Site icon Vistara News

Congress Politics : ಭವ್ಯಾ ನರಸಿಂಹ ಮೂರ್ತಿ, ಲಾವಣ್ಯ ಬಳ್ಳಾಲ್‌ಗೆ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನ

Bhavya Narasimha Murthy Lavanya Ballal Jain

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಮಿಂಚುತ್ತಿರುವ ಇಬ್ಬರು ಮಹಿಳಾ ನಾಯಕರಿಗೆ ಅಖಿಲ ಭಾರತೀಯ ಕಾಂಗ್ರೆಸ್‌ ಸಮಿತಿ (AICC) ತನ್ನ ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ಅವಕಾಶ ನೀಡಿದೆ. ಭವ್ಯಾ ನರಸಿಂಹ ಮೂರ್ತಿ (Bhavya Narasimha Murthy) ಅವರಿಗೆ ತಮಿಳುನಾಡು ಮತ್ತು ಪುದುಚೇರಿಯ ಪ್ರದೇಶ ಕಾಂಗ್ರೆಸ್‌ನ ಸಂವಹನ ವಿಭಾಗದ ಸಾರಥ್ಯವನ್ನು ನೀಡಲಾಗಿದ್ದರೆ, ಮತ್ತೊಬ್ಬ ನಾಯಕಿ ಲಾವಣ್ಯ ಬಲ್ಲಾಳ್‌ (Lavanya Ballal) ಅವರನ್ನು ಕೇರಳದ ಮಾಧ್ಯಮ ಸಮನ್ವಯಕಾರರನ್ನಾಗಿ (Congress Politics) ನೇಮಿಸಲಾಗಿದೆ.

2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (Congress Working Committee-CWC)ಯ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಪವನ್‌ ಖೇರಾ ಅವರು ಈ ನೇಮಕಾತಿಗಳನ್ನು ಪ್ರಕಟಿಸಿದ್ದಾರೆ.

ಎಐಸಿಸಿ ಸಂವಹನ ಸಮನ್ವಯಕಾರರ ಹುದ್ದೆಗೆ 24 ಮಂದಿಯನ್ನು ನೇಮಕ ಮಾಡಲಾಗಿದ್ದು, ಅದರಲ್ಲಿ ಕರ್ವಾಟಕದ ಲಾವಣ್ಯ ಬಳ್ಳಾಲ್‌ ಜೈನ್‌ ಅವರೂ ಒಬ್ಬರು. ಲಾವಣ್ಯ ಬಳ್ಳಾಲ್‌ ಜೈನ್‌ ಅವರು ಕಾಂಗ್ರೆಸ್‌ ವಕ್ತಾರರಾಗಿ ಮತ್ತು ಮುಂಚೂಣಿ ಮಹಿಳಾ ಯುವ ನಾಯಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿರೂಪಣೆ ಮಾಡುತ್ತಿದ್ದಾಗ ಸಿದ್ದರಾಮಯ್ಯ ಅವರು ಯಾರಿದು ನಿರೂಪಣೆ ಮಾಡುತ್ತಿರುವುದು ಬಗ್ಗಿ ನೋಡಿದ್ದು ಭಾರಿ ಸುದ್ದಿಯಾಗಿತ್ತು. ಲಾವಣ್ಯ ಬಳ್ಳಾಲ್‌ ಅವರು ಕಾಂಗ್ರೆಸ್‌ನ ನೀತಿ ನಿಲುವುಗಳನ್ನು ಪ್ರಖರವಾಗಿ ಸಮರ್ಥಿಸುವ ಛಾತಿಯನ್ನು ಹೊಂದಿದ್ದಾರೆ.

ಹೋರಾಟದಿಂದಲೇ ಬೆಳಕಿಗೆ ಬಂದ ಭವ್ಯಾ ನರಸಿಂಹ ಮೂರ್ತಿ

ಭವ್ಯಾ ನರಸಿಂಹ ಮೂರ್ತಿ ಅವರು ಕೂಡಾ ಕಾಂಗ್ರೆಸ್‌ ಪಕ್ಷದ ಪ್ರಬಲ ವಕ್ತಾರರು. ಸಿಎಎ ಚಳುವಳಿಯ ಸಂದರ್ಭದಲ್ಲಿ ಚಿಂತಕ ರಾಮಚಂದ್ರ ಗುಹಾ ಅವರನ್ನು ಎಳೆದಾಡಿದ ಪ್ರಕರಣವನ್ನು ನೋಡಿದ ಬಳಿಕ ಸಾಮಾಜಿಕ ಹೋರಾಟದ ಕಣಕ್ಕೆ ಇಳಿದ ಭವ್ಯಾ ಅವರು ಬಳಿಕ ಕಾಂಗ್ರೆಸ್‌ ಪಕ್ಷವನ್ನು ಅಧಿಕೃತವಾಗಿ ಸೇರಿದರು. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ ನಿವಾಸಿಯಾಗಿರುವ ಭವ್ಯಾ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿ ಬಳಿಕ ಅಮೆರಿಕಕ್ಕೆ ತೆರಳಿ ಕೊಲಂಬಿಯಾ ವಿವಿಯಲ್ಲಿ ಮಾಸ್ಟರ್ಸ್‌ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಕಲಿತಿದ್ದಾರೆ. ಅಲ್ಲಿಂದ ಭಾರತಕ್ಕೆ ಮರಳಿ ಸಾಮಾಜಿಕ ಹೋರಾಟ ಆರಂಭಿಸಿದ್ದರು.

ಇದೀಗ ಅವರನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಪಾಂಡಿಚೇರಿಯ ಕಾಂಗ್ರೆಸ್‌ ಸಂವಹನ ಸಂಯೋಜಕಿಯಾಗಿ ನೇಮಿಸಲಾಗಿದೆ.

ಇದನ್ನೂ ಓದಿ : Congress Manifesto : ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ರಚನೆ; ಸಿದ್ದರಾಮಯ್ಯ ಸಹಿತ 16 ಮಂದಿಗೆ ಹೊಣೆ

Exit mobile version