Site icon Vistara News

Corruption Charge | ಹೆಸ್ಕಾಂನಲ್ಲಿ 25% ಕಮಿಷನ್‌ ಬೇಡಿಕೆ: ಗುತ್ತಿಗೆದಾರರ ಸಂಘದಿಂದ ಗಂಭೀರ ಆರೋಪ

HESCOM

ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಮಂಡಳಿ (ಹೆಸ್ಕಾಂ) ಅಧಿಕಾರಿಗಳ ವಿರುದ್ಧ ಕಮಿಷನ್‌ ಆರೋಪ ಕೇಳಿಬಂದಿದೆ. ಯಾವುದೇ ಗುತ್ತಿಗೆ ಪಡೆಯಬೇಕಾದರೆ ಶೇಕಡಾ ೨೫ ಕಮಿಷನ್‌ ನೀಡಬೇಕು ಎಂದು ಅನುಮತಿ ಪಡೆದ ರಾಜ್ಯ ಗುತ್ತಿಗೆದಾರರ ಸಂಘದಿಂದ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಸರಕಾರ ಮತ್ತು ಹೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದೆ.

ಆರೋಪವೇನು?
ಹೆಸ್ಕಾಂ ಎಂ.ಡಿ ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲಾಗಿದೆ. ಹೆಸ್ಕಾಂನಲ್ಲಿ ೪೭೨ ಕೋಟಿ ರೂ. ಟೆಂಡರ್‌ ನೀಡಲಾಗಿದೆ. ಇದನ್ನು ಶೇ. ೨೫ ಲಂಚ ಪಡೆದು ಹೊರ ರಾಜ್ಯದ ಗುತ್ತಿಗೆದಾರರಿಗೆ ನೀಡಲಾಗಿದೆ ಎನ್ನುವುದು ಅವರ ಪ್ರಧಾನ ಆರೋಪ.

ರಾಜ್ಯದಲ್ಲೇ ಟೆಂಡರ್‌ ಆಗುತ್ತಿದ್ದರೆ ಸುಮಾರು 3000 ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿತ್ತು. ಆದರೆ, ಕಮಿಷನ್ ಆಸೆಗೆ ಕೇವಲ 39 ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಅವೈಜ್ಞಾನಿಕ ಡಿಪಿಆರ್ ಸಿದ್ಧಪಡಿಸಿ ತರಾತುರಿಯಲ್ಲಿ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಗುತ್ತಿಗೆದಾರರು, ಇಂಧನ ಸಚಿವರು, ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಅನಧಿಕೃತ ಟೆಂಡರ್ ಹಿಂಪಡೆಯದಿದ್ದರೆ ಪ್ರಧಾನಿ ಕಚೇರಿ ಕದ ತಟ್ಟುವುದಾಗಿ ಅನುಮತಿ ಪಡೆದ ಗುತ್ತಿಗೆದಾರರ ರಾಜ್ಯ ಸಂಘಟನೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ | 30-40% ಲಂಚಕ್ಕೆ ಬೇಡಿಕೆ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗುತ್ತಿಗೆದಾರ

Exit mobile version