ವಿಜಯಪುರ: ವಿಜಯಪುರ ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೇಗೇರಿದ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ (Corporation Election) ಅತಂತ್ರ ಫಲಿತಾಂಶ ಲಭ್ಯವಾಗಿದ್ದರೂ, ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತಗೊಂಡಿದೆ. ಅಧಿಕಾರ ಹಿಡಿಯಲು ಬಹುಮತಕ್ಕೆ ಒಟ್ಟು ೧೮ ಸ್ಥಾನಗಳು ಬೇಕಿದ್ದು, ೩೫ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ೧೭ ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ, ಇಲ್ಲಿ ವಿಶೇಷವೆಂದರೆ ಮೊದಲ ಬಾರಿಗೆ ಕೇವಲ ನಾಲ್ಕು ಸ್ಥಾನಗಳಿಗೆ ಚುನಾವಣೆ ಸ್ಪರ್ಧಿಸಿದ್ದ ಎಐಎಂಐಎಂ ೨ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತನ್ನ ಖಾತೆ ತೆರೆದಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಪ್ರಥಮ ಚುನಾವಣೆಯಲ್ಲಿಯೇ ಅಧಿಕಾರದ ಗದ್ದುಗೆ ಹಿಡಿಯಲು ಸಮೀಪದಲ್ಲಿರುವ ಬಿಜೆಪಿಗೆ ಇನ್ನೊಂದು ಸ್ಥಾನದ ಕೊರತೆ ಇದೆ. ಇನ್ನು ಐವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರಿಂದ ಸಲೀಸಾಗಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ಬಿಜೆಪಿ ವಶವಾಗುವುದರಲ್ಲಿ ಸಂಶಯವಿಲ್ಲ ಎನ್ನುವಂತಾಗಿದೆ. ಜತೆಗೆ ಬಿಜೆಪಿಯಿಂದ ಬಂಡೆದ್ದಿದ್ದ ಕೆಲವರಿಗೆ ಭಾರಿ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ | Kollegala Election | ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಕಾಂಗ್ರೆಸ್, ಬಿಎಸ್‌ಪಿಗೆ ಮುಖಭಂಗ
ಫಲಿತಾಂಶ ವಿವರ- ಹೊಸದಾಗಿ ಖಾತೆ ತೆರೆದ ಎಂಐಎಂ
ಬಿಜೆಪಿ – 17
ಕಾಂಗ್ರೆಸ್ – 10
ಜೆಡಿಎಸ್ 01
ಎಐಎಂಐಎಂ 02
ಪಕ್ಷೇತರ – 05
ವಿಜಯಪುರ ನಗರದ ದರ್ಬಾರ್ ಕಾಲೇಜಿನಲ್ಲಿ ಜಿಲ್ಲಾ ಚುನಾವಣಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಸೋಮವಾರ (ಅ. ೩೧) ಮತ ಎಣಿಕೆ ನಡೆದಿದ್ದು, ಕ್ಷಣ ಕ್ಷಣವೂ ಕುತೂಹಲ ಮೂಡಿಸಿತ್ತು. ಗೆದ್ದ ಅಭ್ಯರ್ಥಿಗಳು ಮತಎಣಿಕೆ ಕೇಂದ್ರದ ಮುಂದೆಯೇ ಸಂಭ್ರಮಾಚರಿಸಿದ್ದಾರೆ.
ವಾರ್ಡ್‌ವಾರು ಗೆಲುವಿನ ಪಟ್ಟಿ
3, 5, 6, 7, 9, 10, 11, 12, 13, 14, 15, 21, 22, 26, 29, 32, 35 ಸೇರಿ ಒಟ್ಟು 17 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ಕಾಂಗ್ರೆಸ್ – 1, 16, 18, 20, 23, 27, 30, 31, 33, 34 ರಲ್ಲಿ ವಿಜಯ ಸಾಧಿಸಿದೆ. ಪಕ್ಷೇತರರು- 2, 8, 17, 19, 24ರಲ್ಲಿ ಜಯ ಸಾಧಿಸಿದರೆ, ಎಐಎಂಐಎಂ ಪಕ್ಷವು 28 ಮತ್ತು 25ನೇ ವಾರ್ಡ್‌ನಲ್ಲಿ ಗೆಲುವು ಕಂಡಿದೆ. ಜೆಡಿಎಸ್ ೧ ವಾರ್ಡ್‌ನಲ್ಲಿ ಗೆಲುವನ್ನು ದಾಖಲಿಸಿದೆ.
ಗೆದ್ದ ಅಭ್ಯರ್ಥಿಗಳ ವಿವರ
ವಾರ್ಡ್ 01 – ಕಾಂಗ್ರೆಸ್ – ಆಸಿಫ್ ಇಕ್ಬಾಲ್ ರಾಜೇಸಾಬ್ ಶಾನವಾಲೆ
ವಾರ್ಡ್ ನಂ 2 – ಪಕ್ಷೇತರ – ಅಲ್ತಾಫ್ ಹಮೀದಸಾಬ್ ಇಟಗಿ
ವಾರ್ಡ್ ನಂ 3 – ಬಿಜೆಪಿ – ಸುನಿತಾ ಮಹೇಶ ಒಡೆಯರ್
ವಾರ್ಡ್ ನಂ 4 – ಜೆಡಿಎಸ್ – ರಾಜು ಅನದು ಚೌಹಾಣ್
ವಾರ್ಡ್ ನಂ 5 – ಬಿಜೆಪಿ – ಮಡಿವಾಳಪ್ಪ ಸಿದ್ರಾಮಪ್ಪ ಕರಡಿ
ವಾರ್ಡ್ ನಂ 06 – ಬಿಜೆಪಿ – ಮಳುಗೌಡ ಬಾಬಾಗೌಡ ಪಾಟೀಲ್
ವಾರ್ಡ್ ನಂ 07 – ಬಿಜೆಪಿ – ರಾಹುಲ್ ರಮೇಶ ಜಾಧವ್
ವಾರ್ಡ್ ನಂ 08 – ಪಕ್ಷೇತರ – ಅಶೋಕ ನಿಂಗಪ್ಪ ನ್ಯಾಮಗೊಂಡ
ವಾರ್ಡ್ ನಂ 09 – ಬಿಜೆಪಿ – ರಾಜಶೇಖರ ಮಹಾಲಿಂಗಯ್ಯ ಮಗಿಮಠ
ವಾರ್ಡ್ ನಂ 10 – ಬಿಜೆಪಿ – ಸುನಂದಾ ಸಂಗೊಂಡಪ್ಪ ಕುಮಶಿ
ವಾರ್ಡ್ ನಂ 11 – ಬಿಜೆಪಿ – ವಿಠ್ಠಲ ಹೂಲೆಪ್ಪ ಹೊಸಪೇಟ್
ವಾರ್ಡ್ ನಂ 12 – ಬಿಜೆಪಿ – ರಶ್ಮಿ ಬಸವರಾಜ ಕೋರಿ
ವಾರ್ಡ್ ನಂ 13 – ಬಿಜೆಪಿ – ರಾಧಾಬಾಯಿ ಮೋಹನ್ ದೇವಗಿರಿ.
ವಾರ್ಡ್ ನಂ 14 – ಬಿಜೆಪಿ – ಜವಾಹರ ಹನಮಂತ ಗೋಸಾವಿ
ವಾರ್ಡ್ ನಂ 15 – ಬಿಜೆಪಿ – ಸ್ವಪ್ನಾ ಸುರೇಶ ಕಣಮುಚನಾಳ
ವಾರ್ಡ್ ನಂ 16 – ಕಾಂಗ್ರೆಸ್ – ಅಂಜುಮಾರಾ ಶಪ್ಪು ಮನಗೂಳಿ
ವಾರ್ಡ್ ನಂ 17 – ಪಕ್ಷೇತರ – ಸುಮಿತ್ರ ರಾಜು ಜಾಧವ
ವಾರ್ಡ್ ನಂ 18 – ಕಾಂಗ್ರೆಸ್ – ದಿನೇಶ್ ಎಸ್ ಹಳ್ಳಿ
ವಾರ್ಡ್ ನಂ 19 – ಪಕ್ಷೇತರ – ನಿಶಾತ್ ಹೈದರಾಲಿ ನದಾಫ್
ವಾರ್ಡ್ ನಂ 20 – ಕಾಂಗ್ರೆಸ್ – ಶಾಹೀನ್ ಬಾಂಗಿ
ವಾರ್ಡ್ ನಂ 21 – ಬಿಜೆಪಿ – ಮಲ್ಲಿಕಾರ್ಜುನ ಉರ್ಪ್ ಕುಮಾರ ಮಹಾದೇವಪ್ಪ ಗಡಗಿ
ವಾರ್ಡ್ ನಂ 22 – ಬಿಜೆಪಿ – ಪ್ರೇಮಾನಂದ ಮಲ್ಲಪ್ಪ ಬಿರಾದಾರ
ವಾರ್ಡ್ ನಂ 23 – ಕಾಂಗ್ರೆಸ್ – ಮಹಮ್ಮದ್ ಇರ್ಪಾನ್ ಆರ್ ನಾಡೇವಾಲಾ
ವಾರ್ಡ್ ನಂ 24 – ಪಕ್ಷೇತರ – ವಿಮಲಾ ರಫೀಕ್ಅಹ್ಮದ ಕಾಣೆ
ವಾರ್ಡ್ ನಂ 25 – ಎಐಎಂಐಎಮ್ – ಸೂಫಿಯಾ ಅಬ್ದುಲ್ ರಹಮಾನ ವಾಟಿ
ವಾರ್ಡ್ ನಂ 26 – ಬಿಜೆಪಿ – ಕಿರಣ ಪಾಟೀಲ್
ವಾರ್ಡ್ ನಂ 27 – ಕಾಂಗ್ರೆಸ್ – ಶಾಹಿಸ್ಥಾ ಖುರೇಶಿ
ವಾರ್ಡ್ ನಂ 28 – ಎಐಎಂಐಎಮ್ – ರಿಜ್ವಾನಾಬಾನು ಇನಾಮ್‌ದಾರ್
ವಾರ್ಡ್ ನಂ 29 – ಬಿಜೆಪಿ – ವಿಜಯಕುಮಾರ್ ಆರ್. ಬಿರಾದಾರ್
ವಾರ್ಡ್ ನಂ 30 – ಕಾಂಗ್ರೆಸ್ – ಅಪ್ಪು ಶಿವಪ್ಪ ಪೂಜಾರಿ
ವಾರ್ಡ್ ನಂ 31 – ಕಾಂಗ್ರೆಸ್ – ಸಿದರಾ ಬಂದೇನವಾಜ್ ಬೀಳಗಿ
ವಾರ್ಡ್ ನಂ 32 – ಬಿಜೆಪಿ – ಶಿವರುದ್ರ ಶಿವಪುತ್ರ ಬಾಗಲಕೋಟ
ವಾರ್ಡ್ ನಂ 33 – ಕಾಂಗ್ರೆಸ್ – ಆರತಿ ವಿಠ್ಠಲ ಶಹಾಪೂರ
ವಾರ್ಡ್ ನಂ 34 – ಕಾಂಗ್ರೆಸ್ – ಮಹೆಜಬೀನ್ ಅಬ್ದುಲ್ ರಜಾಕ್ ಹೊರ್ತಿ
ವಾರ್ಡ್ ನಂ 35 – ಬಿಜೆಪಿ – ರಾಜಶೇಖರ ಶಂಕರಪ್ಪ ಕುರಿಯವರ
ಇದನ್ನೂ ಓದಿ | ಸಿದ್ದರಾಮಯ್ಯ ಅವರು ಈ ಸಾರಿ ಗೆಲ್ಲೋದು ಬಿಡಿ, ಟಿಕೆಟ್ ಸಿಗೋದೇ ಡೌಟು ಎಂದ ನಳಿನ್ ಕುಮಾರ್ ಕಟೀಲ್!
ಯತ್ನಾಳ್‌ಗೆ ಸಿಎಂ ಅಭಿನಂದನೆ
ಇನ್ನು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುತ್ತಿದ್ದಂತೆಯೇ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ದೂರವಾಣಿ ಕರೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ತಿಳಿಸಿದ್ದಾರೆ.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿದ್ದೀರಿ. ನೀವು ನಗರ ಶಾಸಕರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳೇ ಇಂದಿನ ಗೆಲುವಿಗೆ ಸಾಕ್ಷಿಯಾಗಿದೆ. ಮೇಯರ್ ಹಾಗೂ ಉಪಮೇಯರ್ ಬಿಜೆಪಿಯವರೇ ಆಗಬೇಕು ಎಂದು ಹೇಳಿದ್ದಾರೆನ್ನಲಾಗಿದೆ. ನಗರದ ಅಭಿವೃದ್ಧಿಗೆ ಯಾವುದೇ ರೀತಿಯ ಯೋಜನೆಗಳನ್ನು ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಪಾಲಿಕೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯತ್ನಾಳ ಅವರ ಮಾತಿಗೆ ಮನ್ನಣೆ ನೀಡಬೇಕು ಎಂದು ಹೇಳಿದ್ದೆ, ನಿಮ್ಮ ನಿರ್ಧಾರವನ್ನು ಗೌರವಿಸಿ ಎಂದು ಸೂಚಿಸಿದ್ದೆ. ನೀವು ನನ್ನ ಮಾತನ್ನು ಉಳಿಸಿಕೊಂಡಿದ್ದೀರಿ ಎಂದು ದೂರವಾಣಿಯಲ್ಲಿ ಯತ್ನಾಳ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅತಿ ಹೆಚ್ಚು, ಅತಿ ಕಡಿಮೆ ಅಂತರದ ಗೆಲುವು
ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದಿದ್ದು ವಾರ್ಡ್ ನಂಬರ್ 21ರ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಮಹದೇವಪ್ಪ ಗಡಗಿ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಸಲಿಮ್ ಕಲಾದಗಿ ವಿರುದ್ಧ 1946 ಮತಗಳ ಅಂತರದಿಂದ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ. ಇನ್ನು ಕಡಿಮೆ ಅಂತರದ ಮತಗಳಿಂದ ಗೆದ್ದಿರುವುದು ವಾರ್ಡ್ ನಂಬರ್ 28ರ ಎಐಎಂಐಎಂನ ರಿಜ್ವಾನಾಬಾನು ಇನಾಮದಾರ. ಇವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸಬೀನಾ ಬೀಳಗಿ ವಿರುದ್ಧ ಕೇವಲ 18 ಮತಗಳ ಅಂತರದಿಂದ ಗೆದ್ದಿದ್ದಾರೆ.
ಇದನ್ನೂ ಓದಿ | ʼಯತ್ನಾಳ್ ಬಾಯಲ್ಲಿ ಬರುತ್ತಿರುವುದು B.L. ಸಂತೋಷ್ ಮಾತುʼ: ಬಿಜೆಪಿ ವಿರುದ್ಧ ಕಾಂಗ್ರೆಸ್ ಲೇವಡಿ