ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯನ್ನು (Lok Sabha Election 2024) ಕಾಂಗ್ರೆಸ್ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಆದರೆ, ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆಯಿಂದ (Political Development) ಕಂಗೆಟ್ಟಿದೆ. ಪಕ್ಷದಲ್ಲಿ ಆಂತರಿಕ ಭಿನ್ನಮತ ಇರುವುದು ತೀವ್ರ ತಲೆನೋವನ್ನು ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ (Congress High Command) ನಾಯಕರು ರಾಜ್ಯ ನಾಯಕರಿಗೆ ಒಗ್ಗಟ್ಟಿನ ಪಾಠವನ್ನು ಮಾಡಿದೆ.
ಈ ಸಂಬಂಧ ಮುಂದೆ ಏನೇನು ಮಾಡಬೇಕು? ಕಾರ್ಯತಂತ್ರ, ಚುನಾವಣಾ ರಣತಂತ್ರ ಹೇಗಿರಬೇಕು? ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗೆ ಹೇಗೆ ಮನದಟ್ಟು ಮಾಡಬೇಕು? ಎಂಬಿತ್ಯಾದಿ ವಿಷಯಗಳ ಜತೆಗೆ ನಾಯಕರಲ್ಲಿ ಒಮ್ಮತ ಹಾಗೂ ಒಗ್ಗಟ್ಟು ಮೂಡಿಸಲು ಹೈಕಮಾಂಡ್ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 2ರಂದು ರಾಜ್ಯ ಕಾಂಗ್ರೆಸ್ ನಾಯಕರನ್ನು ನವ ದೆಹಲಿಗೆ ಕರೆಸಿಕೊಳ್ಳುತ್ತಿದೆ.
ಸಿಎಂ ಸಿದ್ದರಾಮಯ್ಯಗೆ ತಲೆನೋವು!
ಶಾಸಕರ ಹಾಗೂ ಸಚಿವರ ನಡುವೆ ಸಮನ್ವಯ ಮೂಡಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ಲ್ಯಾನ್ ಮಾಡಿದ್ದಾರೆ. ಹಿರಿಯ ಸಚಿವರ ಹಾಗೂ ನಾಯಕರ ಸಹಮತ ಪಡೆಯುವ ಪ್ರಯತ್ನದ ನಡುವೆಯೂ ಸಿಎಂಗೆ ಇಲ್ಲಿನ ಕೆಲ ಬೆಳವಣಿಗೆಗಳು ತಲೆ ನೋವು ತಂದಿದೆ.
ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಕೆಂಡ ಕಾರುತ್ತಿದ್ದಾರೆ. ಸಮುದಾಯವನ್ನು ಕಡೆಗಣಿಸಿದ್ದಾರೆ ಎಂಬ ಪ್ರಬಲ ಅಸ್ತ್ರವನ್ನು ಹರಿಪ್ರಸಾದ್ ಹೂಡಿದ್ದಾರೆ. ಹೀಗಾಗಿ ಎಲ್ಲ ಭಿನ್ನಮತ ಶಮನ ಮಾಡಿ ಲೋಕಸಭೆಗೆ ತಯಾರಿ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ 2ರಂದು ಎರಡು ಸಭೆಯನ್ನು ನಡೆಸಲಿದೆ. ಮೊದಲ ಸಭೆಯಲ್ಲಿ ಲೋಕಸಭೆ ದೃಷ್ಟಿಯಿಂದ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಬಿ.ಎನ್ ಚಂದ್ರಪ್ಪ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್, ಮುನಿಯಪ್ಪ, ಬಿ.ಎಲ್. ಶಂಕರ್, ವೀರಪ್ಪ ಮೊಯ್ಲಿ, ಎಂ.ಬಿ. ಪಾಟೀಲ್, ಆರ್.ವಿ. ದೇಶಪಾಂಡೆ ಸೇರಿದಂತೆ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
ಟಾರ್ಗೆಟ್ 20
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬೇಕು ಎಂದು ರಾಜ್ಯ ಕಾಂಗ್ರೆಸ್ ಗುರಿಯನ್ನು ಹಾಕಿಕೊಂಡಿದೆ. ಅದರ ಪ್ರಕಾರ 20 ಸ್ಥಾನವನ್ನು ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯತಂತ್ರ ಹೇಗಿರಬೇಕು? ಎಂಬ ಬಗ್ಗೆ ಈ ಮೊದಲ ಸಭೆಯಲ್ಲಿ ಚರ್ಚೆಯಾಗಲಿದೆ.
ಎರಡನೇ ಸಭೆಯಲ್ಲಿ ರಾಜ್ಯ ಸಚಿವರಿಗೆ ಲೋಕಸಭೆ ಟಾಸ್ಕ್
ಇನ್ನು ಎರಡನೇ ಸಭೆಯಲ್ಲಿ ರಾಜ್ಯ ಸಚಿವರಿಗೆ ಲೋಕಸಭೆ ಟಾಸ್ಕ್ ನೀಡಲಾಗುತ್ತಿದೆ. ಇದು ರಾಜ್ಯ ಸಚಿವರ ಜತೆಗೆ ನಡೆಯುವ ಮಹತ್ವದ ಸಭೆಯಾಗಿದೆ. ಸರ್ಕಾರದಲ್ಲಿ ಶಾಸಕರು ವರ್ಸಸ್ ಸಚಿವರು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಷ್ಟೇ ಶಾಸಕರು ಹಾಗೂ ಸಚಿವರ ಮುನಿಸಿನ ಕುರಿತು ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿದೆ. ಆದರೆ, ಇದಕ್ಕೊಂದು ಚೌಕಟ್ಟು ನೀಡಲು ನಿರ್ಧರಿಸಲಾಗಿದ್ದು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಇವರೊಂದಿಗೆ ಸಭೆ ನಡೆಸಲಿದ್ದಾರೆ.
ವರ್ಕ್ ರಿಪೋರ್ಟ್ ಪರಿಶೀಲನೆ
ಸಚಿವರ ಕಾರ್ಯವೈಖರಿ, ಪ್ರಗತಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ನಿಗಾ ವಹಿಸುವ ಕುರಿತು ನಿರ್ದೇಶನ ನೀಡಲಾಗುತ್ತದೆ ಎನ್ನಲಾಗಿದೆ. ಸಚಿವರ ವರ್ಕ್ ರಿಪೋರ್ಟ್ ಮೇಲೆ ಆ ಸಚಿವರು ಮುಂದುವರಿಯಬೇಕಾ? ಬೇಡವಾ? ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಕಳುಹಿಸುವ ಸಾಧ್ಯತೆಯೂ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ, ಸರ್ಕಾರದ ವರ್ಚಸ್ಸು ಹೆಚ್ಚಿಸುವ ಟಾಸ್ಕ್ ಅನ್ನು ಸಹ ನೀಡಲಾಗುತ್ತದೆ. ಜವಾಬ್ದಾರಿ ವಹಿಸಿರುವ ಇಲಾಖೆಯ ಜನಪ್ರಿಯ ಯೋಜನೆಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವುದು. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವುದು ಸಹ ಈ ಸಭೆಯ ಪ್ರಮುಖ ಭಾಗವಾಗಿದೆ.
ಸಭೆಗಾಗಿ ಯಾರಿಗೆಲ್ಲ ಆಹ್ವಾನ ಬಂದಿದೆ?
- ಸಿಎಂ ಸಿದ್ದರಾಮಯ್ಯ
- ಡಿಸಿಎಂ ಡಿ.ಕೆ ಶಿವಕುಮಾರ್
ಭಾಗವಹಿಸಲಿರುವ ಸಚಿವರ ಪಟ್ಟಿ
- ಡಾ.ಜಿ ಪರಮೇಶ್ವರ್
- ಎಂ.ಬಿ. ಪಾಟೀಲ್
- ಸತೀಶ್ ಜಾರಕಿಹೊಳಿ
- ರಾಮಲಿಂಗಾರೆಡ್ಡಿ
- ಈಶ್ವರ ಖಂಡ್ರೆ
- ಎಚ್ ಕೆ.ಪಾಟೀಲ್
- ಕೆ.ಎಚ್ ಮುನಿಯಪ್ಪ
- ದಿನೇಶ್ ಗುಂಡೂರಾವ್
- ಕೃಷ್ಣಭೈರೇಗೌಡ
- ಜಮೀರ್ ಅಹ್ಮದ್
- ಚಲುವರಾಯಸ್ವಾಮಿ
- ಎಚ್.ಸಿ ಮಹದೇವಪ್ಪ
- ಶಿವಾನಂದ ಪಾಟೀಲ್
- ಎಸ್.ಎಸ್ ಮಲ್ಲಿಕಾರ್ಜುನ
- ಮಧುಬಂಗಾರಪ್ಪ
- ಎನ್.ಎಸ್ ಬೋಸರಾಜು
- ಪ್ರಿಯಾಂಕ್ ಖರ್ಗೆ
ಇದನ್ನೂ ಓದಿ: Lok Sabha Election 2024 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ. ಸುರೇಶ್ ಆಪ್ತೆ ಕುಸುಮಾ ಕಣಕ್ಕೆ?
ಚುನಾವಣಾ ತಯಾರಿ- ಸಂಘಟನಾ ಚರ್ಚೆಗೆ ಇವರು ಭಾಗಿ
- ರಾಘವೇಂದ್ರ ಹಿಟ್ನಾಳ್
- ಈ ತುಕಾರಂ
- ಸಲೀಂ ಅಹ್ಮದ್
- ಚಂದ್ರಪ್ಪ
- ಜಗದೀಶ್ ಶೆಟ್ಟರ್
- ಲಕ್ಷ್ಮಣ ಸವದಿ
- ಬಿ.ಕೆ. ಹರಿಪ್ರಸಾದ್
- ಆರ್.ವಿ. ದೇಶಪಾಂಡೆ
- ವಿನಯ್ ಕುಲಕರ್ಣಿ
- ರಮೇಶ್ ಕುಮಾರ್
- ಬಿ.ಎಲ್. ಶಂಕರ್
- ಡಿ.ಕೆ. ಸುರೇಶ್
- ಜಿ.ಸಿ. ಚಂದ್ರಶೇಖರ್
- ಎಲ್. ಹನುಮಂತಯ್ಯ