ಬೆಂಗಳೂರು: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ (christmas and New year) ಶಾಲೆಗಳಿಗೆ ರಜೆ ನೀಡಲಾಗಿದೆ, ಟೆಕ್ಕಿಗಳಿಗೆ ವರ್ಷಾಂತ್ಯದ ರಜೆ ಇದೆ (Year end Holiday). ಹೀಗಾಗಿ ಬೆಂಗಳೂರಿನಲ್ಲಿರುವ ಬಹುತೇಕರು ಒಂದೋ ಟೂರ್ (Tour plan), ಇಲ್ಲವೇ ಊರಿಗೆ ಹೋಗುವ ಪ್ಲ್ಯಾನ್ ಹಾಕಿದ್ದಾರೆ. ಹೀಗಾಗಿ ಬಸ್‌ಗಳೆಲ್ಲ ಹೌಸ್ ಫುಲ್ ಆಗಿದೆ. ಖಾಸಗಿ ಬಸ್‌ಗಳಂತೂ ನಾಲ್ಕೈದು ಪಟ್ಟು ಹೆಚ್ಚು ದರ ವಸೂಲಿ ಮಾಡಿದರೂ ಟಿಕೆಟ್ ಸಿಗುತ್ತಿಲ್ಲ. ಇಷ್ಟೊಂದು ದೊಡ್ಡ ಮಟ್ಟದ ವಲಸೆ, ಪ್ರವಾಸ ಕೋವಿಡ್ ಕಾಲದಲ್ಲಿ (Coronavirus news) ಅಪಾಯಕಾರಿಯಾಗಿ ಪರಿಣಮಿಸುತ್ತದಾ ಎಂಬ ಆತಂಕ ಎದುರಾಗಿದೆ.
ಒಂದು ಕಡೆ ಜನರು ತಮ್ಮ ಊರುಗಳತ್ತ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗ ಹೆಚ್ಚು ಹೆಚ್ಚು ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನರು ಊರುಗಳತ್ತ ಹೋಗುವುದರಿಂದ ಅಲ್ಲಿಗೂ ಅದು ಹಬ್ಬಬಹುದು ಎಂಬ ಆತಂಕ ಕಾಡುತ್ತಿದೆ.
ಅದಕ್ಕಿಂತಲೂ ಹೆಚ್ಚು ಆತಂಕವಿರುವುದು ಜನರ ಹೊರ ರಾಜ್ಯ ಪ್ರವಾಸಗಳಿಂದ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಹೆಚ್ಚಿನವರು ಹೈರಿಸ್ಕ್ ರಾಜ್ಯಗಳೆಂದೇ ಗುರುತಿಸಲಾದ ಗೋವಾ, ಕೇರಳ, ಮಹಾರಾಷ್ಟ್ರದತ್ತ ಜನರು ಪ್ರವಾಸ ಹೊರಟಿರುವುದು. ಆನ್ ಲೈನ್ ನಲ್ಲಿ ಈ ಮೂರು ರಾಜ್ಯಗಳಿಗೆ ಭರ್ಜರಿಯಾಗಿಬಸ್ ಟಿಕೆಟ್ ಗಳು ಬುಕ್ ಆಗಿವೆ ಹಲವರು ರೈಲು ಮತ್ತು ವಿಮಾನದ ಟಿಕೆಟ್ ಕೂಡಾ ಬುಕ್ ಮಾಡಿದ್ದಾರೆ.
ಖಾಸಗಿ ಬಸ್ ಹಾಗೂ KSRTC ಸೇರಿದಂತೆ ಮೂರು ರಾಜ್ಯಗಳಿಗೆ ಬೆಂಗಳೂರಿನಿಂದ 400ಕ್ಕೂ ಅಧಿಕ ಬಸ್ ಗಳು ಓಡಾಟ ಪ್ರತಿದಿನ ಓಡಾಟ ನಡೆಸುತ್ತಿವೆ. ಇದೀಗ ಸಾಲು ಸಾಲು ರಜೆ ಹಿನ್ನೆಲೆ ಖಾಸಗಿ ಬಸ್ ಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಮೂರು ರಾಜ್ಯಗಳಿಗೆ ಈಗಾಗಲೇ 10 ಸಾವಿರಕ್ಕೂ ಹೆಚ್ಚಿನ ಟಿಕೆಟ್ ಬುಕ್ ಆಗಿರುವುದು ಕಂಡುಬಂದಿದೆ.
ಗೋವಾ, ಕೇರಳ ಹಾಗೂ ಮಹಾರಾಷ್ಟದಲ್ಲಿ ಉಪತಳಿ JN. 1 ಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ. ಕೊರೊನಾ ಆತಂಕ ಹೆಚ್ಚಿರುವ 3 ರಾಜ್ಯದ ಕಡೆ ಪ್ರಯಾಣಿಸುವುದರಿಂದ ಅಪಾಯವಾಗಬಹುದು ಎಂಬ ಆತಂಕವಿದೆ.
ಇನ್ನು ಗೋವಾ, ಕೇರಳ ಹಾಗೂ ಮಹಾರಾಷ್ಟದ ವಲಸಿಗರು ತಮ್ಮೂರಿನತ್ತ ಪ್ರಯಾಣ ಮಾಡುತ್ತಿರುವುದು ಇನ್ನೊಂದು ಆತಂಕದ ಸಂಗತಿ. ಸಾಲು ರಜೆ ಇರುವ ಕಾರಣ ಕೆಲವರು ಶಬರಿಮಲೆ ಯಾತ್ರೆಗೂ ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Coronavirus News : ಜನವರಿಯಲ್ಲಿ ಕೊರೊನಾ ಸ್ಫೋಟ ಸಾಧ್ಯತೆ; 4 ಚಿತಾಗಾರ ಮೀಸಲು!
ಯಾವ ರಾಜ್ಯಕ್ಕೆ ಎಷ್ಟೆಷ್ಟು ಟಿಕೆಟ್ ಬುಕ್?
- ಬೆಂಗಳೂರು to ಗೋವಾ
ಬೆಂಗಳೂರಿನಿಂದ ಗೋವಾಕ್ಕೆ ಪ್ರತಿದಿನ 150ಕ್ಕೂ ಅಧಿಕ ಬಸ್ ಸೇವೆ
ಖಾಸಗಿ ಬಸ್ ಹಾಗೂ ಕೆಎಸ್ ಆರ್.ಟಿಸಿ ಬಸ್ ಸೀಟ್ ಬುಕ್ಕಿಂಗ್ ಫುಲ್
ಸುಮಾರು 3000ಕ್ಕೂ ಅಧಿಕ ಟಿಕೆಟ್ ಈಗಾಗಲೇ ಬುಕ್ - ಬೆಂಗಳೂರು to ಕೇರಳ
ಬೆಂಗಳೂರು ಕೇರಳಕ್ಕೆ ಅಂದಾಜು 200ಕ್ಕೂ ಅಧಿಕ ಬಸ್ ಸೇವೆ
ಇವತ್ತು ಸುಮಾರು 4000 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್
ಇಯರ್ ಎಂಡ್ ಜೊತೆಗೆ ಶಬರಿಮಲೆ ದರ್ಶನದಿಂದ ಹೆಚ್ಚಿನ ಟಿಕೆಟ್ ಬುಕ್ - ಬೆಂಗಳೂರು to ಮಹಾರಾಷ್ಟ್ರ
ಬೆಂಗಳೂರು ಮಹಾರಾಷ್ಟ್ರಕ್ಕೆ ಇವತ್ತು 150ಕ್ಕೂ ಅಧಿಕ ಬಸ್ ಸೇವೆ
ಈಗಾಗಲೇ ಸುಮಾರು 3,500ಕ್ಕೂ ಅಧಿಕ ಟಿಕೆಟ್ ಅಡ್ವಾನ್ಸ್ ಬುಕ್