Site icon Vistara News

Conversion allegation | ಮತಾಂತರಕ್ಕೆ ಪ್ರಯತ್ನಿಸುತ್ತಿದ್ದ ಸರಕಾರಿ ನೌಕರನ ಬಂಧನ: ಮಕ್ಕಳಿಗೆ ಪುಸ್ತಕ ಹಂಚುತ್ತಿದ್ದ!

conversion

ಮಡಿಕೇರಿ: ನಗರದ ಜಿ.ಟಿ ವೃತ್ತದ ಬಳಿ ಶಾಲಾ ಮಕ್ಕಳಿಗೆ ʻಬೆಳಕುʼ ಎಂಬ ಶೀರ್ಷಿಕೆಯ ಪುಸ್ತಕವನ್ನು ಬಲವಂತವಾಗಿ ಹಾಗು ಉಚಿತವಾಗಿ ಹಂಚುತ್ತಿದ್ದ ಮಡಿಕೇರಿಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನೌಕರನಾಗಿರುವ ನಿಶಾಂತ್ ಎಂಬಾತನನ್ನು ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ. ಇದು ಕ್ರಿಶ್ಚಿಯನ್‌ ಧರ್ಮದ ಪ್ರಚಾರಕ್ಕೆ ಸಂಬಂಧಿಸಿದ ಪುಸ್ತಕ ಎನ್ನಲಾಗಿದ್ದು, ಮತಾಂತರ ಮಾಡುವ ಉದ್ದೇಶದಿಂದ (Conversion allegation) ಅದನ್ನು ಹಂಚಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಶನಿವಾರ ಸಂಜೆ ವೇಳೆಗೆ ನಿಶಾಂತ್ ಎಂಬಾತ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಸರಕಾರಿ ಆಸ್ಪತ್ರೆಗೆ ಹೊಂದಿಕೊಂಡಿರುವ ಮೈಸೂರು ರಸ್ತೆಯಲ್ಲಿರು ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳಿಗೆ ಆತನ ಬಳಿಯಿದ್ದ ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದ.

ಆ ವೇಳೆ ಅಲ್ಲೇ ಹಾದುಹೋಗುತ್ತಿದ್ದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಚಾರ ಪ್ರಮುಖ್ ಕೆ.ಟಿ ಕುಮಾರ್ ಹಾಗೂ ಸತ್ಯ ಅವರಿಗೆ ಸ್ನೇಹಿತರು ಪುಸ್ತಕ ಹಂಚುವುದನ್ನು ಕಂಡಿತು. ಅಲ್ಲೇ ಆತನನ್ನು ಪ್ರಶ್ನಿಸಿ ಬಳಿಕ ಮಕ್ಕಳ ಬಳಿಯಿದ್ದ ಪುಸ್ತಕವನ್ನು ಹಿಂಪಡೆದು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ನಿಶಾಂತ್‌ನ ಗುರುತುಚೀಟಿ

ಈ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಂತರಗೊಂಡಿದ್ದ ಎನ್ನಲಾಗಿರುವ ನಿಶಾಂತ್ ಮತ ಪ್ರಚಾರಕನಾಗಿ ಜಿಲ್ಲೆಯ ಎಲ್ಲಾ ಭಾಗಕ್ಕೂ ತೆರಳುತ್ತಿದ್ದ ಎನ್ನಲಾಗಿದೆ. ಈತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಫಸ್ಟ್ ಡಿವಿಶನ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ನಿಶಾಂತನ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Religious conversion | ಹಿಂದು ಧರ್ಮದಲ್ಲಿ ಮತಾಂತರ ಹೆಚ್ಚಾಗಲು ನಾವೇ ಕಾರಣ ಎಂದ ವಿನಯ ಗುರೂಜಿ

Exit mobile version