Site icon Vistara News

Congress Meeting : ಲೋಕಸಭೆ ಚುನಾವಣೆಗೆ ಬ್ಲೂಪ್ರಿಂಟ್‌ ರೆಡಿ, 20 ಸ್ಥಾನ ಗೆಲ್ತೀವಿ ಎಂದು ವರಿಷ್ಠರಿಗೆ ಕಾಂಗ್ರೆಸ್‌ ಅಭಯ

Congress meeting

ನವ ದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ರಾಜ್ಯದ ಕಾಂಗ್ರೆಸ್‌ ನಾಯಕರು (State Congress leaders) ಹೈಕಮಾಂಡ್‌ಗೆ (Congress High command) ನೀಡಿದ್ದಾರೆ. ಅದರ ಜತೆಗೆ ಕಾಂಗ್ರೆಸ್‌ ಹೆಮ್ಮೆ ಪಡುವಂತೆ, ಇತರ ರಾಜ್ಯಗಳಿಗೆ ಮಾದರಿಯಾಗುವಂತೆ ಅಧಿಕಾರ ನಡೆಸುವುದಾಗಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ತಿಕ್ಕಾಟ (Internal feud) ಹಾಗೂ ಲೋಕಸಭಾ ಚುನಾವಣೆಗೆ (Lok Sabha Election 2024) ರಣತಂತ್ರ ಹೆಣೆಯುವ ನಿಟ್ಟಿನಲ್ಲಿ ಬುಧವಾರ (ಆಗಸ್ಟ್‌ 2) ದಿಲ್ಲಿಯಲ್ಲಿ ನಡೆದ ಹೈಕಮಾಂಡ್‌ ಜತೆಗಿನ ಮಹತ್ವದ ಸಭೆಯಲ್ಲಿ (Congress Meeting) ಈ ಭರವಸೆ ನೀಡಲಾಗಿದೆ. ಬುಧವಾರ ಮಧ್ಯಾಹ್ನದಿಂದ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಸಭೆ ನಡೆಯಿತು. ಈ ಸಭೆಯಲ್ಲಿ ಚುನಾವಣೆಯನ್ನು ಎದುರಿಸುವ ಬ್ಲೂಪ್ರಿಂಟ್‌ ಸಿದ್ಧಪಡಿಸಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಮತ್ತು ರಾಹುಲ್‌ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar), ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರು ಮತ್ತು ಹಿರಿಯ ನಾಯಕರು ಭಾಗವಹಿಸಿದ್ದರು. ಇದರಲ್ಲಿ ಲೋಕಸಭಾ ಚುನಾವಣಾ ಸಿದ್ಧತೆಗೆ ಸಂಬಂಧಿಸಿ ಮಾತ್ರ ಚರ್ಚೆ ನಡೆಯಿತು ಎಂದು ಸಿಎಂ ಸಿದ್ದರಾಮಯ್ಯ ಅವರು ಬಳಿಕ ತಿಳಿಸಿದರು. ಅದರೆ, ರಾಜ್ಯದಲ್ಲಿ ನಾಯಕರ ನಡುವಿನ ಭಿನ್ನಾಪ್ರಾಯ, ದೋಷಾರೋಪಗಳ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಅಧಿಕಾರದಲ್ಲಿ ಇರುವವರು ಇಲ್ಲದವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.

ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

  1. ಹೈಕಮಾಂಡ್ ನಾಯಕರು ರಾಜ್ಯದ ಸೀನಿಯರ್ ನಾಯಕರ ಸಭೆ ಕರೆದಿದ್ದರು. ನಮ್ಮ ಸಂಪುಟದ ಎಲ್ಲಾ ಮಂತ್ರಿಗಳು, ನಾನು, ಡಿಸಿಎಂ, ಹಿರಿಯ ನಾಯಕರು ಭಾಗಿಯಾಗಿದ್ದೇನೆ.
  2. ಬಹಳ ಮುಖ್ಯವಾಗಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಎಲ್ಲರೂ ಅವರವರ ಅಭಿಪ್ರಾಯ ಹೇಳಿದ್ದಾರೆ. 31 ಜಿಲ್ಲೆಗೂ ಸಹ ಉಸ್ತುವಾರಿ ಸಚಿವರೂ ಇದ್ದಾರೆ. ಎಲ್ಲರಿಗೂ ಸಹ ಜವಾಬ್ದಾರಿ ನೀಡಬೇಕು. ಅತೀ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಬಗ್ಗೆ ಚರ್ಚೆಯಾಗಿದೆ.
  3. ಇವತ್ತು ವಾತಾವರಣ ಕಾಂಗ್ರೆಸ್ ಸರ್ಕಾರದ ಪರವಾಗಿದೆ. ಯಾಕಂದ್ರೆ ನಾವು ಕೊಟ್ಟ ಮಾತು ಉಳಿಕೊಂಡಿದ್ದೇವೆ. ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ.
  4. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮಗೆ ಈ ಗ್ಯಾರಂಟಿ ಯೋಜನೆ ಜಾರಿ ಸಾಧ್ಯವಿಲ್ಲ ಅಂದುಕೊಂಡಿದ್ದರು. ಸ್ವತಃ ಪ್ರಧಾನಿ ಮೋದಿಯವರೇ ಗ್ಯಾರಂಟಿ ಜಾರಿ ಮಾಡೋಕೆ ಆಗೋಲ್ಲ ಅಂತ ಹೇಳಿದ್ದರು. ನಿನ್ನೆ ಸಹ ಮೋದಿ ಅವರು ಫ್ರೀ ಕೊಟ್ರೆ ದಿವಾಳಿ ಆಗುತ್ತೆ ಅಂತ ಹೇಳಿದರು.
  5. ಮೋದಿ ಹೇಳುವ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲ. ಅದು ಶುದ್ಧ ಸುಳ್ಳು, ನಾವು ಎಲ್ಲವನ್ನೂ ಮಾಡುತ್ತಿದ್ದೇವೆ. ಫ್ರೀ ಕೂಡ ಕೊಡ್ತೇವೆ, ಅಭಿವೃದ್ಧಿ ಸಹ ಮಾಡ್ತೇವೆ.
  6. ಎಲ್ಲ ವಿಚಾರಗಳನ್ನು ಹೈಕಮಾಂಡ್ ಗೆ ಹೇಳಿದ್ದೇವೆ. ಈ ಬಾರಿ ನಮ್ಮ ಪರವಾಗಿ ವಾತಾವರಣ ಇರುವುದರಿಂದ ಈ ಬಾರಿ ಕನಿಷ್ಠ 20 ಸೀಟ್ ಗೆಲ್ತಿವಿ ಅಂತ ಆಶ್ವಾಸನೆ ಕೊಟ್ಟಿದ್ದೇವೆ. ನಾವು ಪಾರ್ಲಿಮೆಂಟ್ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನೂ ಗೆಲ್ಲುತ್ತೇವೆ.
  7. ಮಧ್ಯಾಹ್ನದಿಂದ ಇಲ್ಲಿವರೆಗೂ ಚರ್ಚೆಯಾಗಿರುವುದು ಲೋಕಸಭಾ ಚುನಾವಣೆ ಬಗ್ಗೆ ಮಾತ್ರ. ಈ ವಿಚಾರ ಬಿಟ್ಟು ಬೇರೆ ಏನೂ ಆಗಿಲ್ಲ

ಒಂದು ಕ್ಷೇತ್ರಕ್ಕೆ ಒಬ್ಬ ಸಚಿವರು, ಪಕ್ಷದ ಪ್ರಮುಖರ ಉಸ್ತುವಾರಿ

ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗಿದೆ. ಲೋಕಸಭಾ ಕ್ಷೇತ್ರಕ್ಕೆ ಒಬ್ಬರು ಸಚಿವರು ಮತ್ತು ಪಕ್ಷದ ಪ್ರಮುಖರು ಉಸ್ತುವಾರಿಗಳಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿರುವ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಕರ್ನಾಟಕ ಮಾಡಲ್ ದೇಶಕ್ಕೆ ಹೊಸ ಮಾಡೆಲ್ ಆಗಲಿದೆ. ಜನರ ಸೇವೆಗಾಗಿ ಬೇರೆಯವರು ಈ ಮಾಡೆಲನ್ನು ಅನುಸರಿಸಬೇಕು ಎಂದು ಹೇಳಿದರು ಸುರ್ಜೇವಾಲ.

ಇದನ್ನೂ ಓದಿ: Karnataka Politics : ಲೋಕಸಭೆಯಲ್ಲಿ ಕಾಂಗ್ರೆಸ್‌ ಮನೆಯವರಿಗೆ ಮಣೆ! ಕುಟುಂಬ ರಾಜಕಾರಣ?

Exit mobile version