ಉಡುಪಿ: ಮುರಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ-ಪತ್ನಿ ಮೃತಪಟ್ಟಿರುವ ಘಟನೆ (Electric Shock) ಕುಂದಾಪುರ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆ ಬಳಿ ನಡೆದಿದೆ. ಮಹಾಬಲ ದೇವಾಡಿಗ(55), ಪತ್ನಿ ಲಕ್ಷ್ಮಿ ದೇವಾಡಿಗ(49) ಮೃತರು.
ಮಹಾಬಲ ದೇವಾಡಿಗ ಸುಳ್ಸೆ ಕರಣಿಕರ ಮನೆಯಲ್ಲಿ ದಿನಗೂಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಕಳೆದರೂ ಪತಿ ಮನೆಗೆ ಬಾರದನ್ನು ಗಮನಿಸಿ, ಹುಡುಕಾಟಕ್ಕೆ ಪತ್ನಿ ಹೋಗಿದ್ದರು. ಕರಣಿಕರ ಮನೆಯ ಕಾಲುದಾರಿಯಲ್ಲಿ ವಿದ್ಯುತ್ ತಂತಿ ತಗುಲಿ ಪತಿ ಬಿದ್ದಿರುವುದನ್ನು ಪತ್ನಿ ಗಮನಿಸಿದ್ದಾರೆ. ಈ ವೇಳೆ ಪತಿಯನ್ನು ರಕ್ಷಿಸಲು ತೆರಳಿದ್ದ ಪತ್ನಿ ಲಕ್ಷ್ಮಿ ಕೂಡ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Haveri News: ಮೊಬೈಲ್ ಕದ್ದು ಓಡುತ್ತಿದ್ದವನ ಬೆನ್ನತ್ತಿ ಹಿಡಿದ ಯುವತಿ; ಕಳ್ಳನಿಗೆ ಬಿತ್ತು ಧರ್ಮದೇಟು
ದಂಪತಿ ಇಬ್ಬರು ಮಕ್ಕಳಿದ್ದಾರೆ. ತುಂಡಾಗಿದ್ದ ವಿದ್ಯುತ್ ತಂತಿಯಿಂದ ಅವಘಡ ನಡೆದ ಹಿನ್ನೆಲೆಯಲ್ಲಿ ಮೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದು, ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೋಲಾರದಲ್ಲಿ ತಲ್ವಾರ್ ಮಾದರಿಯ ಹೆಬ್ಬಾಗಿಲು ನಿರ್ಮಾಣ; ಐವರ ವಿರುದ್ಧ ಎಫ್‌ಐಆರ್
ಕೋಲಾರ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ತಲ್ವಾರ್ ಮಾದರಿಯ ಹೆಬ್ಬಾಗಿಲು ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಐದು ಜನರ ಮೇಲೆ ಕೋಲಾರ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಕ್ಲಾಕ್ ಟವರ್ ವೃತ್ತದಲ್ಲಿ ರಾತ್ರೋರಾತ್ರಿ ತಲ್ವಾರ್ ಮಾದರಿಯ ಹೆಬ್ಬಾಗಿಲು ನಿರ್ಮಾಣ ಮಾಡಲಾಗಿತ್ತು. 15 ಅಡಿ ಉದ್ದದ ಹಾಗೂ 200 ಕೆಜಿಯ ಸ್ಟೀಲ್ ಬಳಸಿ ಖಡ್ಗದ ಆಕೃತಿಯನ್ನು ಅಳವಡಿಸಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಅಸ್ಲಾಂಪಾಷಾ, ಮನ್ಸೂರ್ ಆಲಿ, ಚಾಂದ್ ಪಾಷಾ, ಸಾಧಿಕ್ ಪಾಷಾ, ಮಹಮದ್ ಬಿಲಾಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮತೊಂದು ಪ್ರತ್ಯೇಕ ಪ್ರಕರಣ
ಈದ್ ಮಿಲಾದ್ ಹಬ್ಬದ ಮೆರವಣಿಗೆ ವೇಳೆ ಕುದುರೆ ಮೇಲೆ ಬಹಿರಂಗವಾಗಿ ಕತ್ತಿ ಬೀಸಿದ್ದರಿಂದ ಸರ್ಗಿರ್ ಎಂಬಾತನ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.