Site icon Vistara News

Contaminated Water | ರಾಯಚೂರು, ಬಳ್ಳಾರಿ ಆಯ್ತು ಈಗ ಕಲಬುರಗಿಯಲ್ಲಿ ಕಲುಷಿತ ನೀರು ಸೇವಿಸಿ ವ್ಯಕ್ತಿ ಸಾವು!

Contaminated Water

ಕಲಬುರಗಿ: ಇಲ್ಲಿನ ಕಮಲಾಪುರ ತಾಲೂಕಿನ ಗೊಬ್ಬುರ ವಾಡಿಯಲ್ಲಿ ಕಲುಷಿತ ನೀರು (Contaminated Water) ಸೇವಿಸಿ ವ್ಯಕ್ತಿ ಮೃತಪಟ್ಟಿರುವ ಪ್ರಕರಣ ನಡೆದಿದೆ. ಸಾಯಿಬಣ್ಣ ಭಜಂತ್ರಿ (50) ಮೃತ ದುರ್ದೈವಿ.

ಕಳೆದ ಮೂರು ದಿನಗಳಿಂದ ಸಾಯಿಬಣ್ಣ ಸೇರಿ ಅವರ ಇಬ್ಬರು ಪುತ್ರಿಯರಿಗೂ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಡೊಂಗರಗಾಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭೀಮಬಾಯಿ, ಜಗದೇವಿ ಚೇತರಿಸಿಕೊಂಡು ಮನೆಗೆ ವಾಪಸ್‌ ಆಗಿದ್ದರು. ಆದರೆ, ಸಾಯಿಬಣ್ಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಲುಷಿತ ನೀರು ಕುಡಿದಿದ್ದೇ ಸಾಯಿಬಣ್ಣ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರಾಯಚೂರು, ಬಳ್ಳಾರಿಯಲ್ಲೂ ಆಗಿತ್ತು ಸಾವು-ನೋವು

ಜುಲೈ 4ರಂದು ರಾಯಚೂರಿನ ವಲ್ಕಂದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 8 ಮಂದಿ ಮೃತಪಟ್ಟಿದ್ದರು. ಹೊಳೆ ನೀರು ಕುಡಿದ ಪರಿಣಾಮ ಗ್ರಾಮಸ್ಥರಲ್ಲಿ ವಾಂತಿ-ಭೇದಿ ಶುರುವಾಗಿತ್ತು. ಮೊದಲ ದಿನ ಜೂಕೂರು ಗ್ರಾಮದಲ್ಲಿ 9 ಮಂದಿ ಹಾಗೂ ವಲ್ಕಂದಿನ್ನಿ ಗ್ರಾಮದಲ್ಲಿ 7 ಮಂದಿ ಅಸ್ವಸ್ಥಗೊಂಡಿದ್ದರು. ಬಳಿಕ ವಲ್ಕಂದಿನ್ನಿಯಲ್ಲಿ 24, ಜೂಕೂರು ಗ್ರಾಮದಲ್ಲಿ 9 ಮಂದಿಯ ಆರೋಗ್ಯ ಹದಗೆಟ್ಟಿತ್ತು.

ರಾಯಚೂರು ಪ್ರಕರಣ ಮರೆಯಾಗುವ ಮುನ್ನವೇ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಸುಮಾರು 20ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ಬಳಲಿದ್ದರು. ಕಲುಷಿತ ನೀರು ಸೇವನೆಯ ಪರಿಣಾಮ ಗ್ರಾಮದ ಜನರಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಗೊಂಡಿತ್ತು.

ಇದನ್ನೂ ಓದಿ | ರಾಯಚೂರಿನ ನಂತರ ಬಳ್ಳಾರಿಯಲ್ಲಿ ಆತಂಕ: ಕಲುಷಿತ ನೀರು ಸೇವನೆಯಿಂದ ಓರ್ವ ಬಾಲಕಿ ಸಾವು, 20 ಮಂದಿ ಅಸ್ವಸ್ಥ

Exit mobile version