ಬೆಂಗಳೂರು: ವಕೀಲ ಅಮಿತ್ ಕೇಶವಮೂರ್ತಿ ಕೊಲೆ ಪ್ರಕರಣದಲ್ಲಿ (Murder Case) ಪಿಡಿಒ ಶೃತಿ ಗೌಡ ಪತಿ ರಾಜೇಶ್ ಮೇಲಿನ ಆರೋಪ ಸಾಬೀತಾಗಿದ್ದು, ಅವರನ್ನು ಕೊಲೆ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಪತ್ನಿಯ ಪ್ರಿಯತಮನನ್ನು ಪತಿ ಗುಂಡಿಕ್ಕಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಶಿಕ್ಷೆ ಪ್ರಕಟಣೆ ನ.16ಕ್ಕೆ ಕಾಯ್ದಿರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಧೀಶ ಹೊಸಮನಿ ಪುಂಡಲಿಕ ಅವರು ಪ್ರಕರಣದ ವಿಚಾರಣೆ ನಡೆಸಿ, ಪಿಡಿಒ ಶೃತಿ ಗೌಡ ಪತಿ ರಾಜೇಶ್ ಅವರೇ ದೋಷಿ ಎಂದು ಘೋಷಣೆ ಮಾಡಿದ್ದಾರೆ. 2017ರ ಜನವರಿ 13ರಂದು ಹೆಸರುಘಟ್ಟ ಸಮೀಪದ ಆಚಾರ್ಯ ಕಾಲೇಜು ಬಳಿ ಕೊಲೆ ನಡೆದಿತ್ತು. ಪತ್ನಿ ಶೃತಿ ಗೌಡ ಜತೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ಹಿನ್ನೆಲೆಯಲ್ಲಿ ವಕೀಲ ಅಮಿತ್ ಕೇಶವಮೂರ್ತಿಯನ್ನು ಪತಿ ರಾಜೇಶ್ ಕೊಲೆ ಮಾಡಿದ್ದ.
ಇದನ್ನೂ ಓದಿ | Murugha Seer: ಮುರುಘಾ ಶರಣರ ಬಿಡುಗಡೆಗೆ ಕೂಡಿ ಬರದ ಕಾಲ
ಶೃತಿ ಗೌಡ ಜತೆ ಕಾರಿನಲ್ಲಿದ್ದ ವೇಳೆ ಅಮಿತ್ ಕೇಶವ ಮೂರ್ತಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ರಾಜೇಶ್ ಪತ್ನಿ ಶೃತಿಗೌಡ ಪ್ರಿಯಕರನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಸ್ಪತ್ರೆ ಎದುರಿನ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.