ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಭಿಕ್ಷುಕರು ಇದ್ದಹಾಗೆ, ಭಿಕ್ಷುಕರಿಗೆ ಯಾವುದೇ ಆಯ್ಕೆಗಳಿಲ್ಲ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತರಿಗೆ ಮೀಸಲಾತಿ (Reservation) ಹಂಚಿಕೆ ಮಾಡಿರುವುದನ್ನು ಒಪ್ಪಿಸಲು ಸ್ವಾಮೀಜಿಗಳಿಗೆ ಬಿಜೆಪಿ ಒತ್ತಡ ಹಾಕಿದೆ ಎಂಬ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಾತಿಗೆ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಡಿಕೆಶಿ, ಸಿದ್ದರಾಮಯ್ಯನವರಿಗೆ ಸ್ವಲ್ಪ ಜ್ಞಾನ ಕಡಿಮೆ ಅನ್ನಿಸುತ್ತೆ. ಸ್ವಾಮೀಜಿಗಳಿಗೆ ಒತ್ತಡ ಹಾಕಲು ಸಾಧ್ಯನಾ..? ನಿಜಕ್ಕೂ ಇದು ಅವಮಾನ ಮಾಡಿದ ಹಾಗೆ. ಸ್ವಾಮೀಜಿಗಳಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ್ರೆ ಮೀಸಲಾತಿ ರದ್ದು ಮಾಡುವ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ತಾಕತ್, ದಮ್ ಇದ್ರೆ ತೆಗೆಯಲಿ ನೋಡೊಣ. ಈ ನಿರ್ಧಾರಕ್ಕೆ ಎಲ್ಲ ಸ್ವಾಮೀಜಿಗಳೂ ಒಪ್ಪಿದ್ದಾರೆ. ಕಾಂಗ್ರೆಸ್‌ನವರಿಗೆ ಮುಸ್ಲಿಂ ಬಗ್ಗೆ ಅತೀ ಪ್ರೀತಿ ಇದೆ. ಸಂವಿಧಾನ ತಿದ್ದುಪಡಿ ಮಾಡುವವರು ಇವರು.
ಯಾರದ್ದೋ ಕಿತ್ತು ಯಾರಿಗೋ ಕೊಟ್ರು ಅಂತ ಕೇಳೋದಿಕ್ಕೆ ನೀವ್ಯಾರು? ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ..? ನಮ್ಮ ಸರ್ಕಾರ ಮಾಡ್ತು ಅಂತ ಅವರಿಗೆ ಸಹಿಸೋದಕ್ಕೆ ಆಗ್ತಿಲ್ಲ. ಅವರಿಗೆ ಥಕ ಥಕ ಥಕ ಅಂತ ಕುಣೀತಾ ಇರೋದು ಕಾಂಗ್ರೆಸ್ ಅವರು ಮಾತ್ರ. ಹಸಿ ಮೆಣಸಿನಕಾಯಿ ಹೊಟ್ಟೆಯಲ್ಲಿ ಹಾಕಿದಂಗೆ ಆಗಿದೆ.
ಕಾಡಿ ಬೇಡೋದು ಸಿದ್ದರಾಮಯ್ಯ ಡಿಕೆ ಮಾತ್ರ. ಕಾಂಗ್ರೆಸ್ ನವರು ಈ ರಾಜ್ಯದಲ್ಲಿ ಭಿಕ್ಷುಕರು ಇದ್ದ ಹಾಗೆ. ಎಲ್ಲೂ ಕಾಂಗ್ರೆಸ್ ಇಲ್ಲ, ಭಿಕ್ಷುಕರು ಇದ್ದಂಗ ಅಷ್ಟೆ ಅವರು. ಭಿಕ್ಷುಕರಿಗೆ ಆಯ್ಕೆಗಳಿಲ್ಲ (Beggars have no choice) ಎಂದರು.
ಇದನ್ನೂ ಓದಿ: Tipu Sultan: ಉರಿಗೌಡ-ನಂಜೇಗೌಡ ಕಾಲ್ಪನಿಕ ಅಲ್ಲ; ಸ್ವಾಮೀಜಿ ಹೇಳಿದ್ದು ಸಿನಿಮಾಗೆ ಸೀಮಿತ ಎಂದ ಸಚಿವ ಆರ್. ಅಶೋಕ್