Site icon Vistara News

Road accident : ಕೋಲಾರ ಬಳಿ ಭೀಕರ ಅಪಘಾತ: ಕಾರು ರಸ್ತೆಯಿಂದ ಹೊಂಡಕ್ಕೆ ಉರುಳಿ ದಂಪತಿ ಮೃತ್ಯು

Kolara accident

#image_title

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಕ್ರಾಸ್‌ನಲ್ಲಿ ಶುಕ್ರವಾರ ಮುಂಜಾನೆ ಕಾರೊಂದು ಕಂದಕಕ್ಕೆ ಉರುಳಿ (Road accident) ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ (Couple dead). ಆಂಧ್ರ ಪ್ರದೇಶದ ಮದನಪಲ್ಲಿ ಗ್ರಾಮದ ನಿವಾಸಿಗಳಾದ ಮಹಮ್ಮದ್‌ ಶಫಿ (55) ಮತ್ತು ಶಾಮಾ ಶಫಿ (50) ಮೃತಪಟ್ಟವರು.

ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿದ್ದ ಇಟಿಯೂಸ್ ಕಾರು ರಸ್ತೆಯ ಬಲ ಬದಿಯ 20ರಿಂದ 25 ಅಡಿ ಆಳದ ಹಳ್ಳಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ ದಂಪತಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ರಸ್ತೆಯಿಂದ ಉರುಳಿ ಬಿದ್ದ ಕಾರು

ಮಹಮ್ಮದ್‌ ಶಫಿ ಅವರು ಮದನಪಲ್ಲಿಯಲ್ಲಿ ಗುತ್ತಿಗೆದಾರರಾಗಿದ್ದಾರೆ. ಇವರ ಮಗಳು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ಮರಳಿದ್ದರು. ಆಕೆ ಮತ್ತೆ ವಿದೇಶಕ್ಕೆ ಹೊರಟಿದ್ದು ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ವಾಪಸ್‌ ಮನೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಕಾರು (AP- 28 DL -5854) ಲಕ್ಷ್ಮೀಪುರದ ಬಳಿ ಬರುತ್ತಿದ್ದಂತೆಯೇ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ರಾತ್ರಿಯ ನಿದ್ದೆಯ ಜೊಂಪಿನಿಂದ ಈ ರೀತಿ ಆಗಿರಬಹುದು ಎಂದು ಶಂಕಿಸಲಾಗಿದೆ.

ರಸ್ತೆಯಿಂದ ಉರುಳಿ ಬಿದ್ದ ಕಾರು

ಕ್ರೇನ್ ಸಹಾಯದೊಂದಿದೆ ಕಾರು ಮೇಲೆತ್ತಲಾಗಿದ್ದು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಮೃತ ದೇಹಗಳನ್ನು ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಮದನಪಲ್ಲಿಯ ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೊಳಲ್ಕೆರೆ ಚಿತ್ರಹಳ್ಳಿ ಗೇಟ್‌ನಲ್ಲಿ ಕಾರು ಡಿಕ್ಕಿ: ಧರ್ಮಸ್ಥಳ ಸಂಘದ ಉದ್ಯೋಗಿ, ಬೈಕ್ ಸವಾರ ಸಾವು

ಚಿತ್ರದುರ್ಗ: ಕಾರು ಹಾಗೂ ಬೈಕ್ ನಡುವೆ ಭಾರಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ದುರ್ಘಟನೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಸಮೀಪ ನಡೆದಿದೆ.

ಶಿವಗಂಗಾ ಗ್ರಾಮದ 23 ವರ್ಷದ ಆಕಾಶ್ ಮೃತ ದುರ್ದೈವಿ. ಹೊಳಲ್ಕೆರೆ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ತಡರಾತ್ರಿ 12 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಟಿ.ನುಲೇನೂರು ಗೇಟ್ ಸಮೀಪ ಇರುವ ಢಾಬಾಗೆ ಊಟಕ್ಕೆ ತೆರಳಿದ್ದ ಆಕಾಶ್ ಚಿತ್ರಹಳ್ಳಿ ಗೇಟ್ ದಾಟುವ ವೇಳೆ ಚಿತ್ರದುರ್ಗದ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಾರು ಹಾಗೂ ಬೈಕ್ ಸಂಪೂರ್ಣ ಜಖಂ ಆಗಿವೆ. ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ : Road accident : ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Exit mobile version