Site icon Vistara News

Appu ಪ್ರೀತಿ | ಮಗನಿಗೆ ಪುನೀತ್‌ ರಾಜ್‌ ಕುಮಾರ್‌ ಎಂದು ಹೆಸರಿಟ್ಟ ಅಪ್ಪು ಅಭಿಮಾನಿ

puneet name

ಕೊಪ್ಪಳ: ಚಿತ್ರನಟ ಪುನೀತ್‌ ರಾಜ್‌ ಕುಮಾರ್‌ ಅವರು ತೀರಿಕೊಂಡು ೧೦ ತಿಂಗಳುಗಳು ಕಳೆದರೂ ಅವರ ನೆನಪನ್ನು ಯಾರೂ ಮರೆತಿಲ್ಲ. ಅಭಿಮಾನಿಗಳಂತೂ ಈಗಲೂ ಅಪ್ಪು ಸ್ಮರಣೆಯಲ್ಲೇ ದಿನ ಕಳೆಯುತ್ತಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ, ಯಾವುದೇ ಸಮಾರಂಭವಿರಲಿ ಅದನ್ನು ಅಪ್ಪು ಹೆಸರಲ್ಲಿ ನಡೆಸುವುದು, ಅಪ್ಪುವಿನ ಪ್ರೀತಿಯ ಹಾಡನ್ನು ಹಾಡುವುದು ಸಾಮಾನ್ಯವಾಗಿದೆ.

ಈ ನಡುವೆ ಕೊಪ್ಪಳದ ಅಪ್ಪು ಅಭಿಮಾನಿಯೊಬ್ಬರು ತನ್ನ ಮಗನಿಗೆ ಪುನೀತ್‌ ರಾಜ್‌ ಕುಮಾರ್‌ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಕೊಪ್ಪಳ ನಗರ ನಿವಾಸಿಯಾಗಿರುವ ಮಲ್ಲೇಶ್‌ ಮತ್ತು ಸಹನಾ ದಂಪತಿ ಮನೆಯಲ್ಲೇ ಚಂದದ ಕಾರ್ಯಕ್ರಮ ಮಾಡಿ ಪುನೀತ್‌ ಪುನೀತ್‌ರಾಜ್‌ ಎಂದು ಕರೆದು ಮಗುವಿಗೆ ನಾಮಕರಣ ಮಾಡಿದ್ದಾರೆ.

ಮಲ್ಲೇಶ್‌ ಹಾಗೂ ಸಹನಾ ದಂಪತಿಗೆ ಕಳೆದ ಏಪ್ರಿಲ್‌ನಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರಿಗೂ ಪುನೀತ್‌ ಅಂದ್ರೆ ತುಂಬ ಇಷ್ಟ. ಅವರ ಸಿನಿಮಾ ನೋಡುವುದು, ಸಿನಿಮಾಗಳ ಬಗ್ಗೆ ಚರ್ಚೆ ಮಾಡುವುದು, ಒಳ್ಳೆಯತನದ ಬಗ್ಗೆ ಹೇಳಿಕೊಳ್ಳುವುದು ನಡೆದಿತ್ತು. ಇದರ ನಡುವೆ ಇಬ್ಬರಿಗೂ ತಮಗೆ ಪುನೀತ್‌ನಂಥ ಒಳ್ಳೆ ಗುಣದ ಮಗು ಬೇಕು ಎನ್ನುವ ಆಸೆ ಇತ್ತು. ಪುನೀತ್‌ ಮರಣ ಹೊಂದಿದಾಗ ಸಹನಾ ಅವರು ಗರ್ಭಿಣಿಯಾಗಿದ್ದರು. ಆಗ ತುಂಬ ನೋವು ಅನುಭವಿಸಿದ್ದ ದಂಪತಿ ಮಗುವಿನಲ್ಲೇ ಪುನೀತ್‌ನನ್ನು ಕಂಡಿದ್ದಾರೆ. ಈಗ ಮಗುವಿಗೆ ನಾಲ್ಕು ತಿಂಗಳಾದಾಗ ಶಾಸ್ತ್ರೋಕ್ತವಾಗಿ ನಾಮಕರಣವನ್ನೇ ಮಾಡಿದ್ದಾರೆ. ಮಗುವನ್ನು ಪುನೀತ್‌, ಪುನೀತ್‌ ರಾಜ್‌, ಪುನೀತ್‌ ರಾಜ್‌ ಕುಮಾರ್‌ ಮಾತ್ರವಲ್ಲದೆ ಅಪ್ಪು ಎಂದೂ ಪ್ರೀತಿಯಿಂದ ಕರೆದು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ | ನವೆಂಬರ್‌ 1ಕ್ಕೆ ಪುನೀತ್‌ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬೊಮ್ಮಾಯಿ ಘೋಷಣೆ

Exit mobile version