Site icon Vistara News

Conversion at Kodagu | ಸಂಕ್ರಾಂತಿ ಎಳ್ಳು ಬೆಲ್ಲ ಹಂಚಲು ಹಾಡಿಗೆ ಹೋದಾಗ ಬಯಲಾಯ್ತು ಮತಾಂತರ ಜಾಲ, ಐವರು ಪೊಲೀಸರ ಕೈಗೆ

Conversion

ಮಡಿಕೇರಿ: ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಜರಂಗ ದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ರೇಷ್ಮೆ ಹಡ್ಲು ಹಾಡಿಯಲ್ಲಿ (Conversion at Kodagu) ಈ ಘಟನೆ ನಡೆದಿದೆ. ಐವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಬಜರಂಗ ದಳದ ಕೆಲವು ಯುವಕರ ತಂಡ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹಾಡಿಯಲ್ಲಿ ಇರುವ ಆದಿವಾಸಿಗಳಿಗೆ ಎಳ್ಳು ಬೆಲ್ಲ ಹಂಚಲು ಹೋಗಿತ್ತು. ಈ ಸಂದರ್ಭದಲ್ಲಿ ಕೆಲವು ಕ್ರಿಶ್ಚಿಯನ್‌ ಕಾರ್ಯಕರ್ತರು ಹಾಡಿಯ ಜನರನ್ನು ಒಂದೇ ಕಡೆ ಕುರಿಸಿಕೊಂಡು ಬೈಬಲ್ ಬೋಧನೆ ಮಾಡುತ್ತಿದ್ದರು. ಇದನ್ನು ಕಂಡು ಕೆರಳಿದ ಯುವಕರು ಆವರನ್ನು ತರಾಟೆಗೆ ತೆಗೆದುಕೊಂಡರು.

ಈ ನಡುವೆ ತಿಳಿದುಬಂದ ಮತ್ತೊಂದು ವಿಷಯವೇನೆಂದರೆ, ಈ ವ್ಯಕ್ತಿಗಳು ಪ್ರತಿ ಭಾನುವಾರ ಹಾಡಿಗಳಿಗೆ ಬಂದು ಬೈಬಲ್ ಬೋಧನೆ ಮಾಡುತ್ತಿದ್ದಾರೆ. ಹಾಡಿಯಲ್ಲಿ ಸುಮಾರು 500 ಕುಟುಂಬಗಳಲ್ಲಿ ಈಗಾಗಲೇ 250 ಮಂದಿಯನ್ನು ಮತಾಂತರ ಮಾಡಲಾಗಿದೆ ಎಂದು ಭಜರಂಗದಳದ ಯುವಕರು ಅರೋಪಿದ್ದಾರೆ.

ಮತಾಂತರ ಯತ್ನ ನಡೆಯುತ್ತದೆ ಎಂದು ಆರೋಪಿಸಲಾದ ಮನೆಯೊಳಗೆ

ಹಾಡಿಯಲ್ಲಿ ಪ್ರತಿ ಆದಿವಾಸಿಗಳಿಗೂ ಬೈಬಲ್ ಪುಸ್ತಕವನ್ನು ಹಂಚಿ ಮುಗ್ಧ ಜನರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ರೀತಿ ಮತಪ್ರಚಾರಕ್ಕೆ ಬಂದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡ ಯುವಕರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಅಗಿದೆ.

ಇದನ್ನೂ ಓದಿ | Forced Conversion | ಬಲವಂತದ ಮತಾಂತರ ದೇಶಕ್ಕೆ ಅಪಾಯ, ಇದಕ್ಕೆ ರಾಜಕೀಯ ಬಣ್ಣ ಬೇಡ: ಸುಪ್ರೀಂ ಕೋರ್ಟ್

Exit mobile version