ಬೆಂಗಳೂರು: ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಹಾಗೂ ಅದರ ಹೊರಗೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ಭರದ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದ ವಿರುದ್ಧ ಕಾಂಗ್ರೆಸ್‌ನಿಂದ ಮತ್ತೊಂದು ಅಭಿಯಾನ ನಡೆಯಲಿದ್ದು, ಇಂದು ಅಭಿಯಾನಕ್ಕೆ ಚಾಲನೆ ನೀಡಲಿದೆ.
ʼ40% ಸರ್ಕಾರ, ಬಿಜೆಪಿ ಅಂದ್ರೆ ಭ್ರಷ್ಟಾಚಾರʼ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಚಾಲನೆ ನೀಡಲಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಹಾಡು ರಿಲೀಸ್ ಮಾಡಲಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಸರ್ಕಾರದ ವಿರುದ್ಧ ಕ್ಯಾಂಪೇನ್ ಚುರುಕುಗೊಳಿಸಲಿದೆ/
ಸದನದಲ್ಲಿ ಕೈ ಕಲಿಗಳ ಕದನ
ಸದನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲು ಭಾರಿ ಪ್ಲ್ಯಾನ್ ಮಾಡಿಕೊಂಡಿರುವ ಕಾಂಗ್ರೆಸ್, ನಾಲ್ಕು ಅಸ್ತ್ರಗಳನ್ನು ಬಿಜೆಪಿ ವಿರುದ್ಧ ಹೂಡಲಿದೆ. ಇಂದು, ನಾಳೆ, ನಾಡಿದ್ದು ಪ್ರವಾಹ ಪರಿಸ್ಥಿತಿ ಮೇಲೆ ಚರ್ಚೆ ಮಾಡಲು ನಿಲುವಳಿ ಸೂಚನೆ ಮಂಡಿಸಲಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ವಿಫಲವಾದ ಬಿಜೆಪಿ ವಿರುದ್ಧ ಮೂರು ದಿನ ಟೀಕಾಪ್ರಹಾರ ನಡೆಯಲಿದೆ.
ಪ್ರವಾಹದ ಬಳಿಕ ಭ್ರಷ್ಟಾಚಾರ, 40% ಕಮಿಷನ್ ವಿಚಾರದ ಅಸ್ತ್ರ ಪ್ರಯೋಗ ಮಾಡಲಿದೆ. ಮೂರನೇ ಆಯುಧವಾಗಿ ಬಿಜೆಪಿ ವಿರುದ್ಧ ಕಾನೂನು ಸುವ್ಯವಸ್ಥೆ ಲೋಪಗಳ ಬಗ್ಗೆ ದಾಳಿ ಮಾಡಲಿದೆ ಕಾಂಗ್ರೆಸ್. ಈ ಸಂದರ್ಭದ್ಲಲಿ ಮಂಗಳೂರಿನ ಮೂರು ಕೊಲೆ ಪ್ರಕರಣಗಳ ಬಗ್ಗೆ ಉಲ್ಲೇಖಿಸಲಿದೆ. ಪಿಎಸ್ಐ ನೇಮಕಾತಿ ಅಕ್ರಮ ವಿಚಾರವನ್ನೂ ಕೂಡ ಕೈಗೆತ್ತಿಕೊಳ್ಳಲಿದೆ.
ಇಂದು ಕಾಂಗ್ರೆಸ್ ಶಾಸಕಾಂಗ ಸಭೆ
ಇಂದು ಸಂಜೆ ಆರೂವರೆಗೆ ಖಾಸಗಿ ಹೋಟೆಲ್‌ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ ನಡೆಯಲಿದ್ದು, ಕಾಂಗ್ರೆಸ್ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ. ಸದನದಲ್ಲಿ ಯಾವ ವಿಚಾರಗಳನ್ನು ಯಾರು ಪ್ರಸ್ತಾಪ ಮಾಡಬೇಕು ಎಂಬ ಬಗ್ಗೆ ನಿರ್ಣಯವಾಗಲಿದೆ.
ಇದನ್ನೂ ಓದಿ : ಅಧಿವೇಶನ | ಶಾಸಕರು, ಗಣ್ಯರ ನಿಧನಕ್ಕೆ ಕಂಬನಿ ಮಿಡಿದ ವಿಧಾನ ಮಂಡಲ, ಅಧಿವೇಶನ ನಾಳೆಗೆ ಮುಂದೂಡಿಕೆ