Site icon Vistara News

Congress Politics : ವಿನಯ ಗುರೂಜಿ ಆಶ್ರಮದಲ್ಲಿ ಡಿಕೆಶಿ ಸಿಎಂ ಕೂಗು, ಸಿದ್ದರಾಮಯ್ಯ ಆಪ್ತರಿಂದಲೂ ಕಹಳೆ

Siddaramaiah vinay guruji DKShivakumar

#image_title

ಚಿಕ್ಕಮಗಳೂರು/ಮೈಸೂರು: ರಾಜ್ಯದಲ್ಲಿ ಚುನಾವಣೆ ನಡೆದು ಕಾಂಗ್ರೆಸ್‌ ಪಕ್ಷದಲ್ಲಿ‌ (Congress politics) ಬಹುಹಂತಗಳಲ್ಲಿ ಮಾತುಕತೆ ನಡೆದು ಸಿದ್ದರಾಮಯ್ಯ (Siddaramaiah) ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಈ ನಡುವೆ, ಅವರಿಬ್ಬರಿಗೆ 30-30 ಅಧಿಕಾರ ಹಂಚಿಕೆ ಸೂತ್ರವೇನಾದರೂ ಮಾಡಲಾಗಿದೆಯಾ ಎನ್ನುವ ಬಗ್ಗೆ ಇನ್ನೂ ಯಾರೂ ಬಾಯಿಬಿಡುತ್ತಿಲ್ಲ. ಹೀಗಾಗಿ ಗೊಂದಲ ಮುಂದುವರಿದಿದ್ದು, ಆಗಾಗ ಈ ಇಬ್ಬರು ನಾಯಕರ ಆಪ್ತರ ನಡುವೆ ಮಾತಿನ ಕದನಕ್ಕೆ ಕಾರಣವಾಗುತ್ತಿದೆ.

ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರ ಅಭಿಮಾನಿ ನಾಯಕರು ಹೇಳಿದರೆ, ಇಲ್ಲ ಡಿ.ಕೆ. ಶಿವಕುಮಾರ್‌ ಅವರು ಎರಡನೇ ಹಂತದಲ್ಲಿ ಸಿಎಂ ಆಗಲಿದ್ದಾರೆ ಎನ್ನುವುದು ಡಿ.ಕೆ. ಆಪ್ತರ ಮಾತು.

ವಿನಯ್ ಗುರೂಜಿ‌ ಆಶ್ರಮದಲ್ಲಿ ಮೊಳಗಿದ ಡಿಕೆಶಿ ಸಿಎಂ ಕಹಳೆ

ಶನಿವಾರ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮದಲ್ಲಿ ಮಳೆಗಾಗಿ ಯಾಗವೊಂದನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಚಿಕ್ಕಮಗಳೂರು ಶಾಸಕ ತಮ್ಮಯ್ಯ ಆಗಮಿಸಿದ್ದರು. ಜತೆಗೆ ಜೆಡಿಎಸ್ ಎಂ.ಎಲ್.ಸಿ. ಶರವಣ ಕೂಡಾ ಇದ್ದರು.

ಈ ವೇಳೆ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗುವಂತೆ ಆಶೀರ್ವದಿಸಿ ಎಂದು ವಿನಯ ಗುರೂಜಿ ಅವರ ಬಳಿ ಮನವಿ ಮಾಡಿಕೊಂಡರು ಶಾಸಕ ತಮ್ಮಯ್ಯ.

ʻʻಡಿಕೆಶಿ ನಮಗೆಲ್ಲಾ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಸರ್ಕಾರ ರಚನೆಯ ಹಿಂದಿನ ಶಕ್ತಿಯೇ ಡಿ.ಕೆ.ಶಿವಕುಮಾರ್. ನಾವು ಬೇರೇನೂ ಕೇಳಲ್ಲ, ಡಿಕೆಶಿ ಸಿಎಂ ಆಗಲೆಂದು ಆಶೀರ್ವದಿಸಿʼʼ ಎಂದು ಮನವಿ ಮಾಡಿದರು.

ಶರವಣ ಹೇಳಿದ ಉಂಗುರ ಭವಿಷ್ಯ ನಿಜವಾಗುತ್ತಾ?

ಈ ನಡುವೆ ಮಠದಲ್ಲಿ ಇದ್ದ ಜೆಡಿಎಸ್ ಎಂ.ಎಲ್.ಸಿ. ಶರವಣ ಅವರು ವಿಶೇಷವೊಂದನ್ನು ಹೇಳುವ ಮೂಲಕ ಡಿ.ಕೆ. ಶಿವಕುಮಾರ್‌ ಮಂತ್ರ ಜಪಿಸಿದರು.

ʻʻಗುರುಗಳು ಮೂರು ಉಂಗುರ ರೆಡಿ ಮಾಡಿ ಇಟ್ಟಿದ್ದರು. ಅದರಲ್ಲಿ ಒಂದನ್ನು 2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದರು. ಮತ್ತೊಂದನ್ನು ಬಿ.ಎಸ್.ವೈಗೆ ಕೊಟ್ರು. ಮೂರನೇಯದ್ದನ್ನು ಡಿ.ಕೆ. ಶಿವಕುಮಾರ್‌ ಅವರಿಗೆ ಕೊಟ್ಟಿದ್ದಾರೆ, ಅದಕ್ಕೆ ನಾನೇ ಸಾಕ್ಷಿ. ನಿಮ್ಮ ಸರ್ಕಾರ ಬರುತ್ತೆ ಅಂತ ಡಿಕೆಶಿಗೆ ಉಂಗುರ ಕೊಟ್ರು. ನಾನು ನಮ್ಮ ಸರ್ಕಾರ ಬರಲ್ವ ಅಂತ ಕೇಳಿದೆ. ಇಲ್ಲ…ಇಲ್ಲ… ಡಿಕೆಶಿ ಸರ್ಕಾರ ಎಂದಿದ್ರುʼʼ ಎಂದು ಶರವಣ ಹೇಳಿದರು.

ಶರವಣ ಮತ್ತು ತಮ್ಮಯ್ಯ ಮನವಿಯನ್ನ ಪುರಸ್ಕರಿಸಿದ ವಿನಯ್ ಗುರೂಜಿ ಅವರು, ಕಳೆದ ವರ್ಷ ಆಶೀರ್ವಾದ ಮಾಡಿದಾಗ ಮುಂದಿನ ವರ್ಷದ ಪ್ರಮಾಣ ವಚನದಲ್ಲಿ ಇರಬೇಕು ಎಂದಿದ್ದೆ, ಹಾಗೇ ಆಯ್ತು. ಶಾಸಕ ತಮ್ಮಯ್ಯ ಹೇಳಿದ್ದು ನಿಜವಾಗಲು ಹೆಚ್ಚು ಸಮಯ ಬೇಕಾಗಿಲ್ಲʼʼ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರದ್ದು ಒಳಗೊಂದು-ಹೊರಗೊಂದು ಇಲ್ಲದ ವ್ಯಕ್ತಿತ್ವ. ಅವರದ್ದು ಮಗುವಿನ ಮನಸ್ಸು ಎಂದು ಹಾಡಿ ಹೊಗಳಿದರು ವಿನಯ್ ಗುರೂಜಿ.

ಸಿದ್ದರಾಮಯ್ಯ ಅವರೇ ಸಿಎಂ ಎಂದ ಮಹದೇವಪ್ಪ

ಇತ್ತ ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು, ʻʻಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆʼʼ ಎಂದು ಮೂರು ಮೂರು ಬಾರಿ ಪುನರುಚ್ಛಾರ ಮಾಡಿದರು.

ಅಧಿಕಾರ ಹಸ್ತಾಂತರದ ಬಗ್ಗೆ ತುಟಿ ಬಿಚ್ಚದ ಡಾ.ಎಚ್​ಸಿ ಮಹದೇವಪ್ಪ, ಪತ್ರಕರ್ತರ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿದರು.
ಈ ಹಿಂದೆ ಮೈಸೂರಿನಲ್ಲೇ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದರು ಸಚಿವ ಎಂ.ಬಿ.ಪಾಟೀಲ್. ಇದೀಗ ಮತ್ತೊಬ್ಬ ಆಪ್ತ ಅದೇ ಮಾತನ್ನು ಆಡಿದ್ದಾರೆ.

ಇದನ್ನೂ ಓದಿ : Karnataka Politics: ಮುಂದಿನ ಟಾರ್ಗೆಟ್‌ ಯಾರು?; ಬಿ.ಎಲ್‌ ಸಂತೋಷ್‌ಗೆ ಎಂ.ಬಿ ಪಾಟೀಲ್‌ ನೇರ ಪ್ರಶ್ನೆ!

Exit mobile version