Site icon Vistara News

Karnataka Assembly: ಶಾಸಕರಿಗೆ ತರಬೇತಿ ಶಿಬಿರ: ವೀರೇಂದ್ರ ಹೆಗ್ಗಡೆ, ಕರಜಗಿ, ಕುಂಞ‌, ಶ್ರೀಶ್ರೀ ಉಪಸ್ಥಿತಿಗೆ ಕಾಂಗ್ರೆಸ್‌ ವಿರೋಧ

Mohammad kunhi veerendra heggade gururaja karajagi ravinshankar guruji

#image_title

ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ (Karnataka Assembly) ಆಯೋಜಿಸಲಾಗಿರುವ ಮೂರು ದಿನಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭೆ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ, ಖ್ಯಾತ ತರಬೇತುದಾರ ಡಾ. ಗುರುರಾಜ ಕರಜಗಿ, ಜಮಾತೆ ಇಸ್ಲಾಮ್‌ ಎ ಹಿಂದ್‌ ರಾಜ್ಯ ಕಾರ್ಯದರ್ಶಿ ಮೊಹಮ್ಮದ್‌ ಕುಂಞ ಮುಂತಾದವರು ಉಪಸ್ಥಿತಿಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದೆ.

ಹದಿನಾರನೇ ವಿಧಾನಸಭೆಗೆ ಆಯ್ಕೆಯಾದವರಿಗೆ ಶಾಸನ ಸಭೆಯ ನಡವಳಿಕೆ, ಆರೋಗ್ಯ, ಮಾನಸಿಕ ಸ್ಥಿಮಿತ ಸೇರಿ ಅನೇಕ ವಿಚಾರಗಳಲ್ಲಿ ನೆಲಮಂಗಲ ಬಳಿಯಿರುವ ಕ್ಷೇಮವನದಲ್ಲಿ ಮೂರು ದಿನ ಶಿಬಿರ ನಡೆಯಲಿದೆ. ಜೂನ್‌ 26ರಿಂದ 28ರವರೆಗೆ ನಡೆಯುವ ಶಿಬಿರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಅನೇಕ ರಾಜಕಾರಣಿಗಳು ಭಾಗವಹಿಸಿ ಹೊಸ ಶಾಸಕರಿಗೆ ಕಿವಿಮಾತು ಹೇಳಲಿದ್ದಾರೆ.

ಹಾಗೆಯೇ ಡಾ. ವೀರೇಂದ್ರ ಹೆಗ್ಗಡೆ, ಡಾ. ಗುರುರಾಜ ಕರಜಗಿ, ಮೊಹಮ್ಮದ್‌ ಕುಂಞ, ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಸಂಸ್ಥಾಪಕ ಶ್ರೀ ರವಿಶಂಕರ್‌ ಗುರೂಜಿಯವರಂತಹ ಧಾರ್ಮಿಕ, ಸಾಮಾಜಿಕ ವ್ಯಕ್ತಿಗಳು ಸಹ ಭಾಗವಹಿಸಲಿದ್ದಾರೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಕಾಂಗ್ರೆಸ್‌ ವಿರೋಧ
ೌೀರೇಂದ್ರ ಹೆಗ್ಗಡೆ, ಗುರುರಾಜ ಕರಜಗಿ ಸೇರಿ ಧಾರ್ಮಿಕ ಹಿನ್ನೆಲೆಯುಳ್ಳವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಃವಾನಿಸಿರುವುದಕ್ಕೆ ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಆಖ್ಷೇಪಿಸಿದ್ದಾರೆ. ಈ ಕುರಿತು ಯು.ಟಿ. ಖಾದರ್‌ ಅವರಿಗೆ ರಮೇಶ್‌ ಬಾಬು ಪತ್ರ ಬರೆದಿದ್ದಾರೆ. ಎಲ್ಲಿಯೂ ಸಂಪನ್ಮೂಲ ವ್ಯಕ್ತಿಗಳನ್ನು ಹೆಸರಿಸದೇ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಪತ್ರದ ಪಠ್ಯ ಈ ಕೆಳಕಂಡಂತಿದೆ.

“ಹದಿನಾರನೇ ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಆಗಿ ತಾವು ಆಯ್ಕೆ ಆಗುವುದರ ಮೂಲಕ ಕರ್ನಾಟಕದ
ಸಂಸದೀಯ ವ್ಯವಸ್ಥೆಯಲ್ಲಿ ಹೊಸ ಪರಿಕಲ್ಪನೆ ಮತ್ತು ವೈಚಾರಿಕ ಚಿ೦ತನೆಗಳಿಗೆ ಅವಕಾಶ ನೀಡುತ್ತೀರಿ ಎಂಬ ಭರವಸೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸುವ ಬಹುತೇಕರಿಗೆ ಇರುತ್ತದೆ. ತಾವು ನಡೆದು ಬಂದ ದಾರಿ ಮತ್ತು
ಸೈದ್ಧಾಂತಿಕ ವಿಚಾರಗಳು ಸ್ಟೀಕರ್‌ ಸ್ಥಾನದ ಮೌಲ್ಯಗಳನ್ನು ಇಮ್ಮಡಿಗೊಳಿಸುವ ನಿರೀಕ್ಷೆ ನಮ್ಮದಾಗಿರುತ್ತದೆ.

ಕರ್ನಾಟಕ ವಿಧಾನಸಭಾ ಸದಸ್ಯರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಆಯೋಜನೆ ಸಮಂಜನವಾಗಿರುತ್ತದೆ.
ಭೌದ್ದಿಕವಾಗಿ ಮತ್ತು ದೈಹಿಕವಾಗಿ ಶಾಸಕರನ್ನು ಗಟ್ಟಿಗೊಳಿಸುವ ಯಾವುದೇ ಪುಯತ್ನ ಔಚಿತ್ಯಪೂರ್ಣವಾಗಿರುತ್ತದೆ.
ಇಂತಹ ತರಭೇತಿ ಶಿಬಿರದ ಸ೦ಪನ್ಮೂಲ ವ್ಯಕ್ತಿಗಳು ಸಮಾಜಮುಖಿಗಳಾಗಿರಬೇಕು. ಇವರು ಜೀವನಬದ್ಧತೆ,
ಗಟ್ಟಿತನದ ಮೌಲ್ಯ ಮತ್ತು ಸಂವಿಧಾನದ ಆಶಯಗಳಿಗೆ ಪೂರಕವಾಗಿ ವಿಶಾಲವಾದ ಮಾನವೀಯ ಮೌಲ್ಯಗಳ
ಚಿಂತನೆಗಳನ್ನು ಹೊಂದಿರಬೇಕು. ಯಾವುದೇ ಒ೦ದು ಸಿದ್ದಾಂತಕ್ಕೆ ಅಂಟಿಕೊ೦ಂಡವರನ್ನು ಅಥವಾ ಪೂರ್ವಾಗ್ರಹ
ಪೀಡಿತರಾಗಿ ಚಿಂತಿಸುವವರನ್ನು ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿಷಯ ಮಂಡನೆಗೆ ಅವಕಾಶ
ನೀಡಿದರೆ, ಅಂತಹ ಬೋಧನೆಗಳು ಅಥವಾ ಚರ್ಚೆಗಳು ಶಿಬಿರದ ಒಟ್ಟಾರೆ ಮೌಲ್ಯಗಳನ್ನು ಕಳಂಕಗೊಳಿಸುತ್ತದೆ. ಕಳೆದ
ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಮತ್ತು ಕುವೆ೦ಪುರವರ
ಸರ್ವಧರ್ಮಗಳ ಶಾಂತಿಯ ತೋಟದ ಕಲ್ಪನೆಗೆ ಭಂಗ ತರಲು ಪ್ರಯತ್ನಿಸಿದವರ ಹಿನ್ನೆಲೆಯನ್ನು, ತಂತ್ರಗಾರಿಕೆಯ
ಪ್ರಯತ್ನವನ್ನು ತಾವು ಸೂಕ್ಷ್ಮವಾಗಿ ಗಮನಿಸಿರುತ್ತೀರಿ. ಅನೇಕ ಸ೦ದರ್ಭಗಳಲ್ಲಿ ಇಂತಹ ಶಕ್ತಿಗಳ ಕುತಂತ್ರಗಳನ್ನು
ನೀವೂ ಸೇರಿದಂತೆ ನಾವೆಲ್ಲರೂ ಅಸಹಾಯಕರಾಗಿ ಎದುರಿಸಿದ ಪ್ರಸಂಗಗಳಿದೆ. ಇದರ ಹಿನ್ನೆಲೆಯಲ್ಲಿ ಸ೦ವಿಧಾನದ
ಮೌಲ್ಯಗಳನ್ನು ಸಂರಕ್ಷಿಸುವ ಕೆಲಸವನ್ನು ನಾವೆಲ್ಲರೂ ತರಭೇತಿ ಶಿಬಿರಗಳಲ್ಲಿ ನಿರೀಕ್ಷಿಸುತ್ತೇವೆ.

ಹಿರಿಯ ಸಂಸದೀಯಪಟುಗಳ ಅನುಭವದ ಹಂಚಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ
ವಿಷಯಗಳಿಗೆ ಮತ್ತು ಈ ದೇಶದ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗೂ ಅದಕ್ಕೆ ಅನುಗುಣವಾಗಿ
ಶಾಸಕರು ಕರ್ತವ್ಯ ನಿರ್ವಹಣೆ ಮಾಡುವ ಹಿನ್ನೆಲೆಯಲ್ಲಿ ತರಬೇತಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ
ಮಾಡಿಕೊಳ್ಳಿಬೇಕಾಗುತ್ತದೆ. ತಾವು ಉದ್ದೇಶಿತ ತರಬೇತಿ ಶಿಬಿರಕ್ಕೆ ಆಯ್ಕೆ ಮಾಡಿರುವ ಸಂಪನ್ಮೂಲ ವ್ಯಕ್ತಿಗಳ ಕುರಿತು
ಅನೇಕ ಬಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ದಯಮಾಡಿ ಇದನ್ನು ಮರುಪರಿಶೀಲಿಸಲು ಕೋರುತ್ತೇನೆ. ಕೆಲವು
ನಿವೃತ್ತ ಅಧಿಕಾರಿಗಳು ತಮಗೆ ತಪ್ಪು ಮಾಹಿತಿ ನೀಡಿರುವ ಸಾದ್ಯತೆ ಇದ್ದು, ದಯಮಾಡಿ ಸಂಸದೀಯ ವ್ಯವಸ್ಥೆಯ
ಮೌಲ್ಯಗಳ ರಕ್ಷಣೆಯ ದೃಷ್ಟಿಯಿಂದ ಶಿಬಿರದ ಸ೦ಪನ್ಮೂಲ ವ್ಯಕ್ತಿಗಳ ಕುರಿತು ಮರು ಪರಿಶೀಲಿಸಿ ಎಂದು ರಮೇಶ್‌ ಬಾಬು ಕೋರಿದ್ದಾರೆ.

ಇದನ್ನೂ ಓದಿ: Ullal News: ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಯು.ಟಿ. ಖಾದರ್

Exit mobile version