Site icon Vistara News

Congress Party: ಕಾಂಗ್ರೆಸ್ ಚುನಾವಣಾ ಸಮಿತಿ ಪುನರ್‌ ರಚನೆ, ಕರ್ನಾಟಕದ ಸಚಿವ ಕೆ ಜೆ ಜಾರ್ಜ್‌ಗೂ ಸ್ಥಾನ

Mallikarjun Kharge

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಭರ್ಜರಿ ಸಿದ್ಧತೆಯನ್ನು ನಡೆಸುತ್ತಿರುವ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷವು (Congress Party) ತನ್ನ ಚುನಾವಣಾ ಸಮಿತಿಯನ್ನು (Election Committee) ಪುನರ್‌ರಚನೆ ಮಾಡಿದೆ. ಕರ್ನಾಟಕದ ಇಂಧನ ಸಚಿವ ಕೆ ಜೆ ಜಾರ್ಜ್ (Minister K J George) ಅವರು ಈ ಹೊಸ ಚುನಾವಣೆ ಸಮಿತಿಯಲ್ಲಿ ಜಾಗ ಪಡೆದಿದ್ದಾರೆ. ಕರ್ನಾಟಕದವರೇ ಆದ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress Party President Mallikarjun Kharge) ಸೇರಿ ಒಟ್ಟು 16 ಜನರನ್ನು ಸಮಿತಿಗೆ ಸೇರಿಸಲಾಗಿದೆ.

ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧಿರ್ ರಂಜನ್ ಚೌಧರಿ ಸೇರಿದಂತೆ ಒಟ್ಟು 16 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಮುಂಬರುವ ಲೋಕಸಭಾ ಹಾಗೂ ವರ್ಷದ ಅಂತ್ಯದಲ್ಲಿ ಎದುರಾಗಲಿರೋ ಪಂಚ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಈ ಸಭೆಯನ್ನು ಪುನರ್‌ ರಚಿಸಲಾಗಿದೆ. ರಾಜ್ಯ ವಿಧಾನಸಭೆ ಚುನಾವಣೆಗಳು ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಈ ಸಮಿತಿಯು ಪ್ರಮುಖ ಪಾತ್ರ ನಿರ್ವಹಿಸಲಿದೆ.

ಈ ಸುದ್ದಿಯನ್ನೂ ಓದಿ: Congress Working Committee : ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ ರೆಬೆಲ್​ಗಳಿಗೆ ಮಣೆ; ಹರಿಪ್ರಸಾದ್​, ಪೈಲೆಟ್​ಗೆ ಸ್ಥಾನ

ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

1.ಮಲ್ಲಿಕಾರ್ಜುನ ಖರ್ಗೆ
2.ಸೋನಿಯಾ ಗಾಂಧಿ
3.ರಾಹುಲ್ ಗಾಂಧಿ
4.ಅಂಬಿಕಾ ಸೋನಿ
5.ಅಧೀರ್ ರಂಜನ್ ಚೌಧರಿ
6.ಸಲ್ಮಾನ್ ಖುರ್ಷಿದ್
7.ಮಧುಸೂದನ್ ಮಿಸ್ತ್ರಿ
8.ಎನ್ ಉತ್ತಮ ಕುಮಾರ್ ರೆಡ್ಡಿ
9.ಟಿ ಎಸ್ ಸಿಂಗ್ ದೇವ್
10.ಕೆ ಜೆ ಜಾರ್ಜ್
11.ಪ್ರೀತಮ್ ಸಿಂಗ್
12.ಮೊಹಮ್ಮದ್ ಜಾವೇದ್
13.ಆಮೀ ಯಾಜ್ಞಿನಿಕ್
14.ಪಿ.ಎಲ್ ಪುನಿಯಾ
15.ಓಂಕಾರ ಮಾರ್ಕಮ್
16.ಕೆ.ಸಿ.ವೇಣುಗೋಪಾಲ್

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version