Site icon Vistara News

Kolar Gold Field Election Results: ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನ ರೂಪಕಲಾಗೆ ಭರ್ಜರಿ ಗೆಲುವು

Kolar Gold Field Election Results Roopakala wins

Kolar Gold Field Election Results Roopakala wins

ಕೋಲಾರ: ವಿಧಾನಸಭಾ ಚುನಾವಣೆ (Kolar Gold Field Election Results) ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಕೆಜಿಎಫ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ.ರೂಪಕಲಾ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇವರು 50,467 ಅಂತರದಿಂದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ವಿರುದ್ಧ ಗೆಲುವು ಜಯಭೇರಿ ಮೊಳಗಿಸಿದ್ದಾರೆ.

ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂ. ರೂಪಕಲಾ 81,569 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ 31,102 ಮತಗಳು, ಜೆಡಿಎಸ್‌ ಅಭ್ಯರ್ಥಿ ಡಾ. ವಿ.ಎಂ. ರಮೇಶ್ ಬಾಬು 1360, ಆರ್.ಪಿ.ಐ ಅಭ್ಯರ್ಥಿ ಎಸ್‌. ರಾಜೇಂದ್ರನ್ 29,795 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ | Malur Election Results: ಮಾಲೂರಿನಲ್ಲಿ ಕೆ.ವೈ. ನಂಜೇಗೌಡಗೆ ಅಲ್ಪ ಮತಗಳ ಅಂತರದ ಗೆಲುವು

ಕೆಜಿಎಫ್‌ ಮೀಸಲು ಕ್ಷೇತ್ರದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೂಪಕಲಾ ಶಶಿಧರ್ 71,151 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ವಿರುದ್ಧ 40,827 ಮತಗಳ ಅಂತರದಲ್ಲಿ ಜಯಶೀಲರಾಗಿದ್ದರು. ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ಅವರು 30,324 ಮತ, ಆರ್‌ಪಿಐ ಪಕ್ಷದ ಅಭ್ಯರ್ಥಿ ಎಸ್.ರಾಜೇಂದ್ರನ್ 20,393 ಮತ ಪಡೆದಿದ್ದರು.

Exit mobile version