Site icon Vistara News

Congress ticket : ಆರು ಹಾಲಿ ಕಾಂಗ್ರೆಸ್‌ ಶಾಸಕರ ಟಿಕೆಟ್‌ ಹೋಲ್ಡ್‌, ಮೂರು ಕಡೆ ಪಕ್ಷ ಬಿಟ್ಟು ಹೋದವರಿಗಾಗಿ ವೇಟಿಂಗ್‌!

Gopalaiah, ST Somashekhar Bairati basavaraj

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ 124 ಕ್ಷೇತ್ರಗಳ ಟಿಕೆಟ್‌ (Congress ticket) ಫೈನಲ್‌ ಮಾಡಿರುವ ಕಾಂಗ್ರೆಸ್‌ ಆರು ಜನ ಹಾಲಿ ಶಾಸಕರಿಗೆ ಸದ್ಯ ಟಿಕೆಟ್‌ ನೀಡಿಲ್ಲ. ನಿಜವೆಂದರೆ ಯಾವುದೇ ರಾಜಕೀಯ ಪಕ್ಷಕ್ಕೆ ಹಾಲಿ ಶಾಸಕರ ಟಿಕೆಟ್‌ ಫೈನಲ್‌ ಮಾಡುವುದು ಸುಲಭ ಪ್ರಕ್ರಿಯೆ. ಆದರೆ, ಕಾಂಗ್ರೆಸ್‌ ತನ್ನ 66 ಶಾಸಕರ ಪೈಕಿ ಆರು ಮಂದಿಗೆ ಟಿಕೆಟ್‌ ನೀಡಿಲ್ಲ. ಎರಡನೇ ಪಟ್ಟಿಯಲ್ಲಿ ಇವರ ಹೆಸರು ಕಾಣಿಸಬಹುದಾದರೂ ಈಗ ಯಾಕೆ ಕೊಟ್ಟಿಲ್ಲ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಜತೆಗೆ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಿಟ್ಟು ಹೋಗಿ ಈಗ ಬಿಜೆಪಿಯಲ್ಲಿ ಮಂತ್ರಿಗಳಾಗಿರುವವರಿಗಾಗಿ ಕಾಯುತ್ತಿದೆ!

ಬೆಂಗಳೂರಿನ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಶಿಡ್ಲಘಟ್ಟದ ವಿ ಮುನಿಯಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಲಿಂಗಸುಗೂರು ಕ್ಷೇತ್ರದ ಶಾಸಕರಾದ ಡಿ.ಎಸ್‌. ಹುಲಗೇರಿ ಅವರಿಗೆ ಟಿಕೆಟ್‌ ಘೋಷಣೆಯಾಗಿಲ್ಲ.

ರಾಣೆಬೆನ್ನೂರು ಕ್ಷೇತ್ರದಿಂದ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರು ತಮ್ಮ ಪುತ್ರ ಪ್ರಕಾಶ್ ಕೋಳಿವಾಡ್‌ಗೆ ಟಿಕೆಟ್‌ ಕೊಡಿಸಿದ್ದಾರೆ. ಹಾಗಾಗಿ ಅವರಿಗೆ ಟಿಕೆಟಿಲ್ಲ. ಪಾವಗಡದಿಂದ ಎಚ್.ವಿ ವೆಂಕಟೇಶ ಕಣಕ್ಕೆ ಇಳಿಯಲಿದ್ದಾರೆ. ನಾನು ಸ್ಪರ್ಧೆ ಮಾಡಲ್ಲ, ಪುತ್ರನಿಗೆ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿದ್ದರು ಹಾಲಿ ಶಾಸಕ ವೆಂಕಟರಮಪ್ಪ. ಕಾಂಗ್ರೆಸ್‌ ಹೈಕಮಾಂಡ್‌ ಇದಕ್ಕೆ ಒಪ್ಪಿದೆ.

ಮೂವರಿಗಾಗಿ ಕಾಯುತ್ತಿದೆ ಕಾಂಗ್ರೆಸ್‌

ಕಾಂಗ್ರೆಸ್‌ ಬೆಂಗಳೂರಿನ ಮೂವರು ಪ್ರಮುಖ ಕ್ಷೇತ್ರಗಳ ಟಿಕೆಟ್‌ ಫೈನಲ್‌ ಮಾಡಿಲ್ಲ. ಯಶವಂತಪುರ,ಕೆ.ಆರ್ ಪುರಂ, ಮಹಾಲಕ್ಷ್ಮಿ ಲೇಔಟ್ ಟಿಕೆಟ್ ಫೈನಲ್ ಮಾಡಲು ವಿಳಂಬ ಮಾಡಿದೆ. ಇದಕ್ಕೆ ಕಾರಣ ಈ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿ ಇರುವವರು ಮೊದಲು ಕಾಂಗ್ರೆಸ್‌ನಲ್ಲಿದ್ದು ಬಿಜೆಪಿಗೆ ವಲಸೆ ಹೋಗಿ ಮಂತ್ರಿಗಳಾದವರು. ಎಸ್‌ಟಿ ಸೋಮಶೇಖರ್, ಬೈರತಿ ಬಸವರಾಜ ಮತ್ತು ಗೋಪಾಲಯ್ಯ ಅವರೀಗ ಅಲ್ಲಿ ಶಾಸಕರು. ಅವರೇನಾದರೂ ಮರಳಿ ಕಾಂಗ್ರೆಸ್‌ಗೆ ಬರುವ ಮನಸು ಮಾಡಿದರೆ ಇರಲಿ ಎಂಬ ಕಾರಣಕ್ಕೆ ಅವರಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ.

ವಲಸಿಗರಿಗೆ ಐದು ಟಿಕೆಟ್‌

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರಿಗೆ ಮಣೆ ಹಾಕಲಾಗಿದೆ. ಹಿರೇಕೇರೂರು ಕ್ಷೇತ್ರದಲ್ಲಿ ಕೃಷಿ ಸಚಿವ ಮತ್ತು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಆಪರೇಷನ್‌ ಕಮಲಕ್ಕೆ ಒಳಗಾದ ಬಿ.ಸಿ. ಪಾಟೀಲ್‌ ಅವರನ್ನು ಎದುರಿಸಲು ಯುಬಿ ಬಣಕಾರ್ ಗೆ ಟಿಕೆಟ್ ನೀಡಲಾಗಿದೆ. ಯು.ಬಿ. ಬಣಕಾರ್‌ ಅವರು ಮೊದಲು ಬಿಜೆಪಿಯಲ್ಲಿದ್ದು ಬಿ.ಸಿ. ಪಾಟೀಲ್‌ ಅವರನ್ನು ಎದುರಿಸುತ್ತಿದ್ದರು. ಈಗ ಕಾಂಗ್ರೆಸ್‌ನಿಂದ ಎದುರಿಸಲಿದ್ದಾರೆ.

ಹೊಸಪೇಟೆಯಲ್ಲಿ ಗವಿಯಪ್ಪಗೆ ಟಿಕೆಟ್ ಸಿಕ್ಕಿದ್ದರೆ, ಮೇಲ್ಮನೆ ಸದಸ್ಯನಾಗಿ ನಾಲ್ಕು ವರ್ಷ ಅಧಿಕಾರಾವಧಿ ಇದ್ದರೂ ಬಿಜೆಪಿ ಮತ್ತು ಮೇಲ್ಮನೆ ಸದಸ್ಯತ್ವಗಳೆರಡಕ್ಕೂ ರಾಜೀನಾಮೆ ನೀಡಿ ಬಂದಿರುವ ಪುಟ್ಟಣ್ಣ ಅವರು ರಾಜಾಜಿನಗರದಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಸಚಿವರೂ ಆಗಿದ್ದ ಮುಳಬಾಗಿಲು ಎಚ್‌. ನಾಗೇಶ್‌ ಅವರು ಕಾಂಗ್ರೆಸ್‌ ಸೇರಿ ಮಹದೇವಪುರ ಟಿಕೆಟ್‌ ಪಡೆದಿದ್ದಾರೆ. ಇಲ್ಲಿ ಅವರು ಅರವಿಂದ ಲಿಂಬಾವಳಿ ಅವರನ್ನು ಎದುರಿಸಬೇಕಾಗಿದೆ. ಇತ್ತ ಚಿಕ್ಕನಾಯಕನಹಳ್ಳಿಯಲ್ಲಿ ಕಿರಣ್ ಕುಮಾರ್ ಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ : Congress ticket : ಐವರು ವಲಸಿಗರಿಗೆ ಸಿಕ್ತು ಟಿಕೆಟ್‌, ಅಪ್ಪ-ಮಕ್ಕಳಿಗೂ ದೊರೆತಿದೆ ಬಂಪರ್‌, ಯತೀಂದ್ರಗೆ ಲಾಸ್‌!

Exit mobile version