಜ್ಯದ ಕಾವೇರಿ ನೀರನ್ನು ನಮಗೆ ಕೊಡಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳುತ್ತಿದ್ದಾರೆ ಎಂದು ಮೋದಿಗೆ ಹೇಳಿದೆ. ನೀವು ಕೇವಲ ಹಾಸನ ಮಾತ್ರವಲ್ಲ ರಾಜ್ಯದ 28ಕ್ಕೆ 28 ಕ್ಷೇತ್ರ ಗೆಲ್ಲಿಸಬೇಕು, ಅಮೇಲೆ ನೋಡುತ್ತೀನಿ ಎಂದು ಹೇಳಿದರು.

ನಮ್ಮ ಗೌಡ ಬರ್ತಾನೆ ಏನಾದರೂ ಮಾಡುತ್ತಾನೆ ಅಂತ ಇಲ್ಲಿ 20 ಹಳ್ಳಿ ಜನ ಸೇರಿದ್ದೀರಿ. ನನ್ನ ಮನಸ್ಸಲ್ಲಿ ನೋವಿದೆ, ಮೋದಿ ಜೊತೆ ಕೂತು ಪೋಟೋ ತೆಗೆಸಿಕೊಳ್ಳುವುದಲ್ಲ. ನಿಮ್ಮನ್ನು ನೋಡಿದಾಗ ನನಗೆ ತುಂಬಾ ನೋವಿದೆ. ನಿಮ್ಮನ್ನು ಗೆಲ್ಲಿಸುತ್ತೇವೆ ಅಂತ ಬಂದಿರುವ ಪುಣ್ಯಾತ್ಮರು ನೀವು, ನಿಮಗೆ ಸಾಷ್ಟಾಂಗ ನಮಸ್ಕಾರ. ನಾನು ಇನ್ನೆರಡು ವರ್ಷ ಬದುಕಬಹುದು… ನಾನು ಏನು ಮಾಡಬೇಕು ಅನ್ನೊದು ನಿತ್ಯ ಯೋಚನೆ ಮಾಡುತ್ತಿರುತ್ತೇನೆ. ಮೋದಿಯವರು 400 ಸೀಟು ಪಕ್ಕ ಅಂತಾರೆ, ಅವರು ಪ್ರಧಾನ ಮಂತ್ರಿ ಆಗೋದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.

ಇದನ್ನೂ ಓದಿ | Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

ಮೋದಿ ಅವರ ಕೈಹಿಡಿದು ಕರೆಸುವ ಶಕ್ತಿ ಇದೆ. ಈ ಭಾಗದಲ್ಲಿ ನೀವು ಬದುಕಲು ಮಾರ್ಗ ಕಲ್ಪಿಸಿ ನನ್ನ ಕೊನೆ ಉಸಿರು ಎಳೆಯಬೇಕು ಅನ್ನೊ ಹಠ ಇದೆ. ನಾನು ಯಾವಾಗಲೋ ಸಾಯಬೇಕಿತ್ತು, ಆದರೆ ಬದುಕಿದೆ. ನನಗೆ ಮೂರು ವರ್ಷ ಕಿಡ್ನಿ ಫೇಲ್ ಆಗಿ ಮಣಿಪಾಲ್ ಆಸ್ಪತ್ರೆ ಲಿ ನನ್ನ ಅಳಿಯ ಡಾ ಮಂಜುನಾಥ್, ಡಾ. ಬಳ್ಳಾಲ್ ಮೂರು ವರ್ಷದಲ್ಲಿ ಬದುಕಿಸಿದರು. ನಿಮ್ಮ ನೋಡೋ ಸೌಭಾಗ್ಯ ಇತ್ತು ಅನಿಸುತ್ತೆ ಎಂದು ದೇವೇಗೌಡರು ಹೇಳಿದರು.

ನೀತಿವಂತ, ಗುಣವಂತ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಿ: ದೇವೇಗೌಡ

ರಾಮನಗರ: ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮೋದಿ ಭರವಸೆ ಕೊಟ್ಟಿದ್ದಾರೆ. ನಾನೂ ಅವರಿಗೆ ಒಂದು ಮಾತು ಕೊಟ್ಟಿದ್ದೇನೆ. ರಾಜ್ಯದಲ್ಲಿ 28 ಸ್ಥಾನ ಗೆದ್ದು ಕೊಡುವ ಮಾತು ಕೊಟ್ಟಿದ್ದೇನೆ. ಅದಕ್ಕಾಗಿ ಈ ವಯಸ್ಸಿನಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ನೀವು 28 ಸ್ಥಾನಗಳನ್ನು ನೀಡಿದ್ರೆ ಮೋದಿ ಕೈಹಿಡಿದು ಮೇಕೆದಾಟಿಗೆ ಸಹಿ ಹಾಕಿಸ್ತೇನೆ. ನೀತಿವಂತ, ಗುಣವಂತ ಡಾ.ಮಂಜುನಾಥ್ ಅವರನ್ನು ಗೆಲ್ಲಿಸಿ. ಎಲ್ಲರಿಗೂ ಕೈ ಮುಗಿದು ಪ್ರಾರ್ಥನೆ ಮಾಡ್ತೇನೆ. 26ನೇ ತಾರೀಖು ಡಾ.ಮಂಜುನಾಥ್ ಅವರಿಗೆ ಮತಹಾಕಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮನವಿ ಮಾಡಿದರು.

ಹಾರೋಹಳ್ಳಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಕನಕಪುರ ಹೊಸದಲ್ಲ. ಈ ಹಿಂದೆ ನನ್ನ ವಿರುದ್ಧ ತೇಜಸ್ವಿನಿ ಎಂಬ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದರು. ಮತ್ತೆ ಅದೇ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಪ್ರಧಾನಿ ಆಗಿದ್ದೆ. ನನ್ನನ್ನು ಪ್ರಧಾನಿ ಮಾಡಿದ್ದು ಇದೇ ಕ್ಷೇತ್ರದ ಮಹಾಜನತೆ. ದೇಶದಲ್ಲಿ ದೇವೇಗೌಡರು ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಡಾ.ಮಂಜುನಾಥ್ ನನ್ನ ಅಳಿಯ ಎನ್ನುವುದಕ್ಕಿಂತ ಜಯದೇವ ಆಸ್ಪತ್ರೆಯಲ್ಲಿ ಅಪಾರ ಸೇವೆ ಮಾಡಿದವರು. ಅವರು ಡೈರೆಕ್ಟರ್ ಆಗಿದ್ದಾಗ ಎ.ಹೆಚ್.ಪಟೇಲ್ ಸಿಎಂ ಆಗಿದ್ರು. ಆಗ ಬಂಧಿಖಾನೆ ಮಂತ್ರಿ ಆಗಿದ್ದ ಈ ಕ್ಷೇತ್ರದ ಮಹಾನುಭಾವ ಅವರ ಮೇಲೆ ತನಿಖೆ ಮಾಡಿಸಿದ್ದ. ಇವರ ಆರೋಗ್ಯ ಸೇವೆ ದೇಶದ ಗಮನ ಸೆಳೆದಿದೆ. ಅದಕ್ಕಾಗಿ ಮೋದಿ, ಅಮಿತ್ ಶಾ ಇವರ ಸೇವೆ ದೇಶಕ್ಕೆ ಬೇಕು ಅಂತ ಆಹ್ವಾನಿಸಿ, ಅವರನ್ನ ಬಿಜೆಪಿಯಿಂದ ನಿಲ್ಲಿಸಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಈಗ ಮಂಜುನಾಥ್ ಎನ್ನುವ ಹೆಸರಿನ ಮೂರು ಜನರನ್ನು ನಿಲ್ಲಿಸಿದ್ದಾರೆ. ಮಹಾನುಭಾವರು ಎಂತಾ ಬುದ್ಧಿ ಬಳಕೆ‌ ಮಾಡಿದ್ದಾರೆ. ಆದರೆ ಡಾ.ಮಂಜುನಾಥ್ ನಂಬರ್ 1 ಡಾಕ್ಟರ್. ಅವರ ಕ್ರಮಸಂಖ್ಯೆ ಕೂಡಾ ನಂಬರ್ ಒನ್. ನರೇಂದ್ರ ಮೋದಿ, ಅಮಿತ್ ಶಾ ಆಯ್ಕೆ ಮಾಡಿರುವ ವ್ಯಕ್ತಿ ಡಾ.ಮಂಜುನಾಥ್. ದೇಶದ ಸೇವೆ ಮಾಡುವ ಅವಕಾಶವನ್ನು ಅವರಿಗೆ ನೀಡಿ ಎಂದು ಹೇಳಿದರು.

ಮನಮೋಹನ್ ಸಿಂಗ್ ಅಧಿಕಾರ ಕಳೆದುಕೊಳ್ಳುವ ಕೊನೇ ಹಂತದಲ್ಲಿ ದೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ಪ್ರಧಾನಿ ಮೋದಿ 10 ವರ್ಷದಲ್ಲಿ ದೇಶ ಅಭಿವೃದ್ಧಿ ಮಾಡಿದ್ದಾರೆ. ಅಂತವರಿಗೆ ಖಾಲಿ ಚೊಂಬು ತೋರಿಸ್ತಾರೆ. ನೀವು ಯಾರಿಗೆ ತೋರಿಡುತ್ತಿದ್ದೀರಿ? ಹುಡುಗಾಟಿಕೆ, ತಮಾಷೆನಾ… ನೀವು ನೀಡಿದ್ದ ಖಾಲಿ ಚೊಂಬನ್ನು ಅವರು ಅಕ್ಷಯ ಪಾತ್ರೆ ಮಾಡವ್ರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ | S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ: ಸಚಿವ ಜೈಶಂಕರ್‌ ಆರೋಪ

ರಾಜ್ಯದಲ್ಲಿ ಇರೋ ಭ್ರಷ್ಟ ಸರ್ಕಾರವನ್ನು ತೆಗೆಯೋವರೆಗೂ ನಾನು ಕೂರೋದಿಲ್ಲ. ನೀವೆಲ್ಲ ಕೈ ಎತ್ತಿ ಡಾ.ಮಂಜುನಾಥ್ ಗೆಲ್ಲಿಸುತ್ತೇನೆ ಎಂದು ಶಕ್ತಿ ನೀಡಿ. ಡಾ.ಮಂಜುನಾಥ್ ಅತ್ಯಂತ ಅಧಿಕ ಮತಗಳಿಂದ ಗೆಲ್ಲಲು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

Continue Reading
Advertisement
Latest15 mins ago

Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

Road Accident
ಕರ್ನಾಟಕ16 mins ago

Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

Himanta Biswa Sarma
ರಾಜಕೀಯ20 mins ago

Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ

Dungarees Fashion In Summer
ಫ್ಯಾಷನ್20 mins ago

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

Voting awareness programme in Shira
ತುಮಕೂರು23 mins ago

Lok Sabha Election 2024: ಶಿರಾದಲ್ಲಿ ಕ್ಯಾಂಡಲ್‌ ಹಿಡಿದು ಮತದಾನ ಜಾಗೃತಿ

Suresh Raina
ಪ್ರಮುಖ ಸುದ್ದಿ23 mins ago

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Karnataka Weather Forecast
ಮಳೆ27 mins ago

Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

Bridge Collapse
ದೇಶ38 mins ago

Bridge Collapse: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

dimond smuggling
ದೇಶ56 mins ago

Diamond Smuggling : ನೂಡಲ್ಸ್​ ಪ್ಯಾಕೆಟ್​​ನಲ್ಲಿ ಸಿಕ್ಕಿತು 6.46 ಕೋಟಿ ರೂಪಾಯಿ ಮೌಲ್ಯದ ವಜ್ರ!

Tongue Reveals Health
ಆರೋಗ್ಯ56 mins ago

Tongue Reveals Health: ನಮ್ಮ ಆರೋಗ್ಯದ ಚರಿತ್ರೆಯನ್ನು ನಮ್ಮ ನಾಲಿಗೆಯೇ ಹೇಳುತ್ತದೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌