ವಿಜಯನಗರ: ಸ್ಥಳೀಯಾಡಳಿತದಿಂದ ಸರಬರಾಜಾಗುವ ನೀರು ಕುಡಿದು (Water Contamination) ಒಬ್ಬ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಕಲುಷಿತ ನೀರಿನಿಂದಾಗಿ ೫೦ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯ ನಗರ ಜಿಲ್ಲೆಯ ಹೊಸಪೇಟೆಯ ರಾಣಿಪೇಟೆ, ಚಲುವಾದಿಕೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಣಿಪೇಟೆಯ ನಿವಾಸಿ ಲಕ್ಷ್ಮೀ (55) ಎಂಬವರು ಮೃತ ಮಹಿಳೆ.
ಹೊಸಪೇಟೆಯಲ್ಲಿರುವ ಸಚಿವ ಆನಂದ್ ಸಿಂಗ್ ಕಚೇರಿ ಹಿಂಭಾಗದಲ್ಲಿಯೇ ಈ ಘಟನೆ ನಡೆದಿದೆ. ಇಲ್ಲಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಕೆ ನಡೆಯುತ್ತಿದ್ದು, ಇದು ಕಲುಷಿತಗೊಂಡಿದ್ದರಿಂದ ಪ್ರಾಣಕ್ಕೇ ಎರವಾಗಿದೆ ಎಂದು ತಿಳಿದುಬಂದಿದೆ. ಮಹಿಳೆ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರೂ ಬದುಕುಳಿಯಲಿಲ್ಲ.
ಪ್ರದೇಶದಲ್ಲಿ ಇನ್ನೂ ಹಲವರಿಗೆ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದ್ದು, ಅದಕ್ಕೆ ಕಲುಷಿತ ನೀರೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ಸ್ಪಷ್ಟಗೊಂಡಿದೆ. ಅಸ್ವಸ್ಥರಿಗೆ ಕೆಲವರಿಗೆ ಸರ್ಕಾರಿ, ಇನ್ನು ಕೆಲವರಿಗೆ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಅಸ್ವಸ್ಥರಾಗಿರುವವರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಈ ಭಾಗದಲ್ಲಿ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದ, ಈ ವೇಳೆ ನೀರು ಕಲುಷಿತಗೊಂಡಿರುವ ಅನುಮಾನವಿದೆ.
ಇದನ್ನೂ ಓದಿ | Drowned in water | ಕೆರೆಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ವಿದ್ಯಾರ್ಥಿ ದುರ್ಮರಣ; ಮುಗಿಲು ಮುಟ್ಟಿದ ಆಕ್ರಂದನ